ಹನಿಟ್ರ್ಯಾಪ್ ಜಾಲ ಭೇದಿಸಲು, ಪೊಲೀಸ ಇಲಾಖೆ ಸನ್ನದ್ಧ

0
9

ಹನಿಟ್ರ್ಯಾಪ್ ಜಾಲ ಭೇದಿಸಲು, ಪೊಲೀಸ ಇಲಾಖೆ ಸನ್ನದ್ಧ
ಬೆಳಗಾವಿ: ಶ್ರೀಮಂತ ಪುರುಷರನ್ನು ಪರಿಚದೊಂದಿಗೆ ಮೋಹಜಾಲದಲ್ಲಿ ಕೆಡವಿ, ನಗ್ನ ವೀಡಿಯೋ ಮೂಲಕ ಹಣವನ್ನು ವಸೂಲಿ ಮಾಡುವ ಪುರುಷ, ಮಹಿಳೆಯರ ಹನಿಟ್ರ್ಯಾಪ್ ದಂಡದ ಜಾಲವನ್ನು ಪೋಲಿಸರು ಬೇದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ನಗರ ಪೊಲೀಸ ಆಯುಕ್ತ ಲೊಕೇಶಕುಮಾರ ಹೇಳಿದರು.
ನಗರದಲ್ಲಿ ಶನಿವಾರ ಮಾದ್ಯಮರೊಂದಿಗೆ ಅವರು ಮಾತನಾಡಿ, ನಗರ ಸಿಸಿಬಿ ಅಧಿಕಾರಿಗಳ ಸ್ಪಷ್ಟ ಮಾಹಿತಿ ಮೆರೆಗೆ ಪೊಲೀಸರು ಬಂಧಿಸಿ ಆರೋಪಿಗಳನ್ನು ನ್ಯಾಯಾಲಕ್ಕೆ ಒಪ್ಪಿಸಲಾಗಿದೆ.
ನಗರದಲ್ಲಿ ಯಾರೂ ಹನಿಟ್ರ್ಯಾಪ್ ಮೂಲಕ ಜನರಿಗೆ ಬ್ಯಾಕ್ಲಮೇಲ್ ಮಾಡುವ ಕೀಡಿಗೇಡಿಗಳಿಗೆ ಮಾರ್ಕೇಟ ಎಸಿಪಿ ಭರಮಣ್ಣಿಯವರ ನೇತೃತ್ವದಲ್ಲಿ ತಂಡ ರಚನೆಮಾಡಿ, ಜವಾಬ್ದಾರಿ ವಹಿಸಿಲಾಗಿದೆ.
ಅಪರಿಚಿತ್ತರನ್ನು ಹಾಗೂ ಶ್ರೀಮಂತ ಜನರಿಗೆ ವಂಚಿಸುವ ಹನಿಟ್ರ್ಯಾಪ್ ಜಾಲ ಶುಕ್ರವಾರ ಪೊಲೀಸ ಅಧಿಕಾರಿಗಳು ಬೇದಿಸಿದ್ದಾರೆ. ನಾಲ್ವರು ಪುರುಷರು, ಮೂವರು ಮಹಿಳೆಯರು ಒಟ್ಟಾಗಿ 7 ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಇದರ ಗಂಭೀರವಾಗಿ ತನಿಖೆ ನಡೆಸಲು ಪೊಲೀಸ ಇಲಾಖೆ ಸನ್ನದ್ಧವಾಗಿದೆ ಎಂದರು.
ಹನಿಟ್ರ್ಯಾಪ್ ವಂಚಿತರ ಬಗ್ಗೆ ದೂರುಗಳು ಕೂಡ ದಾಖಲಾಗಿದೆ. ಗಮನಕ್ಕೆ ಬಂದಿದೆ. ನಗರದಲ್ಲಿ ಇನ್ನೂ ಹನಿಟ್ರ್ಯಾಪ್ ವಂಚಿತರ ದಂಡ ಇರುವ ಮಾಹಿತಿಯಿದೆ. ಪೊಲೀಸ ಕಾರ್ಯಾಚರಣೆ ತಂಡ ಶೀಘ್ರದಲ್ಲೆ ಬೇದಿಸಿ ಇದರ ಬಗ್ಗೆ ಎಚ್ಚರಿಕೆ ನೀಡಲಾಗುವುದು.

loading...