ಮಹಿಳೆ ಸಬಲೀಕರಣಗೊಂಡಾಗಲೇ ಆರ್ಥಿಕ ಅಭಿವೃದ್ಧಿ: ಪಾಟೀಲ

0
5

ಕನ್ನಡಮ್ಮ ಸುದ್ದಿ- ಧಾರವಾಡ: ತಾನು ಎಲ್ಲರಿಗಾಗಿ ಎಲ್ಲರೂ ತನಗಾಗಿ ಎಂಬ ತತ್ವದಡಿ ಮಹಿಳಾ ಸಬಲೀಕರಣಕ್ಕೆ ಸಹಕಾರಿ ಸಂಘಗಳು ವಿಶೇಷ ಪ್ರಯತ್ನ ನಡೆಸಿಕೊಂಡು ಬಂದಿರುವುದನ್ನು ಕಾಣುತ್ತೇವೆ. ಸಮಾಜದ ದುರ್ಬಲ ವರ್ಗದವರು ಮತ್ತು ಮಹಿಳೆಯರು ಸಬಲೀಕರಣಗೊಂಡಾಗಲೇ ಆರ್ಥಿಕ ಅಭಿವೃದ್ಧಿಯ ಪರಿಕಲ್ಪಣೆ ನಿಜವಾಗುವುದೆಂದು ಜಿಲ್ಲಾ ಪಂಚಾಯ್ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷಿö್ಮÃ ಕೆಂಪೇಗೌಡ ಪಾಟೀಲ ಹೇಳಿದರು.
ಶ್ರೀನಗರದ ಪರಿಸರ ಭವನದಲ್ಲಿ ಜರುಗಿದ ೬೬ ನೇ ಅಖಿಲ ಭಾರತ ಸಹಕಾರಿ ಸಪ್ತಾಹದ ಅಂಗವಾಗಿ “ಯುವಜನ, ಮಹಿಳಾ ಮತ್ತು ಅಬಲವರ್ಗಕ್ಕಾಗಿ ಸಹಕಾರ ಸಂಸ್ಥೆಗಳು’’ ದಿನದ ಆಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಮಹಿಳೆಯರು ಒಗ್ಗಟ್ಟಿನಿಂದ ಕ್ರಾಂತಿ ರೂಪದಲ್ಲಿ ಸಹಕಾರ ಆಂದೋಲನದಲ್ಲಿ ಭಾಗವಹಿಸಿ ಯಶಸ್ಸಿನತ್ತ ಸಾಗಬೇಕೆಂದರು.
ಜಿಲ್ಲಾ ಸಹಕಾರ ಯೂನಿಯನ್‌ದ ಉಪಾಧ್ಯಕ್ಷ ಪ್ರತಾಪ ಚವ್ಹಾಣ ಮಾತನಾಡಿ, ಸಮಾಜದಲ್ಲಿ ಮಹಿಳೆಯ ಸ್ಥಾನಮಾನದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಮಹಿಳೆಯು ನೆಮ್ಮದಿಯಿಂದ ಬಾಳಲು ಸಹಕಾರ ಕ್ಷೇತ್ರದಲ್ಲಿ ಹೈನುಗಾರಿಕೆ, ಗೃಹಪಯೋಗಿ ವಸ್ತು ತಯಾರಿಕೆ ಮೊದಲಾದವುಗಳಿಂದ ಆಸರೆಯಾಗಿದೆ. ಮಹಿಳೆ ಜಗತ್ತಿನ ಪ್ರತಿಯೊಂದು ಕಾರ್ಯದಲ್ಲಿ ಪುರುಷರಿಗೆ ಸಮಾನವಾಗಿ ಇನ್ನೂ ಹೆಚ್ಚಿನ ರೀತಿಯಲ್ಲಿ ಸಹಕಾರ ಕ್ಷೇತ್ರದಲ್ಲಿ ಪಾಲ್ಗೊಳ್ಳಬೇಕೆಂದರು.
ಕೆ.ಸಿ.ಸಿ. ಬ್ಯಾಂಕ ನಿ. ಅಧ್ಯಕ್ಷ ಬಾಪುಗೌಡ ಪಾಟೀಲ ಮಾತನಾಡಿ, ಸಹಕಾರಿ ಸಂಸ್ಥೆಗಳು ರಾಷ್ಟçದಲ್ಲಿ ವಿಶಾಲವಾದ ಸಾಮಾಜಿಕ ತಳಹದಿಯನ್ನು ಹೊಂದಿವೆ. ಅವುಗಳು ಸಮಾಜದ ಎಲ್ಲ ವರ್ಗದ ಜನತೆಯ ಅಶೋತ್ತರಗಳಿಗೆ ಸ್ಪಂದಿಸುತ್ತಿದೆ ಎಂದರು. ಮುಂದುವರೆದು ಹೈನುಗಾರಿಕೆಯಲ್ಲಿ ಮಹಿಳೆಯರು ಶೇ. ೮೦ರಷ್ಟು ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಅಧಿಕ ಸಂಖ್ಯೆಯ ಮಹಿಳೆಯರು ಸಹಕಾರ ಸಂಸ್ಥೆಗಳ ಅಧಿಕಾರ ಸ್ಥಾನದಲ್ಲಿದ್ದಾರೆ. ಸ್ವ-ಸಹಾಯ ಗುಂಪುಗಳಲ್ಲಿ ಮಹಿಳೆಯರದ್ದು ವಿಶಿಷ್ಠ ಪಾತ್ರವೆನಿಸಿದೆ. ಕೃಷಿಯಲ್ಲಿ ವಿಶ್ವದಲ್ಲೆಲ್ಲಾ ಮಹಿಳೆಯರದ್ದೇ ಪ್ರಮುಖ ಪಾತ್ರವಾಗಿದೆ. ಸಹಕಾರ ಸಂಸ್ಥೆಗಳು ಸಮಾಜದ ಅಬಲವರ್ಗಕ್ಕೆ ಅದ್ಯತೆಯ ಮೇಲೆ ಸೇವೆ ಸಲ್ಲಿಸಬೇಕಾಗಿದೆ ಎಂದರು.
ಲಕ್ಷಿö್ಮ ಮಹಿಳಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಾ ಇಂದ್ರಾಯಣಿ ಕಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದ ಅಭಿವೃದ್ದಿಯಲ್ಲಿ ಪುರುಷರಿಗೆ ಹಾಗೂ ಮಹಿಳೆಯರಿಗೆ ಸಮಾನ ಸ್ಥಾನ ಅಗತ್ಯ. ಈ ಸಮಾನತೆ ಸಾಧಿಸದೆ ಅಭಿವೃದ್ದಿ ಸಾಧ್ಯವಿಲ್ಲ. ಸಹಕಾರಿ ಸಂಘಗಳು ಸ್ವಯಂ ಸೇವಾ ಸಂಘಗಳಾಗಿದ್ದು ಸಮಾನತೆಯನ್ನು ಸಾಧಿಸುವಲ್ಲಿ ಹೆಚ್ಚಿನ ಮಹತ್ವ ನೀಡಬೇಕಾಗಿದೆ ಎಂದರು.
ಉತ್ತರ ಕರ್ನಾಟಕ ವೇದ ಮಹಿಳಾ ಉದ್ಯಮದಾರರ ಶ್ರೇಯಾಭಿವೃದ್ಧಿ ಸಂಘದ ಅಧ್ಯಕ್ಷೆ ರತಿ ಶ್ರೀನಿವಾಸ, ಕೆ.ಸಿ.ಸಿ. ಬ್ಯಾಂಕ ನಿರ್ದೇಶಕ ಉಮೇಶ ಬೂಮಣ್ಣವರ, ನ್ಯಾಯವಾದಿ ಕುಸುಮಾ ಮಂಟೂರ, ಪಿ.ಪಿ. ಗಾಯಕವಾಡ ಇದ್ದರು. ಆನಂದ ತಳವಾರ ಸ್ವಾಗತಿಸಿದರು. ಸವಿತಾ ಹಿರೇಮಠ ನಿರೂಪಿಸಿ ವಂದಿಸಿದರು.

loading...