ರೈತ ಭೂಲೋಕದ ಭಗವಂತ: ಭುಜಂಗಭಟ್ಟ

0
6

ನರೇಗಲ್ಲ: ಈ ಲೋಕದ ಚರಾಚರ ವಸ್ತುಗಳಿಗೆಲ್ಲ ಅನ್ನ ನೀಡುವ ರೈತ ಭೂಲೋಕದ ಭಗವಂತನಾಗಿದ್ದಾನೆ. ಆದ್ದರಿಂದ ಪ್ರತಿತೊಬ್ಬರೂ ನಿತ್ಯವೂ ಅವನ ಸ್ಮರಣೆ ಮಾಡಬೇಕೆಂದು ಸೂಡಿ ಶ್ರೀ ಚಿದಂಬರೇಶ್ವರ ದೇವಸ್ಥಾನದ ಧರ್ಮಾಧಿಕಾರಿ ಶ್ರೀ ಭುಜಂಗಭಟ್ಟ ಜೋಷಿಯವರು ಹೇಳಿದರು.
ಇಲ್ಲಿನ ಹಿರೇಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಮೂರನೇ ದಿನ ನಡೆದ ಕೃಷಿಗೋಷ್ಠಿಯ ನೇತೃತ್ವವನ್ನು ವಹಿಸಿ ಅವರು ಆಶೀರ್ವಚನ ನೀಡಿದರು.
ನಿತ್ಯ ಭೂಮಾತೆಯ ಪೂಜೆ ಮಾಡುವುದರೊಂದಿಗೆ ಪ್ರಕೃತಿಯನ್ನು ಆರಾಧಿಸುವ ರೈತ ನಿಜಕ್ಕೂ ಭಗವಂತನೆ. ಈ ಜಗತ್ತಿನಲ್ಲಿ ಬೇರೆ ಯಾರಿಗಾದರೂ ತಮ್ಮ ಕರ್ತವ್ಯದಲ್ಲಿ ಸಮಯದ ಮಿತಿಯಿದೆ. ಆದರೆ ರೈತನಿಗೆ ಮಾತ್ರ ಸಮಯದ ಮಿತಿಯೇ ಇಲ್ಲ. ಆತ ಹಾಸಿಗೆಯಿಂದ ಎದ್ದ ಕ್ಷಣದಿಂದ ಮತ್ತೆ ಮಲಗುವ ತನಕ ತನ್ನ ಕಾಯಕದಲ್ಲಿ ತೊಡಗಿರುತ್ತಾನೆ. ಅದಕ್ಕಾಗಿಯೇ ಆತನನ್ನು ಕಾಯಕಯೋಗಿ ಎಂದು ಕರೆಯುತ್ತಿದ್ದೇವೆ ಎಂದು ಜೋಷಿ ತಿಳಿಸಿದರು.
ಜೀವಂತ ಬಸವಣ್ಣನ ಸೇವೆ ಮಾಡುವ ಆತ ತನ್ನ ದೇಹವನ್ನು ದಂಡಿಸಿ ಜಗತ್ತಿನ ಪಶು, ಪ್ರಾಣಿ ಪಕ್ಷಿಗಳಿಗೆಲ್ಲ ಆಹಾರ ನೀಡುತ್ತಿದ್ದಾನೆ. ಅದಕ್ಕಾಗಿಯೇ ನಿತ್ಯವೂ ಊಟವಾದ ಮೇಲೆ ನಾವುಗಳು ಅನ್ನದಾತ ಸುಖೀಭವ ಎಂದು ಹೇಳುವುದು. ರೈತ ಸುಖವಾಗಿದ್ದರೆ ಮಾತ್ರ ಈ ಜಗತ್ತು ಸುಖವಾಗಿರುತ್ತದೆ ಎಂದು ತಿಳಿಸಿದ ಶ್ರೀಗಳವರು, ಯಾವಾಗ ಭೂಮಿಯನ್ನು ಹಸನು ಮಾಡಬೇಕು, ಬೀಜ ಸಂರಕ್ಷಣೆ, ಬೀಜೋಪಚಾರ ಮತ್ತು ಬಿತ್ತನೆಗಳನ್ನು ಹೇಗೆ ಮಾಡಬೇಕು? ಅದಕ್ಕೆ ಶಾಸ್ತç ಸಮ್ಮತವಾದ ಹಿರಿಯರ ನುಡಿಗಳು , ಆಚರಣೆಗಳು ಏನೇನಿವೆ ಎಂಬುದನ್ನು ತಿಳಿಸಿದರು.
ಇದೇ ಸಂದರ್ಭದಲ್ಲಿ ಕೃಷಿಯ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ಕೃಷಿ ವಿಜ್ಞಾನಿ ಡಾ. ಮಹಾಂತೇಶ ಪಾಟೀಲ, ಈ ಸಾರೆಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಶ್ವೇಶ್ವರ ಸಜ್ಜನ ಅವರನ್ನು ಕುರಿತು ವಿವರಿಸಿದರು. ಅವರ ಹಾಗೆ ಶ್ರದ್ಧೆಯಿಂದ ಕೃಷಿ ಮಾಡಿದರೆ ನೀವೂ ಕೂಡ ಜೀವನದಲ್ಲಿ ಸಾಧನೆ ಮಾಡಬಹುದೆಂದರು.
ರೈತ ಉದ್ಯಮಿಯಾಗಬೇಕು. ತನ್ನ ಸರಕುಗಳು ಅಂರ‍್ರಾಷ್ಟಿçÃಯ ಮಟ್ಟದಲ್ಲಿ ಗುರುತಿಸುವಂತಾಗಬೇಕೆAಬ ಹಿರಿಯಾಸೆಯನ್ನು ಇಟ್ಟುಕೊಳ್ಳಬೇಕು. ಆ ಮಟ್ಟಕ್ಕೆ ತಲುಪಬೇಕಾದರೆ ಏನೆಲ್ಲ ಕನಸುಗಳನ್ನು, ಗುರಿಯನ್ನು ಇಟ್ಟುಕೊಳ್ಳಬೇಕೆಂಬು ದರ ಬಗ್ಗೆ ಪಾಟೀಲ ವಿವರವಾಗಿ ತಿಳಿಸಿದರು.
ಇಂದಿನ ಕೃಷಿ ಪದ್ಧತಿಯು ನಿಸರ್ಗದ ವಿರುದ್ಧವಾಗಿ ಸಾಗುತ್ತಿದೆ. ಇದು ನಿಲ್ಲಬೇಕು. ನಿಸರ್ಗಕ್ಕೆ ಪೂರಕವಾದ, ವಿಷ ರಹಿತವಾದ ಬೆಳೆಯನ್ನು ಬೆಳೆಯಲು ರೈತ ಸಾವಯವ ಕೃಷಿಯ ಮೊರೆ ಹೋಗಬೇಕು. ರೈತ ಎಂದಿಗೂ ರಸ್ತೆಯ ಮೇಲೆ ತನ್ನ ಧಾನ್ಯಗಳ ರಾಶಿಯನ್ನು ಮಾಬಾರದು. ಇದರಿಂದ ಜೀವ ಸಂಕುಲಕ್ಕೆ ಹಾನಿಯಾಗುತ್ತದೆ. ಬದಲಾಗಿ ಮೊದಲಿನಂತೆ ಕಣದ ರಾಶಿಯ ಕಡೆಗೆ ಆತ ಗಮನ ನೀಡಬೇಕಾದುದು ಅವಶ್ಯಕವಾಗಿದೆ ಎಂದು ತಿಳಿಸಿದ ಪಾಟೀಲರು, ಕೃಷಿ ವಿಜ್ಞಾನದಲ್ಲಿ ಆಗಿರುವ ಅನೇಕ ಬೆಳವಣಿಗೆ ಮತ್ತು ಸಾಧನೆಗಳನ್ನು ಸಭೆಗೆ ಪರಿಚಯಿಸಿದರು.
ಕೃಷಿಯು ಪರಮಾತ್ಮನ ವೃತವಾಗಿದ್ದು, ಇದನ್ನು ವೃತದಂತೆ ಆಚರಣೆ ಮಾಡಿದರೆ ಖಂಡಿತ ರೈತ ಭೂಲೋಕದ ಭಗವಂತನೆ ಆಗುತ್ತಾನೆ. ಆ
ದಿಶೆಯಲ್ಲಿ ರೈತರೆಲ್ಲರೂ ಶ್ರಮ ಪಡಬೇಕು. ಕೇವಲ ಎ.ಪಿ.ಎಂ.ಸಿ.ಗೆ ಹೋಗಿ ತನ್ನ ದವಸ ಧಾನ್ಯಗಳನ್ನು ಹಾಕಿದರೆ ತನ್ನ ಕಾರ್ಯ ಮುಗಿಯಿತು ಎಂದು ವಿರಮಿಸದೆ, ಇನ್ನೂ ಮುಂದಕ್ಕೆ ಹೋಗುವ ಛಾತಿಯನ್ನು ಆತ ಬೆಳೆಸಿಕೊಂಡು ಈ ಜಗತ್ತಿನ ಯಶಸ್ವಿ ಉದ್ಯಮಿಯಾಗಬೇಕೆಂದು ಪಾಟೀಲ ಸಲಹೆ ನೀಡಿದರು.

loading...