ಅಕ್ರಮವಾಗಿ ಜನಮೀನು ಬಳಕೆ: ರೈತರ ವಿರೋಧ

0
3

ನಾಲತವಾಡ: ಪೀರಾಪೂರ ಏತ ನೀರಾವರಿ ಯೋಜನೆಯ ಪವರ್ ಸ್ಟೇಷನಗಾಗಿ ನಮ್ಮ ಜಮೀನನ್ನು ಅಕ್ರಮವಾಗಿ ಬಳಕೆ ಮಾಡುತಿದ್ದಾರೆ ಕೂಡಲೆ ಇದನ್ನು ತಡೆಯಬೇಕು ಇಲ್ಲವಾದರೆ ನಾವೆಲ್ಲರು ಆತ್ಮ ಹತ್ಯೆ ಮಾಡಿಕೊಳ್ಳುವದಾಗಿ ರೈತರ ಬೆದರಿಕೆ.
ನಾರಾಯಣಪೂರ ಎಡದಂಡೆ ಪಕ್ಕದಲ್ಲಿ ಇರುವ ೨೪ ಎಕರೆ ೨೬ ಗುಂಟೆ ಜಮೀನು ಅನಧಿಕೃತವಾಗಿ ಅಕ್ವಾಯರ್ ಮಾಡಿಕೊಂಡಿದ್ದಲ್ಲೆದೆ ಈಗ ಅದರಲ್ಲಿ ವಿದ್ಯುತ್ ಘಟಕ ನರ‍್ಮಾಣ ಮಾಡುವುದಾಗಿ ಯುಕೆಪಿ ಅಧಿಕಾರಿಗಳು ಮುಂದಾಗಿದ್ದಾರೆ ಆದರೆ ಇದನ್ನು ನರ‍್ಮಾಣ ಮಾಡಲು ನಾವು ಯಾವದೇ ಕಾರಣಕ್ಕು ಬಿಡುವದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಇದು ಯುಕೆಪಿ ಜಾಗ ಇರುವದರಿಂದ ನೀವು ಯಾವದೇ ಕಾರಣಕ್ಕು ವಿದ್ಯುತ್ ಘಟಕ ಸ್ಥಾಪನೆಗೆ ಅಡ್ಡಿ ಪಡಿಸುವಂತಿಲ್ಲ ಒಂದು ವೇಳೆ ಅಡ್ಡಿ ಪಡಿಸಿದರೆ ನಿಮ್ಮ ಮೇಲೆ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಸಿದ್ದಾರೆ.
ಏನಿದು ವಿವಾದ: ಸಮೀದ ನಾಗಬೇನಾಳ ತಾಂಡಾ ನಿವಾಸಿಗಳಾದ ತುಳಜಪ್ಪ ರಾಮಪ್ಪ ಲಮಾಣಿ, ಯಮನಪ್ಪ ರಾಮಪ್ಪ ಲಮಾಣಿ, ತುಳಜಪ್ಪ ಮಂಗಲಪ್ಪ ಲಮಾಣಿ ಅವರ ಹೊಲ ರ‍್ವೆ ನಂ ೮೪ ರಲ್ಲಿ ೨೪ ಎಕರೆ ೨೬ ಗುಂಟೆ ಜಮೀನು ಟೆನೆನ್ಸಿ ಆಕ್ಟನಲ್ಲಿ ಜಗದೇವರಾವ ದೇಶಮುಖ ಅವರು ನಾಯಕ ಕುಟುಂಬಕ್ಕೆ ನೀಡಿದ್ದರು. ಜಮೀನು ನೀಡಿದ ಕೆಲವು ದಿನಗಳ ನಂತರ ೧೯೭೪-೭೫ ರಲ್ಲಿ ನಾರಾಯಣಪೂರ ಎಡದಂಡೆ ಕಾಲುವೆ ನರ‍್ಮಾಣಕ್ಕೆ ಮೂಲ ಮಾಲಿಕರ ಪರವಾನಗಿ ಪಡೆಯದೆ ನಮ್ಮ ಜಮೀನಿನಲ್ಲಿ ಮಣ್ಣು ತೆಗೆದಿರುತ್ತಾರೆ ಮಣ್ಣು ತೆಗೆಯುವ ವೇಳೆ ನಿಮ್ಮ ಜಮೀನು ನಮಗೆ ಬೇಡ ಕೇವಲ ಮಣ್ಣು ಮಾತ್ರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದರು.
ಕಲವು ದಿನಗಳ ನಂತರ ನಮಗೆ ತಿಳಿಯದೇ ಯು.ಕೆ.ಪಿ ಹೆಸರಿನಲ್ಲಿ ಜಮೀನು ಅಕ್ವಾಯರ್ ಮಾಡಿಕೊಂಡಿದ್ದಾರೆ, ಆದರೆ ೮೪ ರ‍್ವೆ ನಂಬರನಲ್ಲಿ ಕೇವಲ ೧೬ ಗುಂಟೆ ಜಮೀನು ಮಾತ್ರ ಮುಳಗಡೆ ಆಗಿದೆ ಎಂದು ಅವರ‍್ಡ ಕೂಡ ಇದೆ, ೧೬ ಗುಂಟೆ ಬದಲು ಯುಕೆಪಿ ಅವರು ೨೪ ಎಕರೆ ೨೬ ಗುಂಟೆ ಜಮೀನನ್ನು ಸ್ವಾಧೀನ ಪಡೆದುಕೊಂಡಿದ್ದಾರೆ. ಈಗ ಪೀರಾಪೂರ ಏತನಿರಾವರಿಯ ವಿದ್ಯುತ್ ಘಟಕ ನರ‍್ಮಾಣ ಮಾಡಲು ಮುಂದಾಗಿದ್ದಾರೆ.
ಇದನ್ನು ನಾವು ವಿರೋಧ ಮಾಡಿದರು ಅಧಿಕಾರಿಗಳು ನಮ್ಮನ್ನು ಬೆದರಿಗೆ ಹಾಕುತಿದ್ದಾರೆ ನಾವು ಯಾವದೇ ಕಾರಣಕ್ಕು ನಮ್ಮ ಜಮೀನು ಬಿಟ್ಟುಕೊಡುವದಿಲ್ಲ ಎಂದು ರೈತರ ಪಟ್ಟುಹಿಡಿದ್ದಾರೆ

loading...