ರೈತ ಶಿವನಗೌಡ ಪಾಟೀಲ ಬಂಧನ ಖಂಡಿಸಿ ಧರಣಿ

0
1

ಬಂಕಾಪುರ: ತಹಶೀಲ್ದಾರ ಚಂದ್ರಶೇಖರ ಗಾಳಿ ಯವರ ಆದೇಶದ ಮೇರೆಗೆ ಕಲ್ಯಾಣದ ರೈತ ಶಿವನಗೌಡ ಪಾಟೀಲರನ್ನು ಬಂಧಿಸಿ ಜೈಲಿನಲ್ಲಿರಿಸಿರುವುದನ್ನು ಖಂಡಿಸಿ, ಬಿಡುಗಡೆ ಗೋಳಿಸುವಂತೆ ಆಗ್ರಹಿಸಿ ತಾಲೂಕಾ ಅನ್ನದಾತ ರೈತ ಹೋರಾಟ ಸಮಿತಿ ಆಶ್ರಯದಲ್ಲಿ ಪಟ್ಟಣದ ಉಪತಹಶೀಲ್ದಾರ ಕಚೇರಿ ಎದರು ಸುಮಾರು ಎರಡು ಗಂಟೆಗಳ ಕಾಲ ಧರಣಿ ನಡೆಸಿದರು.
ತಹಶೀಲ್ದಾರ ಗಾಳಿ ಯವರು ನನ್ನ ಕರ್ತವ್ಯಕ್ಕೆ ಅಡ್ಡಿಪಡೆಸಿದ ಎಂಬ ಕುಂಟು ನೇಪ ಹೇಳಿ ರೈತ ಶಿವನಗೌಡ ಪಾಟೀಲ ರವರನ್ನು ಹೋಲದಲ್ಲಿಯೇ ಬಂದಿಸಿ ಸುಮಾರು ಏಳು ದಿನಗಳಿಂದ ಜೈಲಿನಲ್ಲಿರಿಸಿರುವುದು ಖೇದಕರ ಸಂಗತಿಯಾಗಿದೆ. ನೆರೆ ಹಾವಳಿಯಿಂದ ಬೆಳೆ ಕಳೆದುಕೋಂಡ ರೈತ ಹೊಲದಲ್ಲಿರುವ ಅಲ್ಪ, ಸ್ವಲ್ಪ ಉಳಿದ ಬೆಳೆಯನ್ನು ಉಳಿಸಿಕೋಂಡು ಸಂಸಾರ ತೂಗಿಸಿಕೋಂಡು ಹೋಗುವುದು ಕಷ್ಟಕರವಾದ ಇಂತಹ ಸಂದರ್ಬದಲ್ಲಿ ತಹಶೀಲ್ದಾರ ಗಾಳಿ ಯವರು ತಮ್ಮ ಕರ್ತವ್ಯಕ್ಕೆ ಅಡ್ಡಿಪಡೆಸಿದ ಎಂಬ ನೇಪ ಹೇಳಿ ರೈತನನ್ನು ಹೋಲದಲ್ಲಿಯೇ ಬಂದಿಸಿ ಗೃಹಬಂದನದಲ್ಲಿರಿಸಿರುವುದು ರೈತ ವಿರೋದಿ ದೋರಣೆಯಾಗಿದೆ. ಹೋಲಕ್ಕೆ ಹೋಗಿ ಬರುವದಾಗಿ ಹೇಳಿ ಹೋದ ರೈತ ಶಿವನಗೌಡ ಒಂದು ವಾರದಿಂದ ಮನೆಗೆ ಬರದೇ ಇರುವುದರಿಂದ ರೈತ ಕುಟುಂಬ ಸಂಕಷ್ಟಕ್ಕೆ ಸಿಲುಕಿ ತುತ್ತು ಅನ್ನಕ್ಕು ಪರದಾಡುವಂತಾಗಿದೆ ಈ ಕೂಡಲೇ ರೈತನನ್ನು ಬಿಡುಗಡೆಗೋಳಿಸುವಂತೆ ಒತ್ತಾಯಿಸಿ ದರಣಿ ಮುಂದುವರೆಸಿದರು.
ಸಿ.ಪಿ.ಐ. ಬಸವರಾಜ ಹಳಬಣ್ಣವರ ರವರು ಪ್ರತಿಬಟನಾ ನಿರತರನ್ನುದ್ಧೇಸಿಸಿ ಮಾತನಾಡಿ, ಉಪತಹಶೀಲ್ದಾರ ರವರಿಗೆ ಮನವಿ ಅರ್ಪಿಸಿ ದರಣಿಯನ್ನು ಹಿಂಪಡೆಯುವAತೆ ಮನವಿ ಮಾಡಿದರು. ಮನವಿಗೆ ಸ್ಪಂದಿಸದ ರೈತ ಹೋರಾಟ ಸಮಿತಿಯವರು ಉಪವಿಬಾಗಾಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ರೈತನನ್ನು ಬಿಡುಗಡೆ ಗೋಳಿಸುವರೆಗೂ ದರಣಿಯನ್ನು ಮುಂದುವರೆಸುವದಾಗಿ ಪಟ್ಟು ಹಿಡಿದು ತಾಲೂಕಾ ಆಡಳಿತಕ್ಕೆ ದಿಕ್ಕಾರದ ಘೋಷಣೆಗಳನ್ನು ಕೂಗುವಮೂಲಕ ದರಣಿಯನ್ನು ಮುಂದುವರೆಸಿದರು. ವಿಷಯ ಅರಿತ ಉಪವಿಬಾಗಾಧಿಕಾರಿ ಅನ್ನಪೂರ್ಣ ಮುದಕಣ್ಣನವರ ದರಣಿ ನಿರತ ಸ್ಥಳಕ್ಕೆ ಆಗಮಿಸಿ ದರಣಿ ನಿರತರೋಂದಿಗೆ ಚರ್ಚಿಸಿ ಬಂದಿಸಿದ ರೈತನನ್ನು ಈ ಕೂಡಲೆ ಬಿಡುಗಡೆ ಗೋಳಿಸುವಂತೆ ಆದೇಸಿಸಿದರು. ಈ ವಿಷಯ ಕುರಿತು ಸಮಗ್ರ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ತಿಳಿಸಲಾಗುವುದು ಎಂದು ಹೇಳಿದ ನಂತರ ದರಣಿ ನಿರತರು ದರಣಿಯನ್ನು ಹಿಂಪಡೆದರು. ನಂತರ ದರಣಿ ನಿರತರು ಉಪವಿಬಾಗಾಧಿಕಾರಿ ಅನ್ನಪೂರ್ಣ ಮುದಕಣ್ಣನವರ ಮೂಲಕ ಕರ್ನಾಟಕ ಸರಕಾರದ ಮುಖ್ಯ ಪ್ರಧಾನ ಕಾರ್ಯದರ್ಶಿಯವರಿಗೆ ಮನವಿ ಅರ್ಪಿಸಿದರು.
ರೈತ ಹೋರಾಟ ಸಮಿತಿ ಅಧ್ಯಕ್ಷ ಗಂಗಾಧರ ಗಡ್ಡೆ, ಕಾರ್ಯದರ್ಶಿ ನವೀನ ಸವಣೂರ, ವಿರುಪಾಕ್ಷಗೌಡ ಪಾಟೀಲ, ನಾಗರಾಜ ಪಾಟೀಲ, ಮಲ್ಲೇಶಪ್ಪ ಬೂದಿಹಾಳ, ಚಂದ್ರಶೇಖರ ಮಾನೋಜಿ, ಯಲ್ಲಪ್ಪ ಹೊಸಪೇಟೆ, ಶಂಕರಗೌಡ ಪಾಟೀಲ, ಪಂಚಾಕ್ಷರಿ ಉಪ್ಪಣಸಿ, ನಿಂಗಪ್ಪ ಬನ್ನೂರ, ಉಳವಯ್ಯ ಚಿಗರಿಮಠ, ನಿಂಗಪ್ಪ ಒಡಣ್ಣಿ, ಬಸವರಾಜ ಮೇಳ್ಳಾಗಟ್ಟಿ, ಚನ್ನವೀರಪ್ಪ ಮಲ್ಲಿವಾಡ, ಬೂದಪ್ಪ ಬೂದ್ಯಾಳ, ಪರಸಪ್ಪ ಆರೇರ್, ವಿ.ಎಸ್.ಚೌಕಿಮಠ, ಬಸಪ್ಪ ಕೋರಿ ಸೇರಿದಂತೆ ಮತ್ತಿತರರು ದರಣಿಯಲ್ಲಿ ಪಾಲ್ಗೋಂಡಿದ್ದರು. ಸಿ.ಪಿ.ಐ. ಬಸವರಾಜ ಹಳಬಣ್ಣನವರ, ಪಿ.ಎಸ್.ಐ. ಸಂತೋಷ ಪಾಟೀಲ ಮತ್ತು ಹಳ್ಳಿಯವರ ಸೇರಿದಂತೆ ಪೊಲೀಸ್ ಸಿಂಬAದಿಗಳು ಸೂಕ್ತ ಬಂದೋಬಸ್ತ ವದಗಿಸಿದ್ದರು.

loading...