ರಮೇಶ ಜಾರಕಿಹೊಳಿ ಭರ್ಜರಿ ಮತಭೇಟೆ ಆರಂಭ

0
252

ರಮೇಶ ಜಾರಕಿಹೊಳಿ ಭರ್ಜರಿ ಮತಭೇಟೆ ಆರಂಭ
 
ಗೋಕಾಕ: ಡಿ.೫ ರಂದು ಜರುಗಲಿರುವ ಉಪಚುನಾವಣೆಯ ಹಿನ್ನಲೆ ನಗರದ ಗೊಂಧಳಿ ಗಲ್ಲಿ, ಸೋಮವಾರ ಪೇಠೆ, ಮರಾಠಾ ಗಲ್ಲಿ ಸೇರಿದಂತೆ ವಿವಿಧೆಡೆ ಮತಭೇಟೆ ನಡೆಸಿದ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಭರ್ಜರಿಯಾಗಿ ಪ್ರಚಾರ ಕೈಗೊಂಡರು.
ಪ್ರಚಾರ ಸಂದರ್ಭದಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದ ಅವರು.ಕಾಂಗ್ರೆಸ್  ದುರಾಡಳಿದಿಂದ ಬೇಸತ್ತು ಬಿಜೆಪಿ ಪಕ್ಷಕ್ಕೆ ಸೇರಿದ್ದೆನೆ. ಭ್ರಷ್ಟಾಚಾರದಿಂದ ತುಂಬಿದ್ದ ಮೈತ್ರಿ ಸರಕಾರವನ್ನು ಉರುಳಿಸಿದ್ದರಿಂದ ಉತ್ತಮ ಆಡಳಿತ ನೀಡುತ್ತಿರುವ ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಎಲ್ಲರೂ ಬಿಜೆಪಿ ಪಕ್ಷವನ್ನು ಬೆಂಬಲಿಸುವAತೆ ಹೇಳಿದರು.

ಕಾಂಗ್ರೇಸ್ ನಾಯಕರಿಗೆ ನಾನು ಕಾಂಗ್ರೇಸ್ ಪಕ್ಷ ತೋರೆದ ಹಿನ್ನಲೆ ನಿರಾಸೆಯಾಗಿದೆ. ಹೀಗಾಗಿ ಎಲುಬಿಲ್ಲದೆ ನಾಲಿಗೆಯಲ್ಲಿ ಏನೇನೊ ಮಾತನಾಡುತ್ತಿದ್ದಾರೆಂದರು.
ಈ ಸಂದರ್ಭದಲ್ಲಿ ಶ್ರೀ ರಾಚೋಟೇಶ್ವರ ಶ್ರೀಗಳು, ನಗರಸಭೆ ಸದಸ್ಯ ಎಸ್ ಎ ಕೋತವಾಲ, ಬಿಜೆಪಿ ನಗರ ಘಟಕದ ಅಧ್ಯಕ್ಷ ಎಸ್ ವಿ ದೇಮಶೆಟ್ಟಿ, ಮುತ್ತುರಾಜ ಜಮಖಂಡಿ, ಬಸವರಾಜ ಹಿರೇಮಠ, ರಾಜು ಹೀರೆಅಂಬಿಗೇರ, ಗೋಪಾಳ ಕಲ್ಲೋಳ್ಳಿ, ಪ್ರಭು ಹೀರೆಅಂಬಿಗೇರ ಸೇರಿದಂತೆ ಕಾರ್ಯಕರ್ತರು ಇದ್ದರು.

loading...