ಬಿಜೆಪಿ ಮುಸ್ಲಿಂರನ್ನು ಟಾರ್ಗೆಟ್ ಮಾಡುತ್ತಿದೆ: ಪ್ರಕಾಶ ಅಂಬೇಡ್ಕರ್ ಆರೋಪ

0
8

ಕನಡಮ್ಮ ಸುದ್ದಿ ಚಿಕ್ಕೋಡಿ /ಕಾಗವಾಡ ೦೮: ದೇಶದ ಆರ್ಥಿಕತೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ, ಕಾಂಗ್ರೆಸ್ ಹಾಗೂ ಬಿಜೆಪಿ ಬೇರೆಯಲ್ಲ , ಎರಡು ಪಕ್ಷಗಳ ರಾಜನೀತಿ ಒಂದೆ ಇದೆ ,ಕೇಂದ್ರ ಗೃಹಮಂತ್ರಿ ಅಮಿತ ಶಾ ಮುಸ್ಲಿಂರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ,ಮುಸ್ಲಿಂಮರ ಮತದಾನದ ಸಂಖ್ಯೆ ಕಡಿಮೆ ಮಾಡುವ ಹುನ್ನಾರ ನಡೆಯುತ್ತಿದೆ ,ಇದರ ಬಗ್ಗೆ ಶೀಘ್ರವೇ ಆಂದೋಲನ ಮಾಡಲಾಗುವುದು ಎಂದು ವಂಚಿತ ಬಹುಜನ ಅಘಾಡಿ ಪಕ್ಷದ ಸಂಸ್ಥಾಪಕ ಪ್ರಕಾಶ ಅಂಬೇಡ್ಕರ್ ಕೇಂದ್ರ ಸರಕಾರ ಹಾಗೂ ಕೇಂದ್ರ ಸಚಿವ ಅಮಿತ ಶಾ ವಿರುದ್ದ ಆರೋಪಿಸಿದ್ದಾರೆ.

ಕಾಗವಾಡ ತಾಲೂಕಿನ ಉಗಾರ ಖುದ್ರ ಪಟ್ಟಣದಲ್ಲಿ ಉಪ ಚುನಾವಣಾ ವಂಚಿತ ಬಹುಜನ ಅಘಾಡಿ ಅಭ್ಯರ್ಥಿ ವಿವೇಕ ಶೆಟ್ಟಿ ಪರ ಮತಯಾಚನೆ ಸಭೆ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದರು, ಕಳೆದ ನಾಲ್ಕು ದಿನದ ಹಿಂದೆ ಗೃಹಮಂತ್ರಿ ಅಮಿತ ಶಾ ನಾಗರಿಕ ಸದಸ್ಯತ್ವ ಕಾಯ್ದೆ ಬಗ್ಗೆ ಮಾತನಾಡಿದ್ದಾರೆ, ಇದು ಮುಸ್ಲಿಂ ಸಮುದಾಯದ ಮತ ಕಡಿಮೆಗೊಳಿಸುವ ಹುನ್ನಾರ ನಡೆಸುತ್ತಿರುವದರ ವಿರುದ್ದ ವಂಚಿತ ಬಹುಜನ ಅಘಾಡಿ ಪಕ್ಷದ ಹೋರಾಟ ನಡೆಸಲಿದೆ ಎಂದರು.
ವAಚಿತ ಬಹುಜನ ಆಘಾಡಿ ಪಕ್ಷದ ಅಧಿಕೃತ ಅಭ್ಯರ್ಥಿ ವಿವೇಕ ಶೆಟ್ಟಿ ಮಾತನಾಡಿ, ಹಿಂದಿನ ೧೯ ವರ್ಷದ ದುರಾಡಳಿತ ನೀಡಿದ ಮತ್ತು ೧೪ ತಿಂಗಳ ಅಧಿಕಾರ ನಡೆಸಿ ಇಬ್ಬರೂ ಶಾಸಕರನ್ನು ನೋಡಿದ್ದೇವೆ. ಆದರೆ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ನನ್ನ ಬೆಂಬಲಿಕ್ಕಿದ್ದಾರೆ ಡಿ.೫ ರಂದು ನಡೆಯು ಉಪ ಚುನಾವಣಾ ಮತದಾನ ಮಾಡಿ ಎಂದು ಮನವಿ ಮಾಡಿದರು.

ಕಾಗವಾಡ ಮತಕ್ಷೇತ್ರದಲ್ಲಿ ಜಾತಿ ಮತಗಳ ಒಡೆಯುವ ರಾಜು ಕಾಗೆ ಬೇಡವೇಂದು ಶ್ರೀಮಂತ ಪಾಟೀಲ ಚುನಾಯಿಸಲಾಯಿತು. ಆದರೆ ಅವರ ಸ್ವತಃ ಲಾಭಕ್ಕೆ ಪಕ್ಷ ಬಿಟ್ಟು ಬಿಜೆಪಿ ಸೇರ್ಪಡೆಯಾಗಿ ಅಭ್ಯರ್ಥಿಯಾಗಿದ್ದಾರೆ . ಇಂತಹ ಸ್ವಾರ್ಥ ರಾಜಕಾರಣ ಗಳಿಗೆ ಬುದ್ದಿ ಕಲಿಸಲು ಈ ಬಾರಿ ವಂಚಿತ ಬಹುಜನ ಆಘಾಡಿ ಪಕ್ಷವನ್ನು ಬೆಂಬಲಿಸಬೇಕು ಎಂದರು.
ವAಚಿತ ಬಹುಜನ ಅಘಾಡಿ ಪಕ್ಷದ ಜಿಲ್ಲಾ ಮುಖಂಡ ಉಪಸ್ಥಿತರಿದ್ದರು .

loading...