ಕಾಗೆಗೆ ಸ್ವಾಭಿಮಾನಯಿದ್ದಿದ್ದರೆ ಬಿಜೆಪಿ ಬೀಡುತ್ತಿರಲಿಲ್ಲ : ಕಾಂಗ್ರೆಸ್ ನಾಯಕರನ್ನು ತರಾಟೆ ತೆಗೆದುಕೊಂಡ ಸಂಜಯ ಪಾಟೀಲ

0
16

ಕನ್ನಡಮ್ಮ ಸುದ್ದಿ : ಕಾಗವಾಡ : ಇಪತ್ತು ವರ್ಷ ಬಿಜೆಪಿಯಲ್ಲಿದ್ದು ಈಗ ಕಾಂಗ್ರೆಸ್ ಸೇರಿಕೊಂಡಿರುವ ಕಾಗವಾಡದ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ಅವರಿಗೆ ಸ್ವಾಭಿಮಾನ ಅನ್ನುವುದು ಇದ್ದಿದ್ದರೆ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಹೋಗುತ್ತಿರಕಿಲ್ಲ ಎಂದು ಕಾಗೆ ವಿರುದ್ದ ಬಿಜೆಪಿ ಮಾಜಿ ಶಾಸಕ ಸಂಜಯ ಪಾಟೀಲ ಹರಿಹಾಯ್ದರು .

ಇಂದು ಕಾಗವಾಡ ಕ್ಷೇತ್ರದ ಶಿರಗುಪ್ಪಿಯಲ್ಲಿ ಮಾತನಾಡಿದ ಅವರು ಸ್ವಾಭಿಮಾನದ ಹೆಸರಿನಲ್ಲಿ ಮತ ಕೇಳುವ ರಾಜು ಕಾಗೆ ಸ್ವಾಭಿಮಾನವೆ ಇಲ್ಲ .ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಪ್ರಧಾನಿ ಮೋದಿ ಹಾಗೂ ಸಿಎಂ ಯಡಿಯೂರಪ್ಪ ಅವರನ್ನು ಕಾಗವಾಡ ಕ್ಷೇತ್ರದ ಮತದಾರರು ಮತ ನೀಡಬೇಕು . ಯಡಿಯೂರಪ್ಪ ಮೂರು ವರ್ಷ ಅಧಿಕಾರ ನಡೆಸಬೇಕಾದರೆ ಈ ಚುನಾವಣಾಯಲ್ಲಿ ಬಿಜೆಪಿಗೆ ಮತ ನೀಡಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಹಕಾರ ನೀಡಬೇಕೆಂದು ಮನವಿ ಮಾಡಿದರು .

ಸಭೆಯಲ್ಲಿ ಸಿಎಂ ಯಡಿಯೂರಪ್ಪ ,ಉಪ ಮುಖ್ಯಮಂತ್ರಿ ಸವದಿ ,ಸಚಿವರಾದ ಸಿ.ಸಿ.ಪಾಟೀಲ ,ಜಗದೀಶ ಶೆಟ್ಟರ್, ಸಚಿವೆ ಶಶಿಕಲಾ ಜೊಲ್ಲೆ ,ಕಾಗವಾಡದ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ಸೇರಿದ ಕಮಲ ನಾಯಕರು ಉಪಸ್ಥಿತರಿದ್ದರು .

loading...