ದೇಶದ ಆರ್ಥಿಕ ಅಭಿವೃದ್ದಿಯಲ್ಲಿ ಸಹಕಾರಿ ಸಂಸ್ಥೆಗಳ ಪಾತ್ರ ಬಹುಮುಖ್ಯ : ಸವದಿ

0
0

ಸಹಕಾರಿ ಸಪ್ತಾಹ..

ಮಹಾಲಿಂಗಪುರ: ದೇಶದ ಆರ್ಥಿಕ ಅಭಿವೃದ್ದಿಯಲ್ಲಿ ಸಹಕಾರಿ ಸಂಸ್ಥೆಗಳ ಪಾತ್ರವು ಬಹಳ ಮುಖ್ಯವಾಗಿದೆ ಎಂದು ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಹೇಳಿದರು.
ಪಟ್ಟಣದ ಬನಶಂಕರಿದೇವಿ ಸಾಂಸ್ಕೃತಿಕ ಭವನದಲ್ಲಿ ಸಹಕಾರ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಜಿಲ್ಲಾ ಸಹಕಾರಿ ಯುನಿಯನ್ ಬಾಗಲಕೋಟ, ತೇರದಾಳ ಮತಕ್ಷೇತ್ರದ ಸಹಕಾರ ಸಂಘಗಳ ಸಂಯುಕ್ತಾಶ್ರಯದಲ್ಲಿ ಜರುಗಿದ ೬೬ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಹಕಾರ ಸಂಸ್ಥೆಗಳು ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಕೃಷಿ ಹಾಗೂ ಅದಕ್ಕೆ ಪೂರಕವಾದ ಕ್ಷೇತ್ರಗಳ ಅಭಿವೃದ್ದಿಯ ಜೊತೆಗೆ ದೇಶದ ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿವೆ.
ನಾಡಿನ ಸಮಗ್ರ ಜನಸಮೂಹದಲ್ಲಿ ಸಹಕಾರ ತತ್ವದ ಬಗ್ಗೆ ಜಾಗೃತಿ ಮೂಡಿಸುವದು ಹಾಗೂ ಸಹಕಾರ ಸಂಘ-ಸAಸ್ಥೆಗಳನ್ನು ರಚಿಸಲು ನೆರವಾಗುವದು ಸಹಕಾರ ಇಲಾಖೆ ಮತ್ತು ಸಹಕಾರ ಮಹಾಮಂಡಳದ ಮುಖ್ಯಧೇಯವಾಗಿದೆ. ಸಹಕಾರ ಸಂಘ-ಸAಸ್ಥೆಗಳನ್ನು ಸುಲಲಿತವಾಗಿ, ಕಾನೂನು ಬದ್ದವಾಗಿ ನಡೆಸಿಕೊಂಡು ಹೋಗಲು ತಿಳುವಳಿಕೆ ನೀಡುವ ಹಾಗೂ ಸಂಸ್ಥೆಗಳಲ್ಲಿನ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ನಂಬಿಕೆ, ಪ್ರಾಮಾಣಿಕತೆ ಮತ್ತು ಪಾರದರ್ಶಕ ವ್ಯವಹಾರಗಳ ಮೂಲಕ ಸಹಕಾರ ಸಂಸ್ಥೇಗಳು ಗ್ರಾಹಕರ ಆರ್ಥಿಕ ಅಭಿವೃದಿಗೆ ಪೂರಕವಾಗಿ ಸೇವೆ ಸಲ್ಲಿಸಬೇಕು ಎಂದರು.
ಸಮಾರಂಭದ ಅಧ್ಯಕ್ಷತೆವಹಿಸಿದ್ದ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಕಾಶಿನಾಥ ಹುಡೇದ ಮಾತನಾಡಿ ಅನ್ನದಾತರು ಮತ್ತು ದುಡಿಯುವ ವರ್ಗದ ಶ್ರೇಯೋಭಿವೃದ್ದಿಯ ಗುರಿಯನ್ನಿಟ್ಟುಕೊಂಡು ಸ್ಥಾಪಿತವಾದ ಸಂಸ್ಥೆಯೇ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳವಾಗಿದೆ. ರಾಜ್ಯದ ಸಹಕಾರಿ ಸಂಸ್ಥೆಗಳ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವಲ್ಲಿ ಸಹಕಾರಿ ಸಂಘ-ಸAಸ್ಥೇಗಳ ಪಾತ್ರವು ಬಹುಮುಖ್ಯವಾಗಿದೆ. ತಾ ಎಲ್ಲರಿಗಾಗಿ-ಎಲ್ಲರೂ ತನಗಾಗಿ ಎಂಬ ತತ್ವದಡಿಯಲ್ಲಿ ಸಹಕಾರ ಸಂಸ್ಥೆಗಳು ಮುನ್ನಡೆಯುತ್ತಿವೆ. ಸಹಕಾರಿ ಸಂಸ್ಥೆಗಳ ಸದಸ್ಯರು, ಗ್ರಾಹಕರು ಸಕಾಲಕ್ಕೆ ಸಾಲ ಮರುಪಾವತಿ ಮತ್ತು ಪಡೆದ ಸಾಲದ ಸದ್ಭಳಕೆಯೊಂದಿಗೆ ಆರ್ಥಿಕ ಅಭಿವೃದ್ದಿ ಹೊಂದಲು ಪ್ರಯತ್ನಿಸಬೇಕು ಎಂದರು.
ರಬಕವಿಯ ಉಪನ್ಯಾಸಕ ಎಂ.ಎಸ್.ಬದಾಮಿ ಮಾತನಾಡಿದರು. ನೇಕಾರ ಧುರೀಣ ಜಿ.ಎಸ್.ಗೊಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ಥಳೀಯ ಅರ್ಬನ ಬ್ಯಾಂಕ್ ಅಧ್ಯಕ್ಷ ಮಹಾಲಿಂಗಪ್ಪ ಕೋಳಿಗುಡ್ಡ, ಜಿಲ್ಲಾ ಸಹಕಾರಿ ಯುನಿಯನ್ ಸದಸ್ಯರಾದ ಸುರೇಶ ಹಾದಿಮನಿ, ಈರಪ್ಪ ದಿನ್ನಿಮನಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕರ ಭೀಮಸಿ ಮಗದುಮ್, ಜಮಖಂಡಿ ಸಹಕಾರ ಅಭಿವೃದ್ದಿ ಅಧಿಕಾರಿ ಶ್ರೀನಿವಾಸ ಸಾರವಾಡ, ಮುಧೋಳ ಸಹಕಾರ ಅಭಿವೃದ್ದಿ ಅಧಿಕಾರಿ ಶ್ರೀಶೈಲ ಬಾಡಗಿ, ಸಂಗಪ್ಪ ಹಳ್ಳೂರ, ಚನ್ನಪ್ಪ ಹುಣಶ್ಯಾಳ, ವ್ಹಿ.ವ್ಹಿ.ಕೊಕಟನೂರ ಸೇರಿದಂತೆ ಹಲವರು ಇದ್ದರು.
ಈರಪ್ಪ ಬೇಟಗೇರಿ ಸ್ವಾಗತಿಸಿದರು. ಜಿ.ಎಸ್.ಗೊಂಬಿ ನಿರೂಪಿಸಿ-ವಂದಿಸಿದರು.

loading...