ಮದುವೆ ದಿನವೇ ನಾಪತ್ತೆಯಾದ ಮದುಮಗ:ಕಂಗಾಲಾದ ಕುಟುಂಬಸ್ಥರು*

0
414

ಕನ್ನಡಮ್ಮ ಸುದ್ದಿ -ಸಂಕೇಶ್ವರ: ಇಂದು ನಡೆಯಬೇಕಿದ್ದ ಮದುವೇ ಮದುಮಗನೇ ನಾಪತ್ತೆಯಾಗಿರುವ ಘಟನೆ
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ನಡೆದಿದೆ .
ಸಮೀಪದ ಚಿಕ್ಕಾಲಗುಡ್ಡ ಸಾಯಿ ಕಾರ್ಯಾಲಯದಲ್ಲಿ ಇಂದು ನಡೆಯಬೇಕಿದ್ದ ಮದುವೆ ೧೨.೩೦ ಕ್ಕೆ ಅಕ್ಷತಾರೋಹಣ ನಿಗಧಿಯಾಗಿತ್ತು ,ಆದರೆ ಯಾರಿಗೂ ಹೇಳದೆ ಕೇಳದೆ ಮದುಮಗ ನಾಪತ್ತೆಯಾಗಿದ್ದಾನೆ . ಸಂಕೇಶ್ವರ ಪಟ್ಟಣದ ಸುನೀಲ ಪಾಟೀಲ ನಾಪತ್ತೆಯಾದ ಮದುಮಗ.

ನಿನ್ನೆ ಸಂಜೆವರೆಗೂ ಮದುವೇಮನೆಯಲ್ಲಿಯೇ ಇದ್ದ ಸುನೀಲ ರಾತ್ರೋರಾತ್ರಿ ನಾಪತ್ತೆಯಾಗಿದ್ದು ,ಬೆಳಗಿನ ಅರಶಿನ ಕಾರ್ಯಕ್ಕೆ ಸುನೀಲನನ್ನು ಹುಡುಕಿದಾಗ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ .
ಸುನೀಲ ಪಾಟೀಲ ಕನ್ನಡ ಪರ ಸಂಘಟನೆಯೊಂದರ ತಾಲೂಕು ಅಧ್ಯಕ್ಷನಾಗಿದ್ದು ,ಮಹಾರಾಷ್ಟ್ರ ಮೂಲದ ಯುವತಿಯೊಂದಿಗೆ ಇಂದು ನಡೆಯಬೇಕಿದ್ದ ಮದುವೆ. ಸಂಕೇಶ್ವರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ

 

loading...