ಟೆಸ್ಟ್‌ ಸರಣಿ ಕ್ಲೀನ್ ಸ್ವೀಪ್ ಸನಿಹದಲ್ಲಿ ಭಾರತ

0
5

ರಾಂಚಿ:- ಎರಡೂ ಇನಿಂಗ್ಸ್‌ಗಳಲ್ಲೂ ಬೌಲರ್‌ಗಳ ಶಿಸ್ತಿನ ದಾಳಿಯ ನೆರವಿನಿಂದ ಭಾರತ ತಂಡ ಮೂರನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯದಲ್ಲಿ ಆಫ್ರಿಕಾ ವಿರುದ್ಧ ಗೆಲುವಿನ ಸನಿಹದಲ್ಲಿದೆ. ಮೂರು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಭಾರತ ಕ್ಲೀನ್ ಸ್ವೀಪ್ ಮಾಡಿಕೊಳ್ಳಲು ಇನ್ನೂ ಎರಡೇ ಹೆಜ್ಜೆ ಬಾಕಿ ಇದೆ.
ಇಲ್ಲಿನ ಜೆಎಸ್‌ಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ಎರಡು ವಿಕೆಟ್ ಕಳೆದುಕೊಂಡು 9 ರನ್ ಗಳಿಂದ ಪ್ರಥಮ ಇನಿಂಗ್ಸ್‌ ಮುಂದುವರಿಸಿದ ದಕ್ಷಿಣ ಆಫ್ರಿಕಾ ತಂಡ ಮಧ್ಯಾಹ್ನದ ಭೋಜನ ವಿರಾಮದ ಬಳಿಕ 56.2 ಓವರ್ ಗಳಿಗೆ 162 ರನ್ ಗಳಿಗೆ ಸರ್ವಪತನವಾಯಿತು. ಆ ಮೂಲಕ 335 ರನ್ ಹಿನ್ನಡೆ ಅನುಭವಿಸಿತು. ಇದರ ಫಲವಾಗಿ ದಕ್ಷಿಣ ಆಫ್ರಿಕಾ ಪ್ರಸಕ್ತ ಸರಣಿ ಯಲ್ಲಿ ಎರಡನೇ ಬಾರಿ ಫಾಲೋ ಆನ್‌ಗೆ ಸಿಲುಕಿತು. ಮೂರನೇ ದಿನದಾಟ ಮುಕ್ತಾಯಕ್ಕೆೆ ಫಾಫ್ ಡುಪ್ಲೆಸಿಸ್ ಪಡೆ 46 ಓವರ್‌ಗಳಿಗೆ ಎಂಟು ವಿಕೆಟ್ ನಷ್ಟಕ್ಕೆೆ 132 ರನ್ ಗಳಿಸಿದೆ. ಇನ್ನೂ 203 ರನ್ ಹಿನ್ನಡೆಯಲ್ಲಿದ್ದು, ಕೈಯಲ್ಲಿ ಕೇವಲ ಎರಡು ವಿಕೆಟ್ ಇದೆ.
ಮುಂದುವರಿದ ಹರಿಣಗಳ ಬ್ಯಾಟಿಂಗ್ ವೈಫಲ್ಯ:
ಪ್ರಸಕ್ತ ಸರಣಿಯ ಮೊದಲ ಪಂದ್ಯದ ಪ್ರಥಮ ಇನಿಂಗ್ಸ್‌‌ನಲ್ಲಿ ಮಾತ್ರ ಪ್ರವಾಸಿ ದಕ್ಷಿಣ ಆಫ್ರಿಕಾ ಉತ್ತಮ ಪ್ರತಿರೋಧ ತೋರಿತ್ತು. ಆದರೆ, ನಂತರ ಎರಡು ಮತ್ತು ಮೂರನೇ ಪಂದ್ಯಗಳಲ್ಲಿ ಸತತ ವೈಫಲ್ಯ ಅನುಭವಿಸಿದೆ. ಫಾಲೋ ಆನ್ ಗುರಿಯಾಗಿ ದ್ವಿತೀಯ ಇನಿಂಗ್ಸ್‌ ಆರಂಭಿಸಿದ ಆಫ್ರಿಕಾ ಪರ ಯಾವೊಬ್ಬ ಬ್ಯಾಟ್ಸ್‌‌ಮನ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ.ಕ್ವಿಂಟನ್ ಡಿ ಕಾಕ್, ಝುಬೈರ್ ಹಂಝಾ ಹಾಗೂ ತೆಂಬಾ ಬವುಮಾ ಶೂನ್ಯಕ್ಕೆೆ ವಿಕೆಟ್ ಒಪ್ಪಿಸಿದರು. ನಾಯಕ ಫಾಫ್ ಡುಪೆಸ್‌ಸ್‌ (4), ಹೆನ್ರಿಚ್ ಕ್ಲಾಸೆನ್(5) ಬೇಗ ಶರಣರಾದರು.
ಆದರೆ, ಕೆಳಕ್ರಮಾಂಕದಲ್ಲಿ ಜಾರ್ಜ್ ಲಿಂಡೆ (27), ಡೀನ್ ಪಿಡ್ತ್‌ (23) ಕೊಂಚ ಭಾರತದ ಬೌಲರ್‌ಗಳನ್ನು ಎದುರಿಸಿದರು. ಥ್ಯೂನಿಸ್ ಡಿ ಬ್ರೂಯಿನ್ 30 ರನ್ ಗಳಿಸಿ ಬ್ಯಾಟಿಂಗ್ ಮುಂದುವರಿಸಿದ್ದಾರೆ. ಇವರ ಜತೆ ಮತ್ತೊಂದು ತುದಿಯಲ್ಲಿ ಏನ್ರಿಚ್ ನಾಡ್ಜ್‌ (5) ಇದ್ದಾರೆ. ಡೀನ್ ಎಲ್ಗರ್ ಚೆಂಡು ತಗುಲಿ ಪೆವಿಲಿಯನ್ ತೆರಳಿದ್ದು, ನಾಳೆ ಅವರು ಬ್ಯಾಟಿಂಗ್ ಮುಂದುವರಿಸಲಿದ್ದಾರೆ.
ಮಿಂಚಿದ ಶಮಿ:
ದ್ವಿತೀಯ ಇನಿಂಗ್ಸ್‌‌ನಲ್ಲಿ ಅತ್ಯುತ್ತಮ ಬೌಲಿಂಗ್ ಮಾಡಿದ ಮೊಹಮ್ಮದ್ ಶಮಿ 10 ರನ್ ನೀಡಿ ಮೂರು ವಿಕೆಟ್ ಕಬಳಿಸಿದರು. ಉಮೇಶ್ ಯಾದವ್ ಎರಡು ಹಾಗೂ ಜಡೇಜಾ ಒಂದು ವಿಕೆಟ್ ಕಿತ್ತರು.
ಇದಕ್ಕೂ ಮುನ್ನ ಇಂದು ಬೆಳಗ್ಗೆೆ ಪ್ರಥಮ ಇನಿಂಗ್ಸ್‌ ಮುಂದುರಿಸಿದ ಆಫ್ರಿಕಾ ಪರ ನಾಯಕ ಫಾಫ್ ಡುಪ್ಲೇಸಿಸ್ ಹಾಗೂ ಝಬೈರ್ ಹಂಝಾ ಅವರು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ಡುಪ್ಲೆೆಸಿಸ್ ಕೇವಲ ಒಂದು ರನ್ ಗಳಿಸಿ ಉಮೇಶ್ ಯಾದವ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು.
ಆಫ್ರಿಕಕ್ಕೆೆ ಹಂಝಾ-ಬವುಮಾ ಆಸರೆ:
ತಂಡದ ಮೊತ್ತ 16 ರನ್ ಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆೆ ಸಿಲುಕಿದ್ದಾಗ ಜತೆಯಾದ ತೆಂಬಾ ಬವುಮಾ ಹಾಗೂ ಝುಬೈರ್ ಹಂಝಾ ಜೋಡಿ ಅಮೋಘ ಬ್ಯಾಟಿಂಗ್ ಮಾಡಿತು. ಈ ಜೋಡಿ ಮುರಿಯದ ನಾಲ್ಕನೇ ವಿಕೆಟ್‌ಗೆ 91 ರನ್ ಗಳಿಸಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿತು.
ಝುರ್ಬೈ ಹಂಝಾ ಅಮೋಘ ಬ್ಯಾಟಿಂಗ್ ಮಾಡಿದರು. 79 ಎಸೆತಗಳಲ್ಲಿ ಒಂದು ಸಿಕ್ಸ್‌ ಹಾಗೂ 10 ಬೌಂಡರಿಯೊಂದಿಗೆ 62 ರನ್ ಗಳಿಸಿ ದೊಡ್ಡ ಇನಿಂಗ್ಸ್‌ ಕಟ್ಟುವ ಮುನ್ಸೂಚನೆ ನೀಡಿದ್ದರು. ಆದರೆ, ಅವರನ್ನು ರವೀಂದ್ರ ಜಡೇಜಾ ಕಟ್ಟಿ ಹಾಕಿದರು. ಮತ್ತೊಂದು ತುದಿಯಲ್ಲಿ ತೆಂಬಾ ಬವುಮಾ ಕೂಡ 32 ರನ್ ಗಳಿಸಿ ಮುನ್ನುಗ್ಗುತ್ತಿದ್ದರು. ಆದರೆ, ಅವರು ಶಹಬಾಜ್ ನದೀಮ್ ಅವರ ಚೊಚ್ಚಲ ಅಂತಾರಾಷ್ಟ್ರೀಯ ವಿಕೆಟ್‌ಗೆ ಬಲಿಯಾದರು.
ಹೆನ್ರಿಚ್ ಕ್ಲಾಸೆನ್ ಕೇವಲ ಆರು ರನ್ ಗಳಿಸಿ ರವೀಂದ್ರ ಜಡೇಜಾಗೆ ತಲೆ ಬಾಗಿದರು. ಕ್ರೀಸ್ ನಲ್ಲಿ ಕೆಲ ಕಾಲ ಬ್ಯಾಟಿಂಗ್ ಮಾಡಿದ ಜಾರ್ಜ್ ಲಿಂಡೆ 81 ಎಸೆತಗಳಲ್ಲಿ 37 ರನ್ ಗಳಿಸಿ ಭಾರತದ ಬೌಲರ್ ಗಳನ್ನು ಕಾಡಿದರು. ಆದರೆ, ಅವರನ್ನು ಉಮೇಶ್ ಔಟ್ ಮಾಡಿದರು. ಡೇನ್ ಪಿಡ್ತ್‌ (4), ಕಗಿಸೋ ರಬಾಡ(0) ಏನ್ರಿಚ್ ನಾಡ್ಜ್‌ (4) ಬಹು ಬೇಗ ವಿಕೆಟ್ ಒಪ್ಪಿಸಿದರು.
ಭಾರತದ ಪರ ಮೂರನೇ ದಿನ ಅತ್ಯುತ್ತಮ ಬೌಲಿಂಗ್ ಮಾಡಿದ ಉಮೇಶ್ ಯಾದವ್ ಮೂರು ವಿಕೆಟ್ ಪಡೆದರೆ, ರವೀಂದ್ರ ಜಡೇಜಾ, ಶಹಬಾಜ್ ನದೀಮ್ ಹಾಗೂ ಮೊಹಮ್ಮದ್ ಶಮಿ ತಲಾ ಎರಡು ವಿಕೆಟ್ ಪಡೆದು ಮಿಂಚಿದರು.
ಸಂಕ್ಷಿಪ್ತ ಸ್ಕೋರ್
ಭಾರತ
ಪ್ರಥಮ ಇನಿಂಗ್ಸ್‌: 497/9 (ಡಿ)
ದಕ್ಷಿಣ ಆಫ್ರಿಕಾ
ಪ್ರಥಮ ಇನಿಂಗ್ಸ್‌: 56.2 ಓವರ್ ಗಳಲ್ಲಿ 162/10 (ಝುಬೈರ್ ಹಂಝಾ 62, ತೆಂಬಾ ಬವುಮಾ 32, ಜಾರ್ಜ್ ಲಿಂಡೆ 37; ಆರ್. ಜಡೇಜಾ 19 ಕ್ಕೆೆ 2, ಉಮೇಶ್ ಯಾದವ್ 40 ಕ್ಕೆೆ 3, ಶಹಬಾಜ್ ನದೀಮ್ 22 ಕ್ಕೆೆ 2, ಮೊಹಮ್ಮದ್ ಶಮಿ 22 ಕ್ಕೆೆ 2)
ದ್ವಿತೀಯ ಇನಿಂಗ್ಸ್‌: 46 ಓವರ್‌ ಗಳಿಗೆ 132/8 (ಥ್ಯೂನಿಸ್ ಡಿ ಬ್ರೂಯಿನ್ ಅಜೇಯ 30, ಜಾರ್ಜ್ ಲಿಂಡೆ 27, ಡೇನ್ ಪಿಡ್‌ತ್‌ 23; ಮೊಹಮ್ಮದ್ ಶಮಿ 10 ಕ್ಕೆೆ 3, ಉಮೇಶ್ ಯಾದವ್ 35 ಕ್ಕೆೆ 2)

loading...