ವಿದ್ಯಾರ್ಥಿಗಳಿಗೆ ವೃಕ್ಷಜ್ಞಾನ ಅಗತ್ಯ: ಸೈದಾಪುರ

0
13

ಕನ್ನಡಮ್ಮ ಸುದ್ದಿ- ಧಾರವಾಡ: “ಭೂಮಿಯು ಪ್ರತಿಯೊಂದು ಜೀವಿಗೂ ಆಹಾರ ನೀರು ಗಾಳಿಯನ್ನು ಒದಗಿಸುತ್ತಿದೆ. ಭೂಮಿ ಇಲ್ಲದೇ ಸಕಲ ಜೀವರಾಶಿಗಳಿಲ್ಲ. ಇಂತಹ ಭೂಮಿಯನ್ನು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಮೂಲಭೂತ ಕರ್ತವ್ಯವಾಗಬೇಕು ಎಂದು ನಿವೃತ್ತ ಕಾರ್ಗಿಲ್ ಯೋಧರಾದ ಚನ್ನಪ್ಪ ಸೈದಾಪುರ ಹೇಳಿದರು.
ಬೂದನಗುಡ್ಡ ಬಸವೇಶ್ವರ ಪ್ರೌಢ ಶಾಲೆಯಲ್ಲಿ ಭೂಮಿ ಪ್ರತಿಷ್ಠಾನವು ಗ್ರಾಮೀಣ ಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಅರಿವಿನ ಪಯಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಜನರು ಪರಿಸರ ಸೇವೆಯಲ್ಲಿ ಪ್ರತಿಫಲವಿಲ್ಲದೇ ಭಾಗಿಯಾಗಬೇಕು. ಇಂದಿನ ವಿದ್ಯಾರ್ಥಿಗಳಿಗೆ ಅಕ್ಷರದ ಜೊತೆಗೆ ವೃಕ್ಷಜ್ಞಾನವು ಅತ್ಯಗತ್ಯ. ನಮ್ಮ ನಿತ್ಯದ ಬದುಕಿನಲ್ಲಿ ಕೆಲವು ಸಮಯವನ್ನಾದರೂ ಭೂಮಿ ಸಂರಕ್ಷಣೆಗೆ ಮೀಸಲಾಗಿಡಬೇಕು. ಏಕೆಂದರೆ ಪರಿಸರವನ್ನು ನೀವು ರಕ್ಷಿಸಿದರೆ ನಿಮ್ಮನ್ನು ಪರಿಸರ ರಕ್ಷಿಸುತ್ತದೆ. ವಿದ್ಯಾರ್ಥಿಗಳಿಗೆ ಅಕ್ಷರದ ಜೊತೆಗೆ ವೃಕ್ಷ ಪ್ರೀತಿಯನ್ನು ಬೆಳೆಸುವುದು ಅರಿವಿನÀ ಪಯಣ ಕಾರ್ಯಕ್ರಮದ ಉದ್ದೇಶ. ಜೊತೆಗೆ ವಿದ್ಯಾರ್ಥಿಗಳಿಗೆ ವೃತ್ತಿ ಹಾಗೂ ವ್ಯಕ್ತಿತ್ವ ಮಾರ್ಗದರ್ಶನ ಮಾಡುವ ಯೋಜನೆಗಳನ್ನು ಪ್ರತಿಷ್ಠಾನವು ಹೊಂದಿದೆ ಎಂದÀರು.
ಪ್ರೌಢ ಶಾಲೆಯ ಮುಖ್ಯೋಪಾದ್ಯಯ ರಾಜೇಂದ್ರಕುಮಾರ ನಡುಗಲ್ ಅಧ್ಯಕ್ಷತೆವಹಿಸಿ ಮಾತನಾಡಿ, ಶಿಕ್ಷಕ ಹಾಗೂ ಪಾಲಕರಿಂದ ಮಾತ್ರ ಮಕ್ಕಳ ಭವಿಷ್ಯವನ್ನು ರೂಪಿಸುವುದು ಅಸಾಧ್ಯದ ಕೆಲಸ. ಉತ್ತಮ ಸಂಘಸAಸ್ಥೆಗಳಿAದ ಕೂಡಿದ ಸಮಾಜವು ಮಕ್ಕಳಿಗೆ ಉತ್ತಮ ವಾತಾವರಣ ನಿರ್ಮಿಸುತ್ತದೆ ಎಂದರು.
ಮನೋಜ, ಸಿದ್ದು ನವನಗರ ಪಾಲ್ಗೊಂಡಿದ್ದರು. ಸುನಿಲ ಶಾನವಾಡ ನಿರೂಪಿಸಿದರು. ಮಹೇಂದ್ರ ಶಾಂತಗಿರಿ ಸ್ವಾಗತಿಸಿದರು. ಶಿವಾನಂದ ವಂದಿಸಿದರು. ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು.

loading...