ಕುದುರೆ ವ್ಯಾಪಾರ ಮಾಡಿದ್ದು ಯಡಿಯೂರಪ್ಪನ ಮಹತ್ವದ ಸಾಧನೆ: ಮಾಜಿ ಪ್ರಧಾನಿ ದೇವೇಗೌಡ

0
18

ಬೆಳಗಾವಿ/ ಗೋಕಾಕ: ಕುದುರೆ ವ್ಯಾಪಾರ ಮಾಡಿದ್ದು ಯಡಿಯೂರಪ್ಪನ ಮಹತ್ವದ ಸಾಧನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವಾಗ್ದಾಳಿ ನಡೆಸಿದರು.
ಸೋಮವಾರ ಗೋಕಾಕ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು, ಅನರ್ಹ ಶಾಸಕರಿಗೆ ಮಂತ್ರಿ ಸ್ಥಾನ ಕೊಡ್ತೇನಿ ಅಂತಾರೆ. ಲಕ್ಷ್ಮಣ ಸವದಿ‌ ಅವರಿಗೆ ಡಿಸಿಎಂ ಸ್ಥಾ‌ನ ಕೊಟ್ಟರು ಟಿಕೆಟ್ ಕೊಡಲಿಲ್ಲ. ಇಂಥ ಒಂದು ಭರವಸೆ ಮೇಲೆ ಜನರು ಕೆಂಗೆಟ್ಟು‌‌ ಹೋಗಿದ್ದಾರೆ ಎಂದರು.
ಯಡಿಯೂರಪ್ಪ ಬಂದ ಮೇಲೆ ಜಲಾಶಯ ತುಂಬಿ ಹರಿಯುತ್ತವೆ ಎಂದು ಹೇಳುತ್ತಾರೆ. ಇದು ಹಾಸ್ಯಾಸ್ಪದ ಮಾತು.
ಮಹಾರಾಷ್ಟ್ರದಲ್ಲಿ ಬಂದ ಮಳೆಯಿಂದ ಸಾಕಷ್ಟು ಪ್ರಮಾಣದಲ್ಲಿ ಕರ್ನಾಟಕದಲ್ಲಿ ಪ್ರವಾಹ ಬಂದು. ಒಂದು ತಿಂಗಳುಗಳ ಕಾಲ ಯಡಿಯೂರಪ್ಪ ಒಬ್ರೆ ಓಡಾಡಿದ್ರು. ಸಂತ್ರಸ್ತರ ಕಷ್ಟಗಳನ್ನು ತೃಪ್ತಿಕರವಾಗಿ ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ‌ ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ದ ಹೋರಾಟ ಮಾಡುತ್ತಿದ್ದೇನೆ ಎಂದರು.
ನನ್ನ ಅನುಮತಿ ಇಲ್ಲದೆ ಹಿಂದೆ ಕುಮಾರಸ್ವಾಮಿ ಬಿಜೆಪಿ ಜತೆಗೆ ಹೋದರು. ಬಳಿಕ ಸೋನಿಯಾ ಗಾಂಧಿಯವರು ಕಳೆದ‌ ವಿಧಾನಸಭಾ ಚುನಾವಣಾ ಫಲಿತಾಂಶ ಬಂದ‌ ಮೇಲೆ‌ ಗುಲಾಮನಬಿ ಆಜಾದ್ ಅವರು‌ ಮನೆಗೆ ಬಂದು ಕೇಳಿದ ಬಳಿಕ ಸಮ್ಮಿಶ್ರ ಸರಕಾರಕ್ಕೆ ಒಪ್ಪಿಗೆ ನೀಡಿದೆ ಎಂದರು.
ಸಮ್ಮಿಶ್ರ ಸರಕಾರದ ಅವದಿಯಲ್ಲಿ ಯಡಿಯೂರಪ್ಪನವರು ಸದನದಲ್ಲಿ ಕುಮಾರಸ್ವಾಮಿ ‌ಅವರು ರೈತರ ಸಾಲಮನ್ನಾ ಮಾಡಬೇಕೆಂದು ನನ್ನ ಹೆಸರು ಪ್ರಸ್ತಾಪ ಮಾಡಿ ಮಾತನಾಡಿದರು. ಸಿದ್ದರಾಮಯ್ಯ ಸರಕಾರದ ಯೋಜನೆಗಳನ್ನು ಮುಂದುವರೆಸಿ 14 ತಿಂಗಳಲ್ಲಿ ಕುಮಾರಸ್ವಾಮಿ ‌ಸರಕಾರ ಸಾಕಷ್ಟು ಜನಪರ ಯೋಜನೆಯನ್ನು‌ ನೀಡಿದೆ ಎಂದರು.
ಗೋಕಾಕಗೆ ಬಂದು ಬಹಳ ದಿನಾ ಆಗಿತ್ತು. ಈಗ ಬಂದಿದ್ದು ಒಬ್ಬ ಕಾರ್ಯಕರ್ತನಾಗಿ ಬಂದಿದ್ದೇನೆ. ನಾನು ಈಗ ಲೋಕಸಭಾ ಸದಸ್ಯನೂ ಅಲ್ಲ.
ನಾನು ಸಿಎಂ ಆಗಿದ್ದ ಸಂದರ್ಭದಲ್ಲಿ 17 ಶಾಸಕರನ್ನು ನೀಡಿತ್ತು. ನಾನು ಪ್ರಧಾನಮಂತ್ರಿಯಾಗಲು ಬೆಳಗಾವಿ ‌ಜಿಲ್ಲೆಯ ಕೊಡುಗೆ ಸಾಕಷ್ಟಿದೆ.
ಲೀಲಾವತಿ ಪ್ರಸಾದ ಹಾಗೂ ಕೌಜಲಗಿ ಅವರಿಗೆ ಮಂತ್ರಿ ಮಾಡಿದ್ದೆ. ಬೆಳಗಾವಿಗೂ ಹಾಗೂ ನನಗೂ ಅವಿನಾಭಾವ ಸಂಬಂಧವಿದೆ. 8 ಸಕ್ಕರೆ ಕಾರ್ಖಾನೆ,‌ಮಾರ್ಕಂಡಯ್ಯ ಯೋಜನೆ ನೀಡಿದ್ದೇನೆ.
ಬೆಳಗಾವಿ ‌ಜಿಲ್ಲೆಯ ರೈತರ ಪರವಾಗಿ ಜೀವನನ್ನು ಮುಡಿಪಾಗಿಟ್ಟ ‌ಹೋರಾಟ ನಡೆಸಿದ್ದೇನೆ.
ಕೃಷ್ಣಾ ನದಿಯ ನೀರಾವರಿ ‌ಯೋಜನೆಗೆ ಹಣದ ಕೋರತೆ ಇತ್ತು. ಈ‌ ಯೋಜನೆಗೆ 200 ಕೋಟಿ ರು. ಹಣ ಕೇಳಿದೆ ಆಗ ಕೇಂದ್ರ ಕೊಡಲಿಲ್ಲ. ಕೊನೆಗೆ ಎರಡು ಯೋಜನೆಗೆ 122 ಕೋಟಿ ರು. ನೀಡಿದ ಸಂದರ್ಭದಲ್ಲಿ ನಾನು ಸಿಎಂ ಸ್ಥಾ‌ನಕ್ಕೆ‌ ರಾಜೀನಾಮೆ ನೀಡಿದೆ ಎಂದರು.
ಇಂದಿರಾ ಗಾಂಧಿ, ನಿಜಲಿಂಗಪ್ಪನವರನ್ನು ಚಿನ್ನದಿಂದ ತೂಕಿಸಿದರು. ಕೇಂದ್ರ ಸರಕಾರ ಆರ್ಥಿಕ ನೆರವು ನೀಡಿತ್ತು. ಆದರೆ ಆ ಯೋಜನೆಗಳು ಯಾವವು ಆಗಲಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಉಪಚುನಾವಣೆ ಕುರಿತು ಮಾಜಿ ಸಿಎಂ ಕುಮಾರಸ್ವಾಮಿ ಅವರು ಎರಡು ದಿ‌ನ ಇದ್ದು ಸ್ವತಃ ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ಪರ ಪ್ರಚಾರ ನಡೆಸಿದ್ದಾರೆ.
ಉಪಚುನಾವಣೆಯಲ್ಲಿ ಗೋಕಾಕ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ಅವರು ನಮ್ಮ ಪಕ್ಷವನ್ನು ಇಲ್ಲಿ ಕಷ್ಟ ಪಟ್ಟು ಕೆಲಸ ಮಾಡಿದ್ದಾರೆ. ನಮ್ಮಲ್ಲಿ‌ ಭಿನ್ನಾಭಿಪ್ರಾಯದಿಂದ ಕಳೆದ ಸಲ ಬಿಜೆಪಿಯಿಂದ ಸ್ಪರ್ಧೆ ನಡೆಸಿ ಕಡಿಮೆ ಅಂತರದಲ್ಲಿ ಸೋತ್ತಿದ್ದಾರೆ ಎಂದರು.
ನಮ್ಮಿಂದ‌ ಆದ ಅನ್ಯಾಯದಿಂದ ಅಶೋಕ‌ ಪೂಜಾರಿ ಅವರಿಗೆ ಈ ಉಪಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧೆ ಮಾಡಬೇಕೆಂದು ದೂರವಾಣಿ ಕರೆ ಮಾಡಿ ತಿಳಿಸಿದೆ. ಪೂಜಾರಿ ಅವರ ಮೇಲೆ ಸಾಕಷ್ಟು ಒತ್ತಡ ಇತ್ತು. ಬಿಜೆಪಿ ಅವರು ಯಾವುದೇ ಸ್ಥಾನ ಹಾಗೂ ಆರ್ಥಿಕವಾಗಿ ಮೊತ್ತ ಕೊಡುತ್ತೇವೆ ಎಂದು ಹೇಳಿದರೂ ಆ ಒತ್ತಡಕ್ಕೆ ಮಣಿಯದಿರುವುದು ಶ್ಲಾಘನೀಯ.
ಜೆಡಿಎಸ್ ಅಭ್ಯರ್ಥಿಯ ಮೇಲೆ ಸತೀಶ ಜಾರಕಿಹೊಳಿ‌ ಸಾಕಷ್ಟು ನಿಗ್ರ ಮಾಡಿದ್ರು. ಸಿದ್ದರಾಮಯ್ಯ ಈ ಕ್ಷೇತ್ರವನ್ನು ಹತೋಟಿಗೆ ತೆಗೆದುಕೊಂಡರು. ರಾಮಬಾವು ಪೋತದಾರ ಮೇಲೆ ಹಲ್ಲೆ ಮಾಡುವ ಯತ್ನವೂ ನಡೆದಿತ್ತು ಎಂದು ನೆನಪಿಸಿಕೊಂಡರು.
ಮಾಜಿ ಸಚಿವ ಕಾಶೇಪ್ಪ ಬಂಡೇಪೂರ, ಮಾಜಿ‌ ಶಾಸಕ ಕೋನರೆಡ್ಡಿ, ಜೆಡಿಎಸ್ ಮುಖಂಡ ಭೀಮಪ್ಪ‌ ಗಡಾದ, ಶಂಕರ ಮಾಡಲಗಿ, ಗೋಕಾಕ ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

loading...