ಶರಣ ಮೇಳ ಲಿಂಗಾಯತರ ವಾರ್ಷಿಕ ಪವಿತ್ರ ಸಮಾವೇಶ

0
74

ಕನ್ನಡಮ್ಮ ಸುದ್ದಿ- ಧಾರವಾಡ: ಶರಣ ಮೇಳ ಎಂಬುವದು ಲಿಂಗಾಯತರ ವಾರ್ಷಿಕ ಪವಿತ್ರ ಸಮಾವೇಶ, ಸಿಖ ಧರ್ಮಿಯರು ಅಮೃತಸರದಲ್ಲಿ, ಕ್ರೆöÊಸ್ತರು ಜರೂಸಲೇಮದಲ್ಲಿ, ಮಹ್ಮದೀಯರು ಮಕ್ಕಾದಲ್ಲಿ ಸಮಾವೇಶಗೊಳ್ಳುವ ರೀತಿಯಲ್ಲಿ ಲಿಂಗಾಯತರು ಕೂಡಲ ಸಂಗಮದಲ್ಲಿ ಶರಣ ಮೇಳದಲ್ಲಿ ಸಮಾವೇಶಗೊಂಡು ಪರಸ್ಪರ ಧಾರ್ಮಿಕ ಬಾಂದವ್ಯ ಬೆಳೆಸಿಕೊಳ್ಳಬೇಕು ಎಂದು ಕೂಡಲ ಸಂಗಮದ ಬಸವಧರ್ಮ ಪೀಠಾಧ್ಯಕ್ಷೆ ಶ್ರೀ ಮಾತೆ ಗಂಗಾದೇವಿ ಅಭಿಪ್ರಾಯಪಟ್ಟರು.
ಡಾ ಪಾಟೀಲ ಪುಟ್ಟಪ್ಪ ಸಭಾ ಭವನದಲ್ಲಿ ರಾಷ್ಟಿçÃಯ ಬಸವ ದಳ ಹಾಗೂ ಲಿಂಗಾಯತ ಧರ್ಮ ಮಹಾಸಭೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ “ಶರಣಮೇಳ ಪ್ರಚಾರಾರ್ಥ ವಿಶ್ವಧರ್ಮ ಪ್ರವಚನ” ಕಾರ್ಯಕ್ರಮದ ಸಾನೀಧ್ಯವಹಿಸಿ ಮಾತನಾಡಿದರು. ೨೦೨೦ ನೇ ಸಾಲಿನ ೩೩ ನೇ ಶರಣ ಮೇಳವು ತಮ್ಮ ಜವಾಬ್ದಾರಿ ಹೆಚ್ಚಿಸಿದೆ ಹೀಗಾಗಿ ಅರ್ಥಪೂರ್ಣವಾಗಿಸಬೇಕು. ಶ್ರೀ ಲಿಂಗಾನAದ ಸ್ವಾಮಿಜಿ ಹಾಗೂ ಡಾ. ಶ್ರೀ ಮಾತೆ ಮಹಾದೇವಿಯವರ ಉಭಯ ಲಿಂಗೈಕ್ಯ ಗುರುಗಳ ಸತ್ ಸಂಕಲ್ಪ ಪೂರೈಸಿ ಗುರುಬಸವಣ್ಣನವರ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದರು.
ಡಾ. ನೀತಿನಚಂದ ಹತ್ತಿಕಾಳ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪೂಜ್ಯ ಲಿಂಗಾನAದ ಮಹಾಸ್ವಾಮಿಗಳು ಪ್ರಾರಂಭಿಸಿದ ಶರಣ ಮೇಳ ನಂತರ ಪೂಜ್ಯ ಮಾತಾಜಿಯವರ ಸಂಘಟನಾ ಶಕ್ತಿಯಿಂದ ೩೨ ವರ್ಷ ಅದ್ಬುತ ಯಶಸ್ವಿ ಕಂಡಿದೆ. ೩೩ನೇಯ ಐತಿಹಾಸ ಶರಣ ಮೇಳಕ್ಕೆ ನಾವೆಲ್ಲಾ ಸಜ್ಜಾಗುತ್ತಿದ್ದೇವೆ. ಗಂಗಾ ಮಾತಾಜಿಯವರ ನೇತ್ರತ್ವದಲ್ಲಿ ಶರಣ ಮೇಳ ಅರ್ಥಪೂರ್ಣವಾಗಿ ಆಚರಿಸಿ ಬಸವಾದಿ ಶರಣರ ಸಂಕಲ್ಪವನ್ನು ಈಡೇರಿಸೋಣ ಎಂದರು.
ಮಾಜಿ ಸಚಿವ ಅಲ್ಕೋಡ ಹನುಮಂತಪ್ಪ ಅವರು ನೂತನ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿ, ಮಹಿಳೆಯರ ಮತ್ತು ದಲಿತರ ಶೋಷಣೆ ವಿರುದ್ದ ಬಂಡೆದ್ದು ಸಮ ಸಮಾಜವನ್ನು ನಿರ್ಮಿಸಿದ ಬಸವಣ್ಣನವರು ದಲಿತೋದ್ದಾರದ ಪ್ರಪ್ರಥಮ ರೂವಾರಿ. ಪ್ರಜಾಪ್ರಬುತ್ವದ ಪರಿಕಲ್ಪನೆಯನ್ನು ಇಂಗ್ಲAಡಗಿAತ ಮೊದಲೇ ಹನ್ನೆರಡನೇ ಶತಮಾನದಲ್ಲಿಯೇ ಕನ್ನಡ ನಾಡಿನಲ್ಲಿ ಅನುಭವ ಮಂಟಪದ ಮುಖಾಂತರ ರೂಪಗೊಳಿಸಿ ಜಾಗತಿಕ ಪ್ರಜಾಪ್ರಬುತ್ವ ವ್ಯವಸ್ಥೆಗೆ ಅಡಿಪಾಯ ಹಾಕಿದ ಕೀರ್ತಿ ಬಸವಾದಿ ಶರಣರಿಗೆ ಸಲ್ಲುತ್ತದೆ ಎಂದರು.
ಗ್ರಂಥಾಲಯ ವಿಜ್ಞಾನಿ ಡಾ ಎಸ್. ಆರ್. ಗುಂಜಾಳ ಸನ್ಮಾನ ಸ್ವೀಕರಿಸಿ ಮಾತನಾಡಿ, ಬಸವಣ್ಣನವರನ್ನ ಜನಮಾನಸಕ್ಕೆ ಮುಟ್ಟಿಸಿ ಅವರ ತತ್ವಗಳನ್ನು ತಮ್ಮ ಜೀವನದ ಉದ್ದಕ್ಕೂ ದಣಿವರಿಯದೇ ಪ್ರಚಾರ ಮಾಡಿ ಬಸವ ಯುಗವನ್ನೇ ನಿರ್ಮಾಣ ಮಾಡಿದ ಕೀರ್ತಿ ಲಿಂಗಾನAದ ಸ್ವಾಮೀಜಿ ಹಾಗೂ ಮಾತಾಜಿ ರವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಕೆ.ಎಸ್. ಕೋರಿಶೆಟ್ಟರ ಪ್ರಾಸ್ತಾವಿಕ ಮಾತನಾಡಿದರು. ಅಶೋಕ ಬಿರಾದಾರ ಸ್ವಾಗತಿಸಿದರು. ಪ್ರಕಾಶ ಗರಗ ಪರಿಚಯಿಸಿದರು. ಡಿ. ಬಿ. ಇಂಗಳಹಳ್ಳಿ ವಂದಿಸಿದರು. ನಂತರ ಕುಮಾರಿ. ಕಾವೇರಿ ಕಟಗಿ ಅವರಿಂದ ವಚನ ನೃತ್ಯ ಜರುಗಿತು.

loading...