ನಕಲಿ ಪತ್ರಕರ್ತರ ವಿರುದ್ಧ ಕ್ರಮ: ಪೊಲೀಸ ಆಯುಕ್ತ ಲೊಕೇಶಕುಮಾರ

0
5

ನಕಲಿ ಪತ್ರಕರ್ತರ ವಿರುದ್ಧ ಕ್ರಮ: ಪೊಲೀಸ ಆಯುಕ್ತ ಲೊಕೇಶಕುಮಾರ
ಬೆಳಗಾವಿ: ಸಂಘಟನೆ ಅಥವಾ ಪತ್ರಕರ್ತ ಹೇಳಿಕೊಂಡು ಹಣ ವಸೂಲಿ ದಂಧೆಗೆ ಕೈಹಾಕಿದ್ದಾರೆ. ದಾಖಲಾತಿ ಪಡೆದು ಶೀಘ್ರ ಕ್ರಮ ಜರುಗಿಸಲಾಗುವುದು ಎಂದು ನಗರ ಪೊಲೀಸ ಆಯುಕ್ತ ಲೊಕೇಶಕುಮಾರ ಹೇಳಿದರು.
ನಗರದಲ್ಲಿ ಶನಿವಾರ ಮಾದ್ಯಮರೊಂದಿಗೆ ಅವರು ಮಾತನಾಡಿ, ನಕಲಿ ಪತ್ರಕರ್ತ ಹಾವಳಿ ಹೆಚ್ಚಾಗಿರುವ ಬಗ್ಗೆ ಗಮನಕ್ಕೆ ಬಂದಿದೆ. ಕಲಬುರಗಿ ಪೊಲೀಸ್ ಆಯುಕ್ತರು ನಕಲಿ ಪತ್ರಕರ್ತರ ಬಗ್ಗೆ ಆದೇಶ ಹೋರಡಿಸಿದ್ದಾರೆ. ಇದರ ಬಗ್ಗೆ ಜಿಲ್ಲಾಧಿಕಾರಿಗಳು, ವಾರ್ತಾ ಅಧಿಕಾರಿಗಳ ಜತೆ ಈಗಾಗಲೇ ಚಿಂತನೆ ನಡೆದಿದೆ ದಾಖಲಾತಿ ಬಂದ ನಂತರ ಕ್ರಮಕೈಗೊಳ್ಳಲಾಗುವುದು.
ಅಸಲಿ ಪತ್ರಕರ್ತರ ಅಸೊಶಿಯೇಶನ್, ಭಾವಚಿತ್ರ ಹಾಗೂ ಸಂಪಾದಕ ದಾಖಲಾತಿ ಖುದ್ದಾಗಿ ಮಾಹಿತಿ ಸಲ್ಲಿಸಬೇಕು. ಅಸಲಿ ಪತ್ರಕರ್ತರನ್ನು ಮಾತ್ರ ಸರಕಾರಿ ಇಲಾಖೆಯ ಕಾರ್ಯಕ್ರಮಗಳಿಗೆ ಕರೆತಲಾಗುವುದು. ನಕಲಿ ಪತ್ರಕರ್ತರ ವಾಹನ ಮೇಲೆ ಹಾಕಿ ಸಂಚರಿಸುತ್ತಿದ್ದರೆ ಕ್ರಮ ಜರುಗಿಸಲಾಗುವುದು.

loading...