ವಿಶೇಷ ಸಭೆ ಏರ್ಪಡಿಸಲು ಸದಸ್ಯರ ಆಗ್ರಹ

0
17

ಶಿರಹಟ್ಟಿ: ಕಂದಾಯ ಇಲಾಖೆಯಲ್ಲಿಯ ಸಮಸ್ಯೆಗಳನ್ನು ಬಗೆಹರಿಸಬೇಕಾದಂತಹ ಶಿರಹಟ್ಟಿ ತಹಶೀಲ್ದಾರ ಹಾಗೂ ಲಕ್ಷೆö್ಮÃಶ್ವರ ತಹಶೀಲ್ದಾರ ಹಲವಾರು ಬಾರಿ ಸಭೆಗಳಿಗೆ ಗೈರು ಉಳಿಯುತ್ತಿರುವದರಿಂದ ನಾವೇ ಅವರಿದ್ದಲ್ಲಿಗೆ ತೆರಳಿ ಶಿರಹಟ್ಟಿ ಹಾಗೂ ಲಕ್ಷೆö್ಮÃಶ್ವರ ತಾಲೂಕಾ ಕೇಂದ್ರಗಳಲ್ಲಿ ವಿಶೇಷ ಸಭೆಗಳನ್ನು ನಡೆಸುವುದಕ್ಕೆ ಸಭೆಯಲ್ಲಿ ಠರಾವು ಪಾಸ್ ಮಾಡಬೇಕೆಂದು ತಾಪಂ ಸದಸ್ಯ ಅಶೋಕಯ್ಯ ಮುಳಗುಂದ ಮಠ ಹಾಗೂ ಸದಸ್ಯೆ ಉಮಾ ಹೊನಗಣ್ಣವರ ಆಗ್ರಹಿಸಿದರು.
ಅವರು ಸೋಮವಾರ ಶಿರಹಟ್ಟಿಯ ತಾಪಂ ಸಭಾ ಭವನದಲ್ಲಿ ಅಧ್ಯಕ್ಷೆ ಸುಶೀಲವ್ವ ಥಾವರೆಪ್ಪ ಲಮಾಣಿ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಮಾತನಾಡಿದರು.
ಎರಡು ತಾಲೂಕುಗಳ ತಹಶೀಲ್ದಾರರನ್ನು ಸಂಪರ್ಕಿಸಿ ಸಭೆಯ ದಿನಾಂಕವನ್ನು ಗೊತ್ತುಪಡಿಸಬೇಕು. ಹಾಗೂ ಮುಂದಿನ ಸಾಮಾನ್ಯ ಸಭೆಗೆ ಇಬ್ಬರು ತಹಶೀಲ್ದಾರರು ಸಭೆಗೆ ಹಾಜರಾಗದೇ ಇದ್ದಲ್ಲಿ ಸಭೆಯನ್ನು ನಡೆಸಲು ಅವಕಾಶವನ್ನು ಕಲ್ಪಿಸಬಾರದು ಎಂದು ಸದಸ್ಯ ಅಶೋಕಯ್ಯ ಮುಳಗುಂದಮಠ .ನಿಂಗಪ್ಪ ಜಾಲವಡಗಿ ಹೇಳಿದರು. ಸದಸ್ಯೆ ಉಮಾ ಹೊನಗಣ್ಣವರ ಸಹಿತ ಗ್ರಾಮೀಣ ಭಾಗದಲ್ಲಿ ವೃದ್ದಾಪ್ಯ ವೇತನ ಹಲವು ತಿಂಗಳುಗಳಿAದ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗುತ್ತಿಲ್ಲ ಇದಕ್ಕೆ ನಿಖರ ಕಾರಣವು ಸಹ ತಿಳಿಯುತ್ತಿಲ್ಲ. ಈ ಬಗ್ಗೆ ಹಲವು ಸಭೆಗಳಲ್ಲಿ ಪ್ರಸ್ತಾಪ ಮಾಡುತ್ತಾ ಬಂದಿದ್ದರೂ ಸಹ ಯಾವುದೇ ಪ್ರಯೋಜನವಾಗುತ್ತಿಲ್ಲ. ಆದ್ದರಿಂದ ತಹಶೀಲ್ದಾರರನ್ನು ಸಭೆಗೆ ಕರೆಯಿಸಬೇಕೆಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತಾಪಂ ಇಓ ಡಾ: ಎನ್.ಎಚ್.ಓಲೇಕಾರ, ಮುಂದಿನ ಸಭೆಗೆ ಇಬ್ಬರು ತಹಶೀಲ್ದಾರರನ್ನು ಕರೆಸಲಾಗುವುದು, ವಿಶೇಷ ಸಭೆ ಬಗ್ಗೆ ಚರ್ಚಿಸಿ ದಿನಾಂಕ ನಿಗದಿಪಡಿಸಲಾಗುವುದು ಎಂದರು.
ಕಳಪೆ ಕಾಮಗಾರಿಗೆ ಯಾರು ಹೊಣೆ ?
ಶಿರಹಟ್ಟಿ ತಾಲೂಕಿನಲ್ಲಿ ಹಾದು ಹೋಗಿರುವಂತಹ ಗಜೇಂದ್ರಗಡ-ಸೊರಬ ರಾಜ್ಯ ಹೆದ್ದಾರಿಯು ಅಪೂರ್ಣಗೊಂಡಿದೆ.
ಜಂಗಲ್ ಕ್ಲೀಯರನ್ಸ್ ಆಗಿಲ್ಲ, ಕಳಪೆ ಕಾಮಗಾರಿ ಆಗಿದೆ ಇದಕ್ಕೆ ಯಾರು ಹೊಣೆ ? ಬಿಲ್ ಯಾಕೆ ಮಾಡಿದ್ದೀರಿ ಎಂದು ತಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ತಿಪ್ಪಣ್ಣ ಕೊಂಚಿಗೇರಿ ಲೋಕೋಪಯೋಗಿ ಇಲಾಖೆಯ ಎಇಇ ರಾಮಮೂರ್ತಿ ಅವರಿಗೆ ಪ್ರಶ್ನಿಸಿದರು. ಇದಕ್ಕೆ ಎಇಇ ಪ್ರತಿಕ್ರಿಯಿಸಿ ಗುತ್ತಿಗೆದಾರರಿಗೆ ಈಗಾಗಲೇ ೩ಬಾರಿ ನೋಟಿಸ್ ನೀಡಲಾಗಿದೆ. ಫೈನಲ್ ಬಿಲ್ ಆಗಿರುವದಿಲ್ಲ ಎಂದು ಹೇಳಿದರು. ಶಾಲೆಗಳ ದುರಸ್ತಿಯನ್ನು ಬೇಗನೇ ಪೂರ್ಣಗೊಳಿಸುವಂತೆ ಸದಸ್ಯ ತಿಪ್ಪಣ್ಣ ಕೊಂಚಿಗೇರಿ ಎಇಇಗೆ ಸೂಚಿಸಿದರು.
ಉಪಾಧ್ಯಕ್ಷೆ ಪವಿತ್ರಾ ಮಂಜುನಾಥ ಶಂಕಿನದಾಸರ, ತಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ತಿಪ್ಪಣ್ಣ ಕೊಂಚಿಗೇರಿ, ಪರಶುರಾಮ ಇಮ್ಮಡಿ sತಾಪಂ ಇಓ ಡಾ: ಎನ್.ಎಚ್.ಓಲೇಕಾರ ಇದ್ದರು.

loading...