ಕುಡಚಿ ಪಟ್ಟಣದಲ್ಲಿ ನಕಲಿ ನೋಟುಗಳ ಜಾಲ ಪತ್ತೆ

0
25

ಕನ್ನಡಮ್ಮ ಸುದ್ದಿ
ರಾಯಬಾಗ ೧೪: ತಾಲೂಕಿನ ಕುಡಚಿ ಪಟ್ಟಣದಲ್ಲಿ ನಕಲಿ ನೋಟುಗಳ ಜಾಲವನ್ನು ಪತ್ತೆ ಹಚ್ಚುವಲ್ಲಿ ಕುಡಚಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಗುರುವಾರ ಡಿಸಿಐಬಿ ಪೊಲೀಸ್‌ಇನ್ಸಪೆಕ್ಟರ್ ನಿಂಗನಗೌಡ ಪಾಟೀಲ ನೇತೃತ್ವದಲ್ಲಿ ಕುಡಚಿ ಪಿಎಸ್‌ಐ ಗಿರಿಮಲ್ಲಪ್ಪಾ ಉಪ್ಪಾರ ಹಾಗೂ ಸಿಬ್ಬಂದಿ ಖಚಿತ ಮಾಹಿತಿ ಮೇರೆಗೆ ನಕಲಿ ನೋಟುಗಳೊಂದಿಗೆ ಮನೆಯೊಂದರಲ್ಲಿಇದ್ದ ಸಂದರ್ಭದಲ್ಲಿ ಆರೋಪಿಗಳ ಮೇಲೆ ದಾಳಿ ಮಾಡಿ, ಆರೋಪಿಗಳಿಂದ ೫೦೦, ೨೦೦ ಮತ್ತು ೧೦೦ ರೂ.ಮುಖ ಬೆಲೆಯಅಂದಾಜು ೨ ಲಕ್ಷ ೩೩ ಸಾವಿರ ನಕಲಿ ನೋಟುಗಳನ್ನು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ಫಾರೂಕ್ ಪೀರ್ಜಾದೆ ಪರಾರಿಯಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಪರಶುರಾಮ್ ನಾಯಕ್ ಹಾಗೂ ಜಲಾಲ್‌ದರೂರವಾಲೆ ಬಂಧಿತ ಆರೋಪಿಗಳು.ಕುಡಚಿ ಪೊಲೀಸ್‌ಠಾಣೆಯಲ್ಲಿ ಪ್ರಕರಣದಾಖಲಾಗಿದ್ದು, ಹೆಚ್ಚಿನತನಿಖೆ ಮುಂದುವರೆದಿದೆ.
..

loading...