ಗೋಕಾಕನಲ್ಲಿ ರಮೇಶಗೆ ಭೀಮ ಬಲ

0
282


ಬೆಳಗಾವಿ/ ಗೋಕಾಕ

ಸತೀಶ ಜಾರಕಿಹೊಳಿ ಫಾರ್ಮುಲಾ ಬಾಲಚಂದ್ರ ಹಾಗೂ ನನಗೆ ಮಾತ್ರ ಗೋತ್ತಿದೆ. ಗೋಕಾಕ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಪ್ರಚಂಡ ಬಹುಮತದಿಂದ ಗೆಲವು ಸಾಧಿಸುವುದು ಶತಸಿದ್ದ ಎಂದು ಭೀಮಶಿ ಜಾರಕಿಹೊಳಿ ಹೇಳಿದರು.
ಶುಕ್ರವಾರ ಗೋಕಾಕ‌ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. 2008ರಲ್ಲಿ ನಾನು ಬಿಜೆಪಿಯಿಂದ ಸ್ಪರ್ಧಿಸಲು ನಿರ್ಧರಿಸಿದ್ದೆ. ಕೊನೆಯ ಗಳಿಗೆಯಲ್ಲಿ ನಾನು ಸಹೋದರ ರಮೇಶ ಜಾರಕಿಹೊಳಿ ಮಾತು ಕೇಳಿ ಹಿಂದೆ ಸರಿದೆ. ಕಾಂಗ್ರೆಸ್ ನಿಂದ ಸಹೋದರ ಲಖನ್ ಜಾರಕಿಹೊಳಿ ಸ್ಪಂರ್ಧೆ ನಡೆಸುತ್ತಿದ್ದಾರೆ. ಮಾಜಿ ಸಚಿವ, ಸಹೋದರ ಸತೀಶ ಜಾರಕಿಹೊಳಿ ಅವರ ಫಾರ್ಮುಲಾ ನನಗೆ ಮತ್ತು ಬಾಲಚಂದ್ರ ಜಾರಕಿಹೊಳಿ ಅವರಿಗೆ ಚನ್ನಾಗಿ ತಿಳಿದಿದೆ. ರಮೇಶ ಒಂದು ಲಕ್ಷ ಮತಗಳಿಗಿಂತ ಗೆಲವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ 11 ವರ್ಷದಿಂದ ರಾಜಕೀಯದಿಂದ ತಟಸ್ಥವಾಗಿ ಉಳಿದಿದ್ದ ಭೀಮಶಿ ಜಾರಕಿಹೊಳಿ ಅವರು ವ್ಯವಹಾರದಿಂದ ರಾಜಕೀಯದಿಂದ ದೂರವಿದೆ. ರಮೇಶ ಜಾರಕಿಹೊಳಿ ಅವರು ಬಿಜೆಪಿ ಸೇರ್ಪಡೆಯಿಂದ ಆನೆ ಬಲ ಬಂದಿದೆ. ರಾಜಕಾರಣದಲ್ಲಿ ಯಾರು ಶತ್ರು ಅಲ್ಲ. ವಿರೋಧಿ ಅಲ್ಲ‌. ಸಹೋದರರು ಮಾತಿನಲ್ಲೇ ಚುನಾವಣೆ ನಡೆಸುತ್ತಿದ್ದೇನೆ. ಕಳೆದ ಐದು ವರ್ಷದಿಂದ ರಮೇಶ ಸಾಹುಕಾರರನ್ನೇ ಇಲ್ಲಿನ ಜನ ಆಯ್ಕೆ ಮಾಡಿಕೊಂಡು ಬಂದಿದ್ದಾರೆ. ಈ ಸಲವು ಅವರನ್ನೇ ಆಯ್ಕೆ ಮಾಡಲಿದ್ದಾರೆ ಎಂದರು.
ಲಖನ್ ಜಾರಕಿಹೊಳಿ ಅವರು ಇನ್ನು ಯುವಕರಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಬೇರೆ ಕ್ಷೇತ್ರ ನೋಡಿಕೊಳ್ಳಲಿ. ನಾಲ್ಕು ಜನ ಸಹೋದರರು ಸೇರಿ ಶಾಸಕರಾಗಲು ಪ್ರಯತ್ನಿಸುತ್ತೇವೆ. ಆದರೆ ಈ ಬಾರಿ ರಮೇಶ ಜಾರಕಿಹೊಳಿ ಗೆಲವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

loading...