ಮತ್ತೆ ಜಲಕಂಟಕ

0
28

 ಮತ್ತೆ ಜಲಕಂಟಕ
ವರುರ್ಣಾಭಟಕ್ಕೆ ಬೆಳಗಾವಿ ತಲ್ಲಣ | ಮತ್ತೊಮ್ಮೆ ಪ್ರಭಾಹದ ಭೀತಿ
ಅಶೋಕ ಬಾ. ಮಗದುಮ್ಮ
ಬೆಳಗಾವಿ:
ಪ್ರವಾಹದಿಂದ ತತ್ತರಿಸಿ ಚೇತರಿಕೊಳ್ಳುವಷ್ಟರಲ್ಲಿ ಮತ್ತೆ ಮಳೆ ಆವರಿಸಿಕೊಂಡು ನದಿಪ್ರದೇಶ ಜನರನ್ನು ಆತಂಕದಲ್ಲಿ ತೆಲಿಸುತ್ತಿದ್ದಾನೆ. ಈ ಆಘಾತದಿಂದ ಪ್ರವಾಹಭಾದಿತ ಸಂತ್ರಸ್ತರೂ ಮಳೆರಾಯನಿಗೆ ಶಾಪ ಹಾಕಲು ಟೊಂಕಕಟ್ಟಿ ನಿಂತಿದ್ದಾರೆ.
ಅಗಷ್ಟನಿಂದ 40 ದಿನಗಳಕಾಲ ವಕ್ಕರಿಸಿದ ವರುಣಘಾತಕ್ಕೆ ಸಾವಿರಾರೂ ಕುಟುಂಬಗಳನ್ನು ಈಗಲೂ, ಶೆಡ್‍ನಲ್ಲಿ ಉಪಜೀವನ ಸಾಗಿಸುತ್ತಿದ್ದಾರೆ. ಮಲಪ್ರಭಾದಿಂದ 38 ಸಾವಿರ ಕ್ಯೂಸೇಕ್ ನೀರನ್ನು ಹರಿಬಿಡಲಾಗಿದ್ದು, ಮತ್ತೋಮ್ಮೆ ಪ್ರವಾಹದ ಭೀತಿ ಎದುರಾಗುತ್ತಿದೆ. ಇದರಿಂದ ನದಿತೀರದ ರೈತರನ್ನು ಬೆಂಡಾಗಿಸುತ್ತಿದೆ. ಮಳೆಯ ಅಟ್ಟಹಾಸಕ್ಕೆ ನೊಂದ ನಿರಾಶ್ರಿತರೂ ವಲಸೆ ಹೋಗುವ ತವಕದಲ್ಲಿದ್ದಾರೆ.
ವರುಣಾರ್ಭಟಕ್ಕೆ ರವಿವಾರ ಜಿಲ್ಲೆಯ ಸಂಕೇಶ್ವರ ತಲ್ಲಣಗೊಂಡಿದ್ದು, ಲಕ್ಷಾಂತರ ಜನರಿಗೆ ಮತ್ತೇ ಪ್ರವಾಹದ ಭೀತಿ ನರ್ತನ ಮಾಡುತ್ತಿದೆ. ರಾಜ್ಯಕ್ಕೆ ಮತ್ತೆ ಜಲಕಂಟಕ ಎದುರಾಗಿದ್ದು, ಪ್ರವಾಹದ ಭೀತಿಯಿಂದ ಜನರ ಜೀವನ ಅಸ್ತವ್ಯಸ್ತವಾಗಿದೆ.
ಈಗಾಗಲೇ ಬೀದಿಪಾಲಾದ ಕುಟುಂಬಗಳಿಗೆ ಸೂಕ್ತಪರಿಹಾರ ಸಿಕ್ಕಿಲ್ಲ ಎಂಬುವುದು ಗಂಭೀರ ಆರೋಪವಿದೆ. ಇದರ ಮದ್ಯೆ ವರುಣರೌದ್ರನರ್ತನ ತಾಳುತ್ತಿದ್ದು, ನೊಂದ ಕುಟುಂಬಗಳು ಆತಂಕ, ಅಂತತ್ರಸ್ಥಿತಿಯಲ್ಲಿ ಕಾಲ ಕಳೆಯುವಂತಾಗಿದೆ.
ಬೆಳಗಾವಿಯಿಂದ ಮಹಾರಾಷ್ಟ್ರದ ಕೊಲ್ಹಾಪೂರ, ಗೋವಾದ, ಜಿಲ್ಲೆ ವಿವಿದ ಕಡೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಹೆಚ್ಚಾಗುತ್ತಿದೆ. ಜಿಲ್ಲೆ ರಸ್ತೆ ಸಾರಿಗೆ ಸಂಸ್ಥೆಯು ರಾಷ್ಟ್ರೀಯ ಹೆದ್ದಾರಿ ಎಲ್ಲ ಮಾರ್ಗವನ್ನು ರದ್ದು ಮಾಡಲಾಗಿದೆ ಎಂದು ಬೆಳಗಾವಿ ಕೆಎಸ್‍ಆರ್‍ಟಿಸಿ ನಿಯಂತ್ರಾಧಿಕಾರಿ ತಿಳಿದ್ದಾರೆ. ಮಲಪ್ರಭಾ ಮೈದುಂಬಿ ಹರಿಯುತ್ತಿದ್ದು, ಇದರಿಂದ ಎಂ.ಕೆ ಹುಬ್ಬಳ್ಳಿ ಸೇತುವೆ 18 ತಾಸು ಸಂಚಾರ ಸ್ಥಗಿತಗೊಳ್ಳಲಾಗಿತ್ತು.
ಯಳಷ್ಟೂ ಪರಿಹಾರ: ಜಿಲ್ಲೆಗೆ 115 ಕೋಟಿ ರೂ. ಪರಿಹಾರ ಸಂದಾನವಾದ ಹಿನ್ನೆಯಲ್ಲಿ, ಜಿಲ್ಲಾಡಳಿತದಿಂದ ಪರಿಹಾರ ಕಲ್ಪಿಸುತ್ತಿದೆ. ಮತ್ತು ಜಿಲ್ಲೆಯ 50 ಸಾವಿರ ಮನೆಗಳ ಪೈಕಿ 34 ಸಾವಿರ ಮನೆಗಳಿಗೆ ಪರಿಹಾರ ನೀಡಲಾಗಿದೆ.
ಕಾಳಜಿ ಕೇಂದ್ರದಲ್ಲಿರುವ ಸಂತ್ರಸ್ತರಿಗೆ ಜಿಲ್ಲಾಡಳಿದಿಂದ ಸೂಕ್ತ ಸೌಲಭ್ಯಗಳನ್ನು ನೀಡಿ, ಮನೆಯ ಬಾಡಿಗೆ ತುಂಬುತ್ತಿದೆ, ಎಲ್ಲವೂ ಸರಿದೂಗಿಸುವಷ್ಟರಲ್ಲಿ ಮಳೆ ಆವರಿಸಿಕೊಂಡು ರೈತರನ್ನು ಬೀದಿಗೆ ತರುತ್ತಿದ್ದೆ. ಸರಕಾರ ಒದಗಿಸಿದ ಪರಿಹಾರ ಸಾಕಾಗುತ್ತಿಲ್ಲ ಸಂತ್ರಸ್ತರಿಗೂ ಆತಂಕವಿದೆ.
ಒಟ್ಟಾಗಿ ಸಮೀಕ್ಷೆಯಲ್ಲಿ 2.21 ಲಕ್ಷ ಕೃಷಿ ಭೂಮಿಯಲ್ಲಿನ ಬೆಳೆ ಹಾನಿಯಾಗಿದೆ. ಜತಗೆ167 ಕೋಟಿ ಅನುದಾನ ಪಡೆಯಲಾಗಿದೆ. ತಾತ್ಕಾಲಿಕ ಶೆಡ್ ನಿರ್ಮಾಣವದರಿಗೆ 50 ಸಾವಿರ ನೀಡಲಾಗುತ್ತಿದೆ, ಅದರಂತೆ ಮನೆ ಬಾಡಿಗೆ ಪಡೆದುಕೊಳ್ಳವವರಿಗೆ ಮಾಸಿಕವಾಗಿ 5 ಸಾವಿರ ಪರಿಹಾರ ನೀಡಲಾಗುತ್ತಿದೆ.
ಎಲ್ಲಲ್ಲಿ ಮಳೆ: ಮಲಪ್ರಭಾ, ಘಟಪ್ರಭಾ, ಕೃಷ್ಣಾ ತೀರದ ಚಿಕ್ಕೋಡಿ, ರಾಯಭಾಗ, ಸಂಕೇಶ್ವರ, ಅಥಣಿ, ಗೋಕಾಕ, ರಾಮದುರ್ಗ ತಾಲೂಕಗಳಾಂದ್ಯತ ವರುಣ ದಶದಿಕ್ಕಿನಲ್ಲಿ ಅಬ್ಬರಿಸುತ್ತಿದ್ದು, ಮತ್ತೇ ಲಕ್ಷಾಂತರ ಜನರನ್ನು ಬೀದಿಗೆ ತರುವ ಸಾಧ್ಯತೆ ಇದೆ. ಇದರಿಂದ ಮಳೆಯಲ್ಲಿ ಸಿಲುಕಿದ ನೆರೆ ಸಂತ್ರಸ್ತರ ಮರು ಲೇಕ್ಕಾಚಾರ ಜಿಲ್ಲಾಡಳಿತಕ್ಕೆ ತಲೆನೊವಾಗಿ ಪರಿಣಮಿಸಲಿದೆ. ಸರಕಾರ ವೈಮಾನಿಕ ಸಮೀಕ್ಷೆ ಪಟ್ಟಿಯ ಪ್ರಕಾರ ನಿರಾಶ್ರಿತರಿಗೆ ಪರಿಹಾರ ನೀಡಲಾಗುತಿತ್ತು, ಮರು ಮಳೆಯಿಂದರಾಗಿರುವ ಸಮಸ್ಯೆಗಳ ಬಗ್ಗೆ ಆಡಳಿತ ಅಧಿಕಾರಿಗಳು ಸಮೀಕ್ಷೆ ನಡೆಸುವ ಅನುಮಾನವಿದೆ. ಎರಡೆರಡು ಬಾರಿ ಪ್ರವಾಹವಾದರೆ ಜೀವನ ರೂಪಸಿಕೊಳ್ಳಬಹುದು, ನಾಲ್ಕೈದು ತಿಂಗಳಿಂದ ಸುರಿಯುತ್ತಿರುವ ವರುಣ ಅವತಾರಕ್ಕೆ ಜನರಿಗೆ ದಿಕ್ಕೆ ತೊಚ್ಚದಂತಾಗಿದೆ.
ಬಾಕ್ಸ್===
ಕಳೆದ ಮಳೆಯಲ್ಲಿ ಸಾಕಷ್ಟೂ ಬೆಳೆ ನಾಶವಾಗಿದೆ, ಇನ್ನೂ ಪರಿಹಾರ ದೊರೆತ್ತಿಲ್ಲ. ಪ್ರಧಾನಿ ಮಂತ್ರಿ ಫಸಲು ಭೀಮಾ ಯೋಜನೆಯಿಂದ ಎರೆಡು ಸಾವಿರ ಹಣ ಖಾತೆ ಜಮಾ ಆಗಿದೆ. ಇದರಿಂದ ಜೀವನ ಸಾಗಿಸುತ್ತಿದ್ದೆವೆ. ಅಷ್ಟರಲ್ಲಿ ಮತ್ತೇ ಮಳೆ ಆವರಿಸಿಕೊಂಡಿದ್ದು.
ಶ್ರೀಕಂಠ ಶಿಂಧೆ,
ರೈತ ಸಂಕೇಶ್ವರ ಬೆಳಗಾವಿ.
ಬಾಕ್ಸ್===
ಎರಡು ಎಕರೇ ಸೋಯಾಬಿನ್ ಬೆಳೆ ಮಳೆಗೆ ಹಾನಿಯಾಗಿದೆ. ವರ್ಷಪೂರ್ತಿ ಜಾಣುವಾರುಗಳಿಗೆ ಮೇವು ಖರೀದಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಸಾಲ ಮಾಡಿ ಬೆಳೆಯನ್ನು ಬೆಳೆಯಬೇಕು. ಸರಕಾರ ಪರಿಹಾರ ಕಲ್ಪಸಿದರೆ ಅನುಕೂಲ.
ದ್ಯಾಮಪ್ಪಾ ಪೂಜಾರಿ
ಚಿಕ್ಕೋಡಿ ರೈತ

loading...