ಕಾಂಗ್ರೆಸ್ ಒಗ್ಗಟ್ಟು ಛಿದ್ರವಾಗಿದೆ: ಯಡಿಯೂರಪ್ಪ

0
24

ಕನ್ನಡಮ್ಮ ಸುದ್ದಿ: ಅಥಣಿ ೦೧: ಕಾಂಗ್ರೆಸ್‌ನ ಪ್ರಮುಖ ನಾಯಕರುಗಳಾದ ಖರ್ಗೆ ಸೇರಿದಂತೆ ಯಾರೂ ಪ್ರಚಾರಕ್ಕೆ ಬರುತ್ತಿಲ್ಲ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಒಗ್ಗಟ್ಟು ಛಿದ್ರವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಪಟ್ಟಣದ ಡಿಸಿಎಂ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಡಸ್ಪರೆಟ್ ಆಗಿ ಏನು ಬೇಕೋ ಅದನ್ನ ಮಾತನಾಡುತ್ತಿದ್ದಾರೆ. ದೇವೇಗೌಡರು ಹಿರಿಯ ರಾಜಕಾರಣ ಅವರ ಅನುಭವದ ಮೂಲಕ ಏನೇನೋ ಮಾತನಾಡುತ್ತಿದ್ದು, ಕುಮಾರಸ್ವಾಮಿ, ಸಿದ್ದರಾಮಯ್ಯ, ದೇವೇಗೌಡರು ಮಾತನಾಡುವ ಬಗ್ಗೆ ನಾನು ಪ್ರತಿಕ್ರಿಯೆ ಕೊಡಲಾರೆ. ಅವರು ಮಾತನಾಡಲು ಸ್ವತಂತ್ರರು. ನಾವಂತೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ. ಈಗ ಬೆಳಗಾವಿ ಜಿಲ್ಲೆಯ ೩ ಕ್ಷೇತ್ರಗಳಲಿ ಮೂರು ದಿನಗಳ ಕಾಲ ಪ್ರಚಾರ ನಡೆಸುತ್ತಿದ್ದೇನೆ. ಬಿಜೆಪಿ ಪರ ಜನರ ಒಲವು ಹೆಚ್ಚಿದೆ. ಹಾಗಾಗಿ ಅಥಣ ಯಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ, ಕಾಗವಾಡ ಮತಕ್ಷೇತ್ರದ ಅಭ್ಯರ್ಥಿ ಶ್ರೀಮಂತ ಪಾಟೀಲ, ಗೋಕಾಕ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೋಳಿ ಅವರು ಗೆದ್ದು ಬಿಜೆಪಿ ಸರಕಾರ ಇನ್ನೂ ಮೂರುವರೆ ವರ್ಷಗಳ ಕಾಲ ಸಭದ್ರವಾಗಿ ಸರಕಾರ ನಡೆಸಲಿದೆ. ಇದರಲ್ಲಿ ಯಾವುದೆ ಸಂಶಯ ಬೇಡ ಎಂದು ಹೇಳಿಕೆ ನೀಡಿದರು
ನನ್ನ ರಾಜಕೀಯ ಜೀವನದಲ್ಲಿ ಈಗ ಸಿಗುತ್ತಿರುವಷ್ಟು ಜನ ಸ್ಪಂದನೆ ನೋಡಿರಲಿಲ್ಲ, ಒಂದು ಸಲ ನಮ್ಮ ಮಾಲೀಕರಾದ ಮತದಾರ ತೀರ್ಮಾನ ಮಾಡಿದರೆ ಅದನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ, ಮೂರುವರೆ ವರ್ಷ ಯಡಿಯೂರಪ್ಪ ಸರ್ಕಾರ ಇರಬೇಕು ಅಂತಾ ಜನ ಬಯಸಿದ್ದಾರೆ. ಹೀಗಾಗಿ ನೂರಕ್ಕೆ ನೂರರಷ್ಟು ಹದಿನೈದು ಕ್ಷೇತ್ರಗಳಲ್ಲಿ ನಾವೇ ಗೆಲ್ಲುತ್ತೇವೆ, ಶೇಕಡಾ ೭೦, ೭೫ರ ಷ್ಟು ಮತದಾನ ಆಗುವಂತೆ ನೋಡಿಕೊಳ್ಳಬೇಕಿದೆ. ಅಲ್ಪಸಂಖ್ಯಾತ ಮುಸ್ಲಿಂರು ಮತ್ತು ಕ್ರಿಶ್ಚಿಯನ್.ÀÄ ಕೂಡ ನಮ್ಮ ಜೊತೆ ಕೈ ಜೋಡಿಸಲಿದ್ದಾರೆ ಎಂದರು.
ಈ ವೇಳೆ ಡಿಸಿಎಂ ಲಕ್ಷö್ಮಣ ಸವದಿ, ಸಂಸದ ಅಣ್ಣಾಸಾಹೇಬ ಜೊಲ್ಲೆ, ರಾಯಬಾಗ ಶಾಸಕ ದೂಯೋಧನ ಐಹೋಳೆ, ಚುನಾವಣಾ ಉಸ್ತುವರಿ ಶ್ರೀಕಾಂತ ಕುಲಕಣ ð, ಕಾರ್ಯದರ್ಶಿ ಮಹೇಶ ತಂಗಿನಕಾಯಿ, ತಾಲೂಕು ಅಧ್ಯಕ್ಷ ಶ್ರೀಶೈಲ ನಾಯಿಕ, ಸುಶೀಲ ಪತ್ತಾರ, ಶೇಖರ ಕನಕರೇಡ್ಡಿ, ದಿಲೀಪ ಲೋಣಾರೆ, ದತ್ತಾ ವಾಸ್ಟರ್, ರಾಜೂ ಬುಲಬುಲೆ ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.
..

loading...