ರಸ್ತೆ ನಿಯಮ ಉಲ್ಲಂಘಿಸಿದರೆ-ಪರಿಸರ ಕಲುಷಿತಗೊಳಿಸಿದರೆ ಆಪತ್ತು ನಿಶ್ಚಿತ

0
3

ಗದಗ: ರಸ್ತೆ ಸಂಚಾರ ನಿಯಮ ಪಾಲಿಸದಿದ್ದರೆ ಹಾಗೂ ವಾಯು ಮಾಲಿನ್ಯವನ್ನು ತಡೆಗಟ್ಟದಿದ್ದಲ್ಲಿ ಆಪತ್ತು ನಿಶ್ಚಿತ ಎಂದು ಗದಗ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ವಾಹನ ನಿರೀಕ್ಷಕರಾದ ಬಾಲಚಂದ್ರ ಅಭಿಪ್ರಾಯಪಟ್ಟರು.
ಗದಗ ತಾಲೂಕಿನ ಕೋಟುಮಚಗಿ ಗ್ರಾಮದ ಸರಕಾರಿ ಮಾದರಿ ಗಂಡು ಮಕ್ಕಳ ಶಾಲಾ ಆವರಣದಲ್ಲಿ ಗದಗ ಗ್ರಾಮೀಣ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಗದಗ-ಬೆಟಗೇರಿ ರೋಟರಿ ಕ್ಲಬ್, ಜಿಲ್ಲಾ ಸಂಚಾರಿ ಪೊಲೀಸ್ ಇಲಾಖೆ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ ಎರ್ಪಡಿಸಿದ್ದ ಸಂಚಾರಿ ನಿಯಮ ತಿಳುವಳಿಕೆ, ವಾಯು ಮಾಲಿನ್ಯ ತಡೆ ಮಾಸಾಚರಣೆ ಉದ್ಘಾಟಿಸಿ ಮಾತನಾಡಿದರು.
ನವೆಂಬರ್ ೧ ರಿಂದ ೩೦ರವರೆಗೆ ಸಾರಿಗೆ ಇಲಾಖೆಯು ವಾಯು ಮಾಲಿನ್ಯ ನಿಯಂತ್ರಣ ಮಾಸಾಚರಣೆ ಎರ್ಪಡಿಸಿ ಜನಜಾಗೃತಿ ನಡೆಸುತ್ತಿದೆ. ಸ್ವಚ್ಚವಿದ್ದರೆ ಪರಿಸರ-ಸುಖ ಸಂತೋಷ ನಿರಂತರ ಆದ್ದರಿಂದ ಸಾರ್ವಜನಿಕರು ಅದರಲ್ಲೂ ವಿಶೇಷವಾಗಿ ಯುವ ಜನಾಂಗ, ಶಾಲಾ ಮಕ್ಕಳಲ್ಲಿ ಈ ಕುರಿತು ಜಾಗ್ರತಿ ಮೂಡಿಸುವ ಕಾರ್ಯ ಮಾಡುತ್ತಿದ್ದು ಇದಕ್ಕೆ ರೋಟರಿಯಂತಹ ಸೇವಾ ಸಂಸ್ಥೆಗಳು, ಶಿಕ್ಷಣ ಇಲಾಖೆ ಕೈ ಜೋಡಿಸುತ್ತಿರುವದು ಸಂತೋಷದ ಸಂಗತಿ. ಪರಿಸರ ಸಂರಕ್ಷಣೆ ಸರ್ವರ ಕರ್ತವ್ಯ ಎಂದರು.
ಗದಗ ಪೊಲೀಸ್ ಠಾಣೆಯ ಪೊಲೀಸ್ ಕಾನ್ಸಟೇಬಲ್ ಮಂಜುನಾಥ ಅಸೂಟಿ ಮಾತನಾಡಿ ಬಹುತೇಕವಾಗಿ ಎಲ್ಲ ಅಪಘಾತಗಳು ರಸ್ತೆ ಸಂಚಾರ ನಿಯಮ ಉಲ್ಲಂಘನೆಯಿAದಲೇ ನಡೆದಿವೆ. ವಾಹನ ಸವಾರರು ಹಾಗೂ ರಸ್ತೆಯಲ್ಲಿ ಸಂಚರಿಸುವವರು ಬಹಳಷ್ಟು ಎಚ್ಚರಿಕೆಯಿಂದ ಸಂಚರಿಸಬೇಕು. ರಸ್ತೆ ನಿಯಮ ಪಾಲಿಸುವುದೇ ಅಪಘಾತ ನಡೆಗೆ ಇರುವ ಬಹು ದೊಡ್ಡ ರಾಜಮಾರ್ಗ ನಿಧಾನವೇ ಪ್ರಧಾನ ಎಂದರು.
ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕೇಳಿದ ಪ್ರಶ್ನೆಗಳಿಗೆ ಮಕ್ಕಳ ಮನಮುಟ್ಟುವಂತೆ ಉತ್ತರಿಸುವ ಮೂಲಕ ಅವರಿಗೆ ರಸ್ತೆ ಸಂಚಾರ ನಿಯಮದ ಸಾಮಾನ್ಯ ತಿಳುವಳಿಕೆ, ಚಿತ್ರಪಟಗಳ ಹಾಗೂ ಚಿನ್ಹೆಗಳನ್ನು ಸ್ಪಷ್ಠಪಡಿಸಿದರು.
ಮುಖ್ಯ ಅತಿಥಿ ಗದಗ-ಬೆಟಗೇರಿ ರೋಟರಿ ಕ್ಲಬ್‌ನ ಅಧ್ಯಕ್ಷ ಶಿವಾಚಾರ್ಯ ಹೊಸಳ್ಳಿಮಠ ಮಾತನಾಡಿ ರೋಟರಿ ಕ್ಲಬ್ ಗದುಗಿನಲ್ಲಿ ಸ್ಥಾಪನೆಗೊಂಡು ೭೫ ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನಲೆಯಲ್ಲಿ ವರ್ಷದಾದ್ಯಂತ ವೈವಿದ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನಮುಖಿ-ಸಮಾಜಮುಖಿಯಾಗಿ ಕಾರ್ಯ ಮಾಡುತ್ತಿದೆ. ಈ ಮಾಲಿಕೆಯಲ್ಲಿ ಪೊಲೀಸ್, ಸಾರಿಗೆ ಹಾಗೂ ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ರೋಟರಿ ಕ್ಲಬ್ ಈ ಕಾರ್ಯಕ್ರಮ ರೂಪಿಸಲಾಗಿದೆ. ಕೋಟುಮಚಗಿಯ ಎಲ್ಲ ಸರಕಾರಿ ಶಾಲೆಯವರ ಸಹಕಾರದೊಂದಿಗೆ ಈ ಕಾರ್ಯ ಸುಗಮಗೊಂಡಿದೆ ಎಂದರು.
ರೋಟರಿ ಕಾರ್ಯದರ್ಶಿ ನರೇಶ್ ಜೈನ್ ಸಂದರ್ಭೋಚಿತವಾಗಿ ಮಾತನಾಡಿದರು. ರೋಟರಿ ಕ್ಲಬ್ ಸದಸ್ಯ ಶ್ರೀಧರ ಸುಲ್ತಾನಪೂರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯ ವೈ.ಎಂ.ಇನಾಮತಿ ಅವರು ಮಾತನಾಡಿ ರೋಟರಿ ಕ್ಲಬ್ ಇತರ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮ ಮಕ್ಕಳಲ್ಲಿ ರಸ್ತೆ ಸುರಕ್ಷತೆ ಹಾಗೂ ಪರಿಸರ ಸಂರಕ್ಷಣೆ ಜಾಗೃತಿ ಮೂಡಿಸುವಲ್ಲಿ ಸಾಫಲ್ಯತೆ ಪಡೆದಿದೆ ಎಂದರು.
ವೇದಿಕೆಯ ಮೇಲೆ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಕೆ.ಎಸ್.ಬೇಲೇರಿ, ಮುಖ್ಯೋಪಾಧ್ಯಾಯರುಗಳಾದ ವಿನಾಯಕ ಬಂಡಾ, ಅರುಣ ಕುಲಕರ್ಣಿ, ಹಾಳಕೇರಿಮಠ, ಮಮತಾ ತಳವಾರ, ಎ.ಎಚ್.ಲಕ್ಕುಂಡಿ, ರೋಟರಿ ಕ್ಲಬ್‌ನ ಹಿರಿಯ ಸದಸ್ಯ ಡಾ. ರಾಜೇಂದ್ರ ಗಚ್ಚಿನಮಠ, ಗದಗ ಜಿಲ್ಲಾ ವಾಹನ ಮಾಲಕರ ಹಾಗೂ ಚಾಲಕರ ಸಂಘದ ಅಧ್ಯಕ್ಷರಾದ ಮಹಮದ್ ಯುಸುಫ್ ಮುಲ್ಲಾ ಹಾಗೂ ಉಪಾಧ್ಯಕ್ಷ ಪ್ರವೀಣಕುಮಾರ ಮಾನೇದ ಉಪಸ್ಥಿತರಿದ್ದರು.
ಶಿಕ್ಷಕಿ ಎಸ್.ವೈ.ಮರಕುಂಬಿ ಪ್ರಾರ್ಥಿಸಿದರು, ಮುಖ್ಯೋಪಾಧ್ಯಾಯ ಎಸ್.ಪಿ.ಕೊಪ್ಪದ ಸ್ವಾಗತಿಸಿದರು, ಶಿಕ್ಷಕ ಸಿ.ಎಂ.ಕೊAಗವಾಡ ನಿರೂಪಿಸಿದರು ಕೊನೆಗೆ ಶಿಕ್ಷಕ ಬಡೇಖಾನವರ ವಂದಿಸಿದರು.

loading...