ರಾಷ್ಟಿçÃಯ ಹೆದ್ದಾರಿ ಅಗಲೀಕರಣ ಕಾಮಗಾರಿ ಪುನರಾರಂಭ

0
6

ನರಗುAದ: ಕಳೆದೆರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ರಾಷ್ಟಿçÃಯ ಹೆದ್ದಾರಿ ಅಗಲೀಕರಣ ಕಾಮಗಾರಿ ಇದೀಗ ಪುನ: ಆರಂಭಗೊAಡಿದ್ದು, ವಾಹನ ಸವಾರರು, ಪಾದಾಚಾರಿಗಳು ನಿಟ್ಟುಸಿರು ಬಿಡುವಂತಾಗಿದೆ.
ರಾಜದೀಪ್ ಬಿಲ್ಡ್ಕಾನ್ ಕಂಪನಿ ೨೦೧೬ ರಲ್ಲಿ ಈ ಕಾಮಗಾರಿ ೨೪೦ ಕೋಟಿ ರೂಪಾಯಿಗೆ ಟೆಂಡರನ್ನು ಪಡೆದಿತ್ತು. ಕೋರ್ತಿ, ಕೋಲಾರದಿಂದ ನವಲಗುಂದ ತಾಲೂಕಿನ ಬೆಳವಟಗಿ ಕ್ರಾಸ್‌ವರೆಗಿನ ಒಟ್ಟು,೯೭ ಕಿ.ಮೀ ರಸ್ತೆ ಅಗಲೀಕರಣ ಕಾಮಗಾರಿ ಇದಾಗಿದ್ದು, ನಿಯಮದ ಪ್ರಕಾರ ೨೦೧೭ ರಲ್ಲಿಯೇ ಪೂರ್ಣಗೊಳ್ಳಬೇಕಿತ್ತು. ಆದರೆ, ಗುತ್ತಿಗೆದಾರರ ನಿರ್ಲಕ್ಷö್ಯತನ, ಬೇಜವಾಬ್ದಾರಿ, ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿ ಸೇರಿ ವಿವಿಧ ಆರೋಪಗಳಿಂದಾಗಿ ಈ ಕಾಮಗಾರಿ ನನೆಗುದಿಗೆ ಬೀಳಲು ಕಾರಣವಾಯಿತು.
ನರಗುಂದ ಪಟ್ಟಣ ಸೇರಿ ತಾಲೂಕಿನ ಒಟ್ಟು,೪ ಕೀ.ಮೀಟರ ರಸ್ತೆ ಅಗಲೀಕರಣ, ಡಿವೈಡರ್ ನಿರ್ಮಾಣ, ಪಾದಚಾರಿಗಳ ಮಾರ್ಗ, ಪುಟ್‌ಪಾತ್‌ಗೆ ಇಂಟರ್‌ಲಾಕ್ ಜೋಡಣೆ, ೧೫ ಕೀ.ಮೀ ರಸ್ತೆ ಡಾಂಬರೀಕರಣ ಸೇರಿ ವಿವಿಧ ಕಾಮಗಾರಿಗಳು ನನೆಗುದಿಗೆ ಬಿದ್ದಿದ್ದವು. ಅದಲ್ಲದೇ ಪ್ರತಿನಿತ್ಯ ಅನೇಕ ವಾಹನಗಳು ಅಪಘಾತಕ್ಕೀಡಾಗಿ ಹಲವರು ಗಾಯಗೊಂಡರೆ, ಇನ್ನೂಳಿದ ಕೆಲವರು ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದ ಕುಟುಂಬಸ್ಥರು ಗುತ್ತಿಗೆದಾರರ ವಿರುದ್ದ ಈಗಾಗಲೇ ನರಗುಂದ ಪೋಲಿಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.
ರಸ್ತೆ ಅಗಲೀಕರಣ ಸಂದರ್ಭ ಕುಡಿಯುವ ನೀರಿನ ಪೈಪ್‌ಲೈನ್‌ಗಳು ಸಹ ಕಿತ್ತು ಹೋಗಿ ಪಟ್ಟಣದ ಕೆಲ ಬಡಾವಣೆಯ ಜನರು ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ಆಗ ನಿರ್ಮಾಣವಾಗಿತ್ತು. ಇದರಿಂದ ಪದೇಪದೇ ಗುತ್ತಿಗೆದಾರ ಕಂಪನಿ ಅಧಿಕಾರಿಗಳನ್ನು ಜನರು ತರಾಟೆಗೆ ತೆಗೆದುಕೊಂಡ ಹಿನ್ನೆಲೆ ಈ ಕಾಮಗಾರಿ ಅರ್ಧಕ್ಕೆ ನಿಲ್ಲಲು ಕಾರಣವಾಗಿತ್ತು. ಈ ಕುರಿತು ನಿಗಧಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಸಚಿವ ಸಿ.ಸಿ.ಪಾಟೀಲ, ಜಿಲ್ಲಾಧಿಕಾರಿ, ಪುರಸಭೆ ಅಧಿಕಾರಿಗಳು ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಸಹ ಯಾವುದೇ ಪ್ರಯೋಜನ ಆಗಿರಲಿಲ್ಲ. ಇದೀಗ ಮತ್ತೆ ರಸ್ತೆ ಅಗಲೀಕರಣ ಕಾಮಗಾರಿ ಆರಂಭಗೊAಡಿದ್ದರಿAದ ವಾಹನ ಸವಾರರು ಮತ್ತು ಪಾದಚಾರಿಗಳು ನಿರಾಳರಾಗಿದ್ದಾರೆ.

loading...