ಬೈಕ್ ಕಳ್ಳತನ ಮಾಡುತ್ತಿದ್ದ ಖತರನಾಕ್ ಖದೀಮರ ಬಂಧನ

0
52

ಬೆಳಗಾವಿ
ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬೈಕ್ ಕಳ್ಳತನ ಮಾಡುತ್ತಿದ್ದ ಆರು ಜನರನ್ನು ಮಾಳ ಮಾರುತಿ ಪೊಲೀಸರು ಬಂಧಿಸಿ ಅವರಿಂದ ೨.೭೫೦೦೦ ರು. ಮೌಲ್ಯದ ೧೧ ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರದಲ್ಲಿ ಬೈಕ್ ಕಳ್ಳತನವವಾಗುವುದನ್ನು ಗಂಭೀರವಾಗಿ ಪರಿಗಣಿಸಿದ್ದ ಮಾಳಮಾರುತಿ ಪೊಲೀಸ್ ಠಾಣೆಯ ಅಧಿಕಾರಿಗಳು ಖಾನಾಪುರ ತಾಲೂಕಿನ ಟಿಪ್ಪು ಸುಲ್ತಾನ ಗಲ್ಲಿಯ ನ್ಯೂಗಾಂಧಿ ನಗರದ ರಹವಾಸಿ ಅಬ್ದುಲ್ ಪರಶುರಾಮ ಕೋಳಿ(೨೮), ಜಮೀರ ಶೇಖ ಉರ್ಫ್ ಬಾಂಬೆ ಮೆಸ್ತಿçà (೨೯), ಆಜಾಧ ನಗರದ ಅಜೀಮ ರಜಾಕ ಮುಲ್ಲಾ (೨೩), ರಿಜ್ವಾನ್ ರಫೀಕ ಮಹಾತ (೨೮), ವಾಸೀಮ ಇಮ್ತಿಯಾಜ್ ಸಮಶೇರ್ (೨೬), ಮಹ್ಮದಯೂನಿಸ್ ತಾಶೆವಾಲೆ (೨೪) ಎಂಬ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿ ಇವರಿಂದ ೨.೭೫೦೦೦ ರು. ಮೌಲ್ಯದ ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಳಗಾವಿ ನಗರ ಸೇರಿದಂತೆ ಖಾನಾಪುರ ತಾಲೂಕಿನ ಬಿಡಿ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಬೈಕ್ ಕಳ್ಳತನ ಮಾಡಿಕೊಂಡು ಬಂದು ಬೆಳಗಾವಿಯ ಜಮೀರ ಎಂಬ ಮೇಸ್ತಿçಗೆ ತಂದುಕೊಟ್ಟು ಅವನಿಂದ ಬೈಕ್‌ನ ಬಿಡಿ ಭಾಗಗಳನ್ನಾಗಿ ಮಾಡಿರುವುದಾಗಿ ಕಳ್ಳರು ಪೊಲೀಸರ ಮುಂದ ಒಪ್ಪಿಕೊಂಡಿದ್ದಾರೆ.
ಪೊಲೀಸ್ ಆಯುಕ್ತ ಬಿ.ಎಸ್.ಲೋಕೇಶಕುಮಾರ, ಡಿಸಿಪಿಗಳಾದ ಸೀಮಾ ಲಾಟ್ಕರ್, ಯಶೋಧಾ ವಂಟಗೋಡಿ, ಎಸಿಪಿ ಎನ್.ವಿ.ಭರಮನಿ ಹಾಗೂ ಮಾಳಮಾರುತಿ ಸಿಪಿಐ ಬಿ.ಆರ್.ಗಡ್ಡೇಕರ ನೇತೃತ್ವದಲ್ಲಿ ಮಾಳಮಾರುತಿ ಪೊಲೀರು ಕಾರ್ಯಾಚರಣೆ ನಡೆಸಿ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

loading...