ಹಾಂಕಾಂಗ್ ಓಪನ್: ಸಿಂಧು, ಪ್ರಣಯ್ ಶುಭಾರಂಭ

0
7

ಹಾಂಕಾಂಗ್:- ಇಲ್ಲಿ ನಡೆಯುತ್ತಿರುವ ಹಾಂಕಾಂಗ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ವಿಶ್ವ ಚಾಂಪಿಯನ್ ಪಿ.ವಿ ಸಿಂಧು ಹಾಗೂ ಎಚ್.ಎಸ್ ಪ್ರಣಯ್ ಮೊದಲನೇ ಸುತ್ತಿನಲ್ಲಿ ಗೆದ್ದು ಶುಭಾರಂಭ ಮಾಡಿದ್ದಾರೆ. ಆದರೆ, ಸೈನಾ ನೆಹ್ವಾಲ್ ಹಾಗೂ ಸಮೀರ್ ವರ್ಮಾ ಸೋತು ಟೂರ್ನಿಯಿಂದ ಹೊರ ನಡೆದಿದ್ದಾರೆ.
ಬುಧವಾರ ನಡೆದ ಮಹಿಳೆಯರ ಮೊದಲ ಸುತ್ತಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ ಐದನೇ ಶ್ರೇಯಾಂಕಿತೆ ಪಿ.ವಿ ಸಿಂಧು, 21-15, 21-16 ನೇರ ಸೆಟ್ ಗಳಲ್ಲಿ 19ನೇ ಶ್ರೇಯಾಂಕಿತೆ ಕಿಮ್ ಗ ಯುನ್ ವಿರುದ್ಧ ಗೆದ್ದು ಎರಡನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ಮುಂದಿನ ಸುತ್ತಿನಲ್ಲಿ ಥಾಯ್ಲೆಂಡ್ ನ ಬುಸನಾನ್ ವಿರುದ್ಧ ಸೆಣಸಲಿದ್ದಾರೆ.
ಪುರುಷರ ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದ ಎಚ್.ಎಸ್ ಪ್ರಣಯ್, 21-17, 21-17 ಅಂತರದಲ್ಲಿ ನೇರ ಸೆಟ್‍ಗಳಲ್ಲಿ ಚೀನಾದ ಹ್ಯೂಂಗ್ ಯು ಕ್ಸಿಯಾಂಗ್ ವಿರುದ್ಧ ಗೆಲುವು ಸಾಧಿಸಿದರು.
ಇದಕ್ಕೂ ಮುನ್ನ ನಡೆದಿದ್ದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಭಾರತದ ಸೈನಾ ನಹ್ವಾಲ್ ಅವರು 13-21, 20-22 ಅಂತರದ ನೇರ ಸೆಟ್‍ಗಳಿಂದ ಚೀನಾದ ಚೈ ಯಾನ್ ಯಾನ್ ವಿರುದ್ಧ ಸೋಲು ಅನುಭವಿಸಿದರು. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸಮೀರ್ ವರ್ಮಾ ಅವರು 11-21, 21-13, 8-21 ಅಂತರದಲ್ಲಿ ತೈವಾನ್‍ನ ವಾಂಗ್ ಟಿಜು ವೀ ವಿರುದ್ಧ ಸೋತು ಆಘಾತ ಅನುಭವಿಸಿದರು.

loading...