ನಾನು ಮುಖ್ಯಮಂತ್ರಿಯಾಗಲು ಶ್ರೀಮಂತ ಪಾಟೀಲ ತ್ಯಾಗ ಕಾರಣ :ಬಿಎಸ್‌ವೈ

0
5

ಕನ್ನಡಮ್ಮ ಸುದ್ದಿ
ಚಿಕ್ಕೋಡಿ /ಕಾಗವಾಡ ೦೨: ನನ್ನ ಜೀವ ಮಾನದಲ್ಲಿ ಶ್ರೀಮಂತ ಪಾಟೀಲ ಅವರನ್ನು ನಾನು ಮರೆಯೋದಿಲ್ಲ ,ನಿಮ್ಮ ಯಡಿಯೂರಪ್ಪ ಇಂದು ಮುಖ್ಯಮಂತ್ರಿಯ ಆಗಲು ಶ್ರೀಮಂತ ಪಾಟೀಲ ತ್ಯಾಗ ಕಾರಣ, ೧೭ ಜನ ಶಾಸಕರು ರಾಜೀನಾಮೆ ನೀಡಿ ನನ್ನ ಮುಖ್ಯಮಂತ್ರಿ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ಹೇಳಿದರು .
ಕಾಗವಾಡ ತಾಲೂಕಿನ ಐನಾಪೂರ ಪಟ್ಟಣದ ಬಿಜೆಪಿ ಸಮಾವೇಶದಲ್ಲಿ ಅವರು ಮಾತನಾಡಿದರು. ಜಿಟಿ ಜಿಟಿ ಮಳೆಯ ಕಾರಣ ಕೇವಲ ಐದೇ ನಿಮಿಷ ಭಾಷಣ ಮಾಡಿದ ಸಿಎಂ ,ಯಾವುದೇ ಟೀಕಾ ಪ್ರಹಾರ ನಡೆಸದೆ ಕೇವಲ ಮತಯಾಚನೆ ಮಾಡಿದರು.
ಕಾಗವಾಡ ಮತ ಕ್ಷೇತ್ರದಲ್ಲಿನ ಅಭಿವೃದ್ಧಿ ಕೆಲಸಗಳು ನೀರಾವರಿ ಯೋಜನೆ, ಬೆಳೆಗಳಿಗೆ ಬೆಂಬಲ ಬೆಲೆ ನೀಡುವ ಭರವಸೆ ನೀಡಿದರು ,ಸಾಧನೆ ಮಾತನ್ನಾಡಬೇಕು ಮಾತು ಸಾಧನೆಯಾಗಬಾರದು ಹೀಗಾಗಿ ಹೆಚ್ಚು ಮಾತಾಡೋದಿಲ್ಲ ನಮ್ಮ ಅಭ್ಯರ್ಥಿಯನ್ನ ಗೆಲ್ಲಿಸಿ ಎಂದರು.
ಸಮಾವೇಶದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಉಮೇಶ ಕತ್ತಿ, ಸಚಿವರಾದ ಸಿ.ಸಿ ಪಾಟೀಲ, ಶಾಸಕರಾದ ಪಿ.ರಾಜೀವ್, ಬಸವರಾಜ ಪಾಟೀಲ ಯತ್ನಾಳ ಸೇರಿದಂತೆ ಬಿಜೆಪಿ ಪ್ರಮುಖ ಮುಖಂಡರು ಉಪಸ್ಥಿತರಿದ್ದರು .

loading...