ರೈತ ಜನ ಜಾಗೃತಿ ಭಿತ್ತಿಪತ್ರ ಬಿಡುಗಡೆ

0
2

ಬಂಕಾಪುರ: ನೆರೆ ಹಾವಳಿಯಿಂದ ಬೆಳೆ, ಮನೆಗಳನ್ನು ಕಳೆದುಕೋಂಡ ರೈತರು ಪರಿಹಾರಕ್ಕಾಗಿ ಮಧ್ಯವರ್ತಿಗಳನ್ನು ಸಂಪರ್ಕಿಸದೆ ಸೂಕ್ತ ದಾಖಲಾತಿಗಳೋಂದಿಗೆ ಕಂದಾಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ನೆರವಾಗಿ ನಿಮ್ಮ ಖಾತೆಗೆ ಪರಿಹಾರದ ಹಣವನ್ನು ಪಡೆದುಕೋಳ್ಳಬಹುದಾಗಿದೆ ಎಂದು ತಾಲೂಕಾ ರೈತ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ನವೀನ ಸವಣೂರ ಹೇಳಿದರು.
ಅವರು ಪಟ್ಟಣದ ಗೃಹಮಂಡಳಿಯ ರೈತ ಹೋರಾಟ ಸಮಿತಿಯ ಕಚೇರಿಯಲ್ಲಿ ರೈತ ಜನ ಜಾಗೃತಿ ಭಿತ್ತಿ ಪತ್ರಗಳನ್ನು ಬಿಡುಗಡೆ ಗೋಳಿಸಿ ಮಾತನಾಡಿದ ಅವರು ಮನೆ ಕಳೆದುಕೋಂಡ ಕುಟುಂಬಗಳಿಗೆ ಸರಕಾರ ಹತ್ತು ಸಾವಿರದಿಂದ ಐದು ಲಕ್ಷದವರೆಗೆ ಪರಿಹಾರ ಒದಗಿಸುತ್ತಲಿದೆ. ಅಲ್ಲದೆ ಬೆಳೆಹಾನಿಯಾದ ರೈತರ ಜಮೀನುಗಳಿಗೆ ಒಂದು ಹೆಕ್ಟೆರ್‌ಗೆ ೧೬,೮೦೦/ ರೂ. ನೀರಾವರಿ ಜಮೀನಿಗೆ ೨೩,೫೦೦/ ರೂ. ಹಾಗು ತೋಟಗಾರಿಕೆ ಬೆಳೆಗಳಿಗೆ ೨೮,೦೦೦/ ರೂ. ನೀಡಲಾಗುತ್ತಿದೆ ಇದರ ಸರಿಯಾದ ಸದ್ಭಳಕೆಯನ್ನು ರೈತರು ನೆರವಾಗಿ ನಿಮ್ಮ ಖಾತೆಗೆ ಪಡೆದುಕೋಳ್ಳುವಂತೆ ರೈತರಲ್ಲಿ ಮನವಿ ಮಾಡಿದರು.
ರೈತ ಹೋರಾಟ ಸಮಿತಿ ಅಧ್ಯಕ್ಷ ಗಂಗಾಧರ ಗಡ್ಡೆ ಮಾತನಾಡಿ ತಾಲೂಕಾ ಅನ್ನದಾತ ರೈತ ಹೋರಾಟ ಸಮಿತಿ ರೈತರ ಹಿತಕ್ಕಾಗಿ ಶ್ರಮಿಸುತ್ತಿದೆ. ತಾಲೂಕಿನಾದ್ಯಂತ ವಿರುವ ಸುಮಾರು ೩ ಸಾವಿರ ಪಲಾನುಭವಿಗಳಿಗೆ ರೈತ ಜಾಗೃತಿ ಭಿತ್ತಿ ಪತ್ರಗಳನ್ನು ಅಂಚೆ ಮೂಲಕ ರೈತರ ಮನೆ, ಮನೆಗೆ ತಲುಪಿಸಿ ರೈತರು ಮಧ್ಯವರ್ತಿಗಳ ಮಾತಿಗೆ ಮರುಳಾಗಿ ಮೋಸಹೋಗದಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ರೈತ ಮುಖಂಡರಾದ ಅಶೋಕ ಶೆಟ್ಟೆಣ್ಣವರ, ಗಂಗಾಧರ ಬಾವಿಕಟ್ಟಿ, ನಾಗಪ್ಪ ಮೂಡೂರ, ಬಸವನಗೌಡ್ರ ಕೆಮ್ಮಣಕೇರಿ, ಶಿವರಾಜ ಮತ್ತಿಕಟ್ಟಿ, ರಾಮಚಂದ್ರ ಹೊಂಡದಕಟ್ಟಿ, ಮಲ್ಲಿಕಾರ್ಜುನ ಗುಳೇದ, ಮಹಾಂತೇಶ ಬಾವಿಕಟ್ಟಿ, ನಾಗರಾಜ ಪಾಟೀಲ, ಶಂಕರಗೌಡ ಪಾಟೀಲ, ನಿಂಗಪ್ಪ ಬನ್ನೂರ, ಸುರೇಶ ಶೆಟ್ಟೆಣ್ಣವರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

loading...