ಉಪಸಮರದ ಬಳಿಕ ಸರ್ಕಾರ ಪತನ : ಸಿದ್ಧರಾಮಯ್ಯ

0
16

ಕನ್ನಡಮ್ಮ ಸುದ್ದಿ
ಅಥಣಿ ೨೯: ಉಪಚುನಾವಣೆಯಲ್ಲಿ ಕಾಂಗ್ರೆಸ್ ೧೨ ಕ್ಷೇತ್ರದಲ್ಲಿ ಗೆದ್ದರೆ ಬಿಜೆಪಿ ಸರಕಾರ ಪತನವಾಗಲಿದ್ದು, ಜೆಡಿಎಸ್ ಜತೆಗೂಡಿ ಸರ್ಕಾರ ರಚಿಸುವ ಕುರಿತು ಆಲೋಚಿಸಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ತಾಲೂಕಿನ ದರೂರ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ಪರ ಪ್ರಚಾರ ಸಭೆಯಲ್ಲಿ ಮಾತನಾಡುತ್ತ, ಉಪ ಚುನಾವಣೆ ಫಲಿತಾಂಶದ ನಂತರ ಏನಾಗುತ್ತದೆ ಎಂದು ಹೇಳಲಾಗದು. ಜೆಡಿಎಸ್ ಮೈತ್ರಿ ಕುರಿತಂತೆ ಆಲೋಚನೆ ಮಾಡಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ೧೫ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಬಿಜೆಪಿಯವರು ಭಾರೀ ಪ್ರಮಾಣದಲ್ಲಿ ಹಣ ಖರ್ಚು ಮಾಡುತ್ತಿದ್ದಾರೆ. ಅಂತಹ ಒಳ ಒಪ್ಪಂದ ಮಾಡಿಕೊಂಡೇ ಎಲ್ಲಾ ೧೭ ಜನ ಶಾಸಕರಿಂದ ರಾಜೀನಾಮೆ ಕೊಡಿಸಿದ್ದಾರೆ ಎಂದರು.
ಸಿದ್ದರಾಮಯ್ಯ ಏಕಾಂಗಿ ಒಬ್ಬರೇ ಪ್ರಚಾರ ಮಾಡುತ್ತಿದ್ದಾರೆ ಎಂದು ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಸಿ.ಎಂ. ಯಡಿಯೂರಪ್ಪ ಒಬ್ಬರೇ ಪ್ರಚಾರಕ್ಕೆ ಹೋಗುತ್ತಿದ್ದಾರೆ. ಆ ಬಗ್ಗೆ ಯಾರೂ ಮಾತನಾಡಲು ತಯಾರಿಲ್ಲ.ಕಾಂಗ್ರೆಸ್‌ನಲ್ಲಿ ಅಸಮಾಧಾನ ಇಲ್ಲ ನಾನು, ಒಂದು ಕಡೆ ಅಧ್ಯಕ್ಷರು, ಕಾರ್ಯಾಧ್ಯಕ್ಷರು ಮತ್ತೊಂದು ಕಡೆ ಪ್ರಚಾರ ಮಾಡುತ್ತಿದ್ದೇವೆ ಎಲ್ಲರೂ ಆಯಾ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಉಗ್ರಪ್ಪ ನನ್ನ ಜೊತೆಗೆ ಇದ್ದಾರೆ. ಅಥಣಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ಒಳ್ಳೆಯ ವ್ಯಕ್ತಿ, ಖಂಡಿತವಾಯೂ ಈ ಬಾರಿ ಗೆಲ್ಲುತ್ತಾರೆ. ಮಹೇಶ ಕುಮಠಳ್ಳಿಗೆ ಸೋಲು ಖಚಿತ ಎಂದರು.
ತೆಲಸAಗ ಗ್ರಾಮದಲ್ಲಿ ಅದ್ಧೂರಿ ಸ್ವಾಗತ ದೊರೆತಿದ್ದರಿಂದ ಸಿದ್ದರಾಮಯ್ಯ ಹುಮ್ಮಸ್ಸಿನಿಂದಲೆ ತಾಲೂಕಿನ ಗ್ರಾಮಗಳಲ್ಲಿ ಸಂಚರಿಸಿದ್ದು ಕಂಡುಬAದಿತು.
ಅವರೊಂದಿಗೆ ಎಂ.ಬಿ. ಪಾಟೀಲ, ಲಕ್ಷಿö್ಮÃ ಹೆಬ್ಬಾಳಕರ, ಅಭ್ಯರ್ಥಿ ಗಜಾನನ ಮಂಗಸೂಳಿ ಮೊದಲಾದವರು ಉಪಸ್ಥಿತರಿದ್ದರು.
..

loading...