ಬಬಲೇಶ್ವರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಎಂ.ಬಿ. ಪಾಟೀಲ ಚಾಲನೆ

0
4

ವಿಜಯಪುರ : ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ರಸ್ತೆ ಸುಧಾರಣೆ ಕಾಮಗಾರಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಹಾಗೂ ಮಾಜಿ ಸಚಿವ ಎಂ.ಬಿ. ಪಾಟೀಲ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಬಬಲೇಶ್ವರ ಶ್ರೀ ಯಡಿಈಶ್ವರ ದೇವಸ್ಥಾನದಿಂದ ವಿಜಯಪುರ ನಗರದ ವಲ್ಲಭಾಯಿ ಪಟೇಲ್ ವೃತ್ತವರೆಗೆ ೫ಕಿ.ಮೀ ರಸ್ತೆಯನ್ನು ಅಭಿವೃದ್ಧಿ ಪಡಿಸಲು ೪೫೫ಲಕ್ಷ ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಹಾಗೂ ಕಾಖಂಡಕಿಯಲ್ಲಿ ಶೇಗುಣಶಿಯಿಂದ-ಹರಳಯ್ಯನಗುAಡ-ಕಾಖAಡಕಿ ೬ಕಿ.ಮೀ ರಸ್ತೆಗೆ ರೂ.೩೫೦ಲಕ್ಷ ವೆಚ್ಚದ ಮರು ಡಾಂಬರೀಕರಣ ಹಾಗೂ ಕಾಖಂಡಕಿ-ಬಬಲೇಶ್ವರದಿAದ ೫ಕಿ.ಮೀ ರಸ್ತೆ ರೂ.೪೦೦ಲಕ್ಷ ವೆಚ್ಚದ ಕಾಮಗಾರಿಗೆ ಕಾಖಂಡಕಿ ಕನಕದಾಸ ವೃತ್ತದ ಹತ್ತಿರ ರಸ್ತೆ ಅಗಲೀಕರಣ ಹಾಗೂ ಡಾಂಬರೀಕರಣ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿದರು. ನಂತರ ಅಡವಿಸಂಗಾಪುರದಲ್ಲಿ ಸಾರವಾಡ ಡೋಣಿ ನದಿ ಸೇತುವೆಯಿಂದ-ಅಡವಿಸAಗಾಪೂರ-ಬಬಲೇಶ್ವರ ಮಡ್ಡಿಯಲ್ಲಮ್ಮ ದೇವಸ್ಥಾನದವರೆಗೆ ೬ಕಿ.ಮೀ ರಸ್ತೆ ರೂ.೪೯೫ಲಕ್ಷ ವೆಚ್ಚದ ಕಾಮಗಾರಿಗೆ ಅಡವಿ ಸಂಗಾಪುರ ಹತ್ತಿರ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಂ.ಬಿ. ಪಾಟೀಲ ಮಾತನಾಡಿ, ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ನೀರಾವರಿ, ಶಿಕ್ಷಣದ ಜೊತೆಗೆ ಮೂಲಭೂತ ಸೌಕರ್ಯ ಹೊಂದಿದ ರಸ್ತೆಗೆ ಹೆಚ್ಚಿನ ಗಮನ ನೀಡಲಾಗಿದೆ. ಕ್ಷೇತ್ರದಲ್ಲಿ ಸಂಚರಿಸುವ ರಸ್ತೆಗಳು ಸರ್ವ ಋತುಗಳಲ್ಲಿ ಸುಸಜ್ಜಿತ ರಸ್ತೆಗಳಾಗಬೇಕೆಂಬುದು ನನ್ನ ಆಶಯ. ಆ ನಿಟ್ಟಿನಲ್ಲಿ ಈ ಕ್ಷೇತ್ರದಲ್ಲಿ ಉತ್ತಮ ರಸ್ತೆ ಜಾಲ ನಿರ್ಮಿಸಿದ್ದೇವೆ ಎಂದರು. ಬಬಲೇಶ್ವರ ಕ್ಷೇತ್ರದ ಸರ್ವತೋಮುಖ ಪ್ರಗತಿಗೆ ಪ್ರಾಮಾಣಿಕವಾಗಿ ಶ್ರಮಿಸಲಾಗುತ್ತಿದೆ ಎಂದರು.
ಲೋಕೋಪಯೋಗಿ ಮುಖ್ಯ ಅಭಿಯಂತರ ರಾಜು ಮುಜುಂದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಾಪುಗೌಡ ಪಾಟೀಲ್ ಶೇಗುಣಶಿ, ರಾಮನಗೌಡ ಪಾಟೀಲ್, ಸಿದ್ದರಾಮಯ್ಯ ಹಿರೇಮಠ, ಮಾರುತಿ, ಸಾಳುಂಕೆ, ಜಿ.ಪಂ.ಸದಸ್ಯೆ ದಾನಮ್ಮ ಅಂಗಡಿ, ಪ್ರಕಾಶಗೌಡ ಪಾಟೀಲ್, ಪ್ರಕಾಶ ಹೂಗಾರ ಹಾಗೂ ಕಾಖಂಡಕಿ, ಅಡವಿಸಂಗಾಪೂರ ಸೇರಿದಂತೆ ವಿವಿಧ ಗ್ರಾಮಸ್ಥರು ಪಾಲ್ಗೊಂಡಿದ್ದರು.

loading...