ಬಿಜೆಪಿ ಗೆಲುವಿಗಾಗಿ ಮಾದಿಗರು ಕೈಜೋಡಿಸಿ: ಮುತ್ತಣ್ಣ ಕರೆ

0
2

ಬಿಜೆಪಿ ಗೆಲುವಿಗಾಗಿ ಮಾದಿಗರು ಕೈಜೋಡಿಸಿ: ಮುತ್ತಣ್ಣ ಕರೆ
ಬೆಳಗಾವಿ: ಮಾದಿಗ ಜನಾಂಗದ ಅಭಿವೃದ್ಧಿಗೆ ಬದ್ಧವಾಗಿ, ಬಿಜೆಪಿ ಸರಕಾರ ಸದಾಶಿವ ಆಯೋಗಕ್ಕೆ ೧೨ ಕೋಟಿ ರೂ. ಅನುದಾನ ನೀಡಿ ಪರಿಶಿಷ್ಟ ಮನೆಮನೆಯ ಕೌಟುಂಬಿಕ ಸಮೀಕ್ಷೆಗೆ ವರದಿ ತಯಾರಿಸಲು ಸಹಕರಿಸಿದೆ. ಅದಕ್ಕಾಗಿ, ಬಿಜೆಪಿ ಗೆಲ್ಲುವಿಗಾಗಿ ಮಾದಿಗರು ಕೈಜೋಡಿಸಬೇಕೆಂದು ಸದಾಶಿವ ಆಯೋಗ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಮುತ್ತಣ್ಣ ಬೆಣ್ಣೂರ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸದಾಶಿವ ಆಯೋಗ ವರದಿ ಜಾರಿಗೆ ತರುವುದಾಗಿ ಸಿದ್ದರಾಮಯ್ಯನವರು ಭರವಸೆ ನೀಡಿದರು, ಅಧಿವೇಶನದಲ್ಲಿ ವರದಿ ವಿಷಯವಾಗಿ ಅಜೇಂಡಾದಲ್ಲಿ ಪ್ರಸ್ತಾಪವಾಗಿಲ್ಲ.
ದಲಿತರನ್ನು ತುಳಿಯುವ ಪ್ರಯತ್ನ ಕಾಂಗ್ರೆಸ್‌ನಲ್ಲಿ ನಡೆದಿದೆ. ಸಿಎಂ ಸಿದ್ದ ರಾಮಯ್ಯನವರು ಸುಳ್ಳು ಭರವಸೆ, ಬೂಟಾಕೆ ರಾಜಕೀಯ ಮಾಡುತ್ತಾರೆ ಎಂದು ಕಿಡಿಕಾರಿದರು.

ಬಿಜೆಪಿ ಸರಕಾರ ದಲಿತ ನೌಕರರಿಗೆ ಬಡ್ತಿ ಮಿಸಲಾತಿ ನೀಡಲು ಭರವಸೆ ನೀಡಿದೆ. ಅವರ ಏಳಿಗೆಗಾಗಿ ಶ್ರಮಿಸುದ್ದಾಗಿ ಶಪಥಗೈದಿದೆ. ಎಸ್‌ಸಿ/ಎಸ್‌ಟಿ ಜನಾಂಗದವರು ಬಿಜೆಪಿಗೆ ಮತದಾನ ಮಾಡಿ. ಸ್ಥಿರ ಸರಕಾರ ನಿರ್ಮಾಣ ವಾದರೆ ಅಭಿವೃದ್ಧಿಯಾಗುತ್ತದೆ. ತಪ್ಪಿಯೂ ಕೈಗೆ ಮತದಾನ ಹಾಕಬೇಡಿ ವಿನಂತಿಮಾಡಿಕೊAಡರು.
ಸAವಿದಾನ ತಿರುಚುವ ಪ್ರಯತ್ನ ಕಾಂಗ್ರೆಸ್ ಮಾಡಿದೆ. ಸಂವಿಧಾನ ವಿರುದ್ಧ ಅವಹೇಳನ ಪದ ಬಳಿಸಿ ಬಿಜೆಪಿ ನಾಯಕರ ಮೇಲೆ ಗೂಬೆಕೂರಿಸಿದ್ದಾರೆ. ಗೋವಿಂದ ಕಾರಜೋಳರವರಿಗೆ ಉಪಮುಖ್ಯಮಂತ್ರಿ ಸ್ಥಾನ ಕಲ್ಪಿಸಿದೆ. ಪರಿಶಿಷ್ಟ ಮಾದಿಗ ಜನಾಂಗದ ಅಭಿವೃದ್ಧಿಗಾಗಿ ಬಿಜೆಪಿ ನಿಂತಿದೆ. ಅದಕ್ಕಾಗಿ ಬಹುಮತದಿಂದ ಬಿಜೆಪಿಯನ್ನು ಗೆಲ್ಲಿಸಿ ಎಂದರು.
ಈ ಸಂದರ್ಭದಲ್ಲಿ ಎಸ್ ಮಾರೆಪ್ಪ, ಬಸವರಾಜ ಸನದಿ, ಬಾಬು ಪೂಜಾರಿ, ಸಿ ಮುನಿಕೃಷ್ಣ, ನಾಗರಾಜ್ ಕೊಡಿಗೆ ಹಳ್ಳಿ ಹಾಗೂ ಇತರರು ಇದ್ದರು.

loading...