ಮಂದಿರ, ಮಸೀದಿಗಳಿಗೆ ಭೇಟಿ ನೀಡಿದ ಗವಿಶ್ರೀ

0
13

 
ಕನ್ನಡಮ್ಮ ಸುದ್ದಿ-ಕೊಪ್ಪಳ :ಮನುಷ್ಯರು ಗುಡಿಸಲು, ಅರಮನೆ ಎಂಬ ಬೇಧ ಮಾಡದೇ ತಾವಿರುವ ಮನೆಯನ್ನು ಪ್ರೀತಿಸಬೇಕು. ಬಳಿಕ ನೆರೆಹೊರೆಯವರನ್ನು ಪ್ರೀತಿಸಬೇಕು. ಬಡವ ಶ್ರೀಮಂತ ಎಂಬುದನ್ನು ವಸ್ತುಗಳಿಂದ ಅಳೆಯಲಾಗದು. ಹೃದಯ ಶ್ರೀಮಂತಿಕೆಯೇ ಮುಖ್ಯ ಎಂದು ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ಜಿಲ್ಲೆಯ ಕಾರಟಗಿಯಲ್ಲಿ ಹಮ್ಮಿಕೊಂಡಿರುವ ಸದ್ಭಾವನಾ ಪಾದಯಾತ್ರೆ ೭ನೇ ದಿನದ ಅಂಗವಾಗಿ ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಬೆನ್ನೂರು, ಉಳೇನೂರ ಇತರೆ ಗ್ರಾಮಗಳಲ್ಲಿನ ಮಂದಿರ, ಮಸೀದಿಗಳಿಗೆ ಭೇಟಿ ನೀಡಿದರು. ಶ್ರೀಗಳ ಯಾತ್ರೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಭಕ್ತಿ ಮೆರೆದರು.

ಸದ್ಭಾವನಾ ಯಾತ್ರೆ ಬಳಿಕ ಕಲ್ಲಿನಾಥೇಶ್ವರ ದೇವಾಲಯದ ಆವರಣದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ, ಒಂದೂರಿನ ಶ್ರೀಮಂತ ಮೇಲಂತಸ್ತು ಮನೆ ಕಟ್ಟಿಸಿ, ಅದರ ಮೇಲೆ ಏರಿ, ಪಕ್ಕದ ಗುಡಿಸಲು ಅಸಹ್ಯ ಎನಿಸುತ್ತದೆಂದು ಅದನ್ನು ಖರೀದಿಸಲು ಮುಂದಾದನು.

ಗುಡಿಸಲಿನಲ್ಲಿ ವಾಸಿಸುತ್ತಿದ್ದ ವೃದ್ದೆಯು, ಊರೇ ಖರೀದಿಸಬಹುದು ನನ್ನ ಗುಡಿಸಲು ಖರೀದಿಸಲಾಗದು ಎಂದು ಉತ್ತರಿಸಿದಳು ಎಂದು ನನ್ನವರೊಂದಿಗೆ ಕಳೆದ ದಿನಗಳಲ್ಲಿಯ ಪ್ರೇಮದ ಜೀವನ ಖರೀದಿಸಲು ಯಾರಿಗೂ ಆಗದು, ಅದಕ್ಕೆ ಬೆಲೆ ಕಟ್ಟಲಾಗದು ಎಂದು ವಿವರಿಸಿದಳು. ಹೀಗೆ ಪ್ರೀತಿ, ಪ್ರೇಮದ ಗುಣವನ್ನು ಇತರರ ಸಂಬAಧದೊAದಿಗೆ ಬೆಸೆದರೆ ಎಲ್ಲರೂ ಉನ್ನತವಾಗಿ ಜೀವಿಸಬಹುದು ಎಂದು ಶ್ರೀಗಳು ಹೇಳಿದರು.
ಪಾದಯಾತ್ರೆಯ ಮಧ್ಯೆ ಬರುವ ಮಂದಿರ, ಮಸೀದಿಗಳಿಗೆ ಭೇಟಿ ನೀಡಿ, ಅಲ್ಲಾ, ಅಲ್ಲಮ ಒಂದೇ ಎಂಬ ಭಾವೈಕ್ಯ ಸಂದೇಶ ಸಾರಿದರು. ಯಾತ್ರೆಯ ಅಂಗವಾಗಿ ಗ್ರಾಮದ ಮಂದಿರ-ಮಸೀದಿ, ರಸ್ತೆಗಳಲ್ಲಿ ತಳಿರು, ತೋರಣ ಕಟ್ಟಿ ಸಿಂಗರಿಸಲಾಗಿತ್ತು. ಮಹಿಳೆಯರು ತಡರಾತ್ರಿಯವರೆಗೆ ರಸ್ತೆಯುದ್ದಕ್ಕೂ ಬಣ್ಣ ಬಣ್ಣದ ರಂಗೋಲಿ ಬಿಡಿಸಿ ಶ್ರೀಗಳನ್ನು ಸ್ವಾಗತಿಸಿದರು.

ಮಸೀದಿ ಹೊರಗೆ ಬಳಗಾನೂರಿನ ಶಿವಶಾಂತವೀರ ಶರಣರು ನಡೆಸಿಕೊಟ್ಟ ಶಿಶುನಾಳ ಶರೀಫರ ತತ್ವಪದ, ಭಜನೆಯ ಗಾಯನವನ್ನು ಗವಿಶ್ರೀಗಳು ಕೆಲ ನಿಮಿಷ ನಿಂತು ಆಲಿಸಿದರು. ಉಳೇನೂರು, ಕಕ್ಕರಗೋಳ, ನಂದಿಹಳ್ಳಿ, ಸಿದ್ದಾಪುರ, ಗುಂಡೂರು, ಕಾರಟಗಿ ಸೇರಿದಂತೆ ವಿವಿಧ ಗ್ರಾಮಗಳ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.

loading...