ಅಥಣ ಯಲ್ಲಿ ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದ ಬಿಎಸ್‌ವೈ ಕಾಂಗ್ರೆಸ್-ಜೆಡಿಎಸ್‌ಗೆ ಮೂರು ತಿಂಗಳಿಗೊಮ್ಮೆ ಎಲೆಕ್ಷನ್ ಬೇಕು

0
30

ಕನ್ನಡಮ್ಮ ಸುದ್ದಿ
ಅಥಣ ೦೨: ಯಡಿಯೂರಪ್ಪಗೆ ಬಹುಮತ ಬರಬಾರದೆಂಬುದು ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಬಯಕೆಯಾಗಿದೆ. ಆದರೆ ಅದು ಎಂದಿಗೂ ಈಡೇರಲ್ಲ. ಮೂರು ತಿಂಗಳಿಗೊಮ್ಮೆ ಎಲೆಕ್ಷನ್‌ಗೆ ಹೋಗುವ ಭ್ರಮೆಯಲ್ಲಿ ವಿರೋಧ ಪಕ್ಷದ ನಾಯಕರುಗಳಿಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದರು
ಪಟ್ಟಣದ ಗಚ್ಚಿನ ಮಠದ ಎಸ್.ಎಸ್. ವಿದ್ಯಾಪೀಠದ ಆವರಣದಲ್ಲಿ ಉಪಚುನಾವಣೆ ಹಿನ್ನಲೆ ಆಯೋಜಿಸಿದ್ದ ಬಿಜೆಪಿ ಪಕ್ಷದ ಬೃಹತ್ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಅಭಿವೃದ್ದಿಯೊಂದೇ ನನ್ನ ಆಸೆ, ಇದಕ್ಕಾಗಿ ಏನು ಬೇಕಾದರೂ ಮಾಡಲು ಯಡಿಯೂರಪ್ಪ ಸಿದ್ಧ. ಮೂರುವರೆ ವರ್ಷದ ಬಳಿಕ ಬರುವ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ೧೫೦ ಸ್ಥಾನ ಗೆದ್ದು ಪುನಃ ನಾವೇ ಅಧಿಕಾರಕ್ಕೆ ಬರುತ್ತೇವೆಂಬ ನಂಬಿಕೆ ನನಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಹದಿನೈದು ಕ್ಷೇತ್ರಗಳಲ್ಲಿ ಸೋಲು ಖಚಿತ ಎಂದು ಎರಡು ಪಕ್ಷಗಳಿಗೆ ಮನವರಿಕೆಯಾಗಿದೆ. ಹಣ, ಹೆಂಡ, ತೋಳ್ಬಲ ಮೂಲಕ ಗೆಲವು ಸಾಧ್ಯನಾ? ಹದಿನೈದು ಕ್ಷೇತ್ರದಲ್ಲಿ ೩೦-೩೫ ಸಾವಿರ ಮತಗಳಿಂದ ಎಲ್ಲ ಬಿಜೆಪಿ ಅಭ್ಯರ್ಥಿಗಳು ಗೆಲವು ಸಾಧಿಸಲ್ಲಿದ್ದಾರೆ. ನಾನು ವಿರೋಧ ಪಕ್ಷಗಳಿಗೆ ಉತ್ತರ ನೀಡಲು ನಾನು ಹೋಗುವುದಿಲ್ಲ. ಡಿ.೯ ರಂದು ಜನರು ತಕ್ಕ ಉತ್ತರ ನೀಡುತ್ತಾರೆ. ಈ ಭಾಗ ಅಭಿವೃದ್ಧಿಯಾಗಬೇಕು ಎಂಬುದು ನಮ್ಮ ಬಯಕೆ ಅದಕ್ಕೆ ಬದ್ಧನಿದ್ದೇನೆ. ನಿರೀಕ್ಷೆ ಮೀರಿ ಅಥಣ , ಕಾಗವಾಡ ಕ್ಷೇತ್ರಗಳ ಅಭಿವೃದ್ಧಿಗೊಳಿಸುವುದಾಗಿ ತಿಳಿಸಿದರು.
ನಾನು ಸಿಎಂ ಇದ್ದಾಗ ಅಥಣ ಪಶುವೈದ್ಯಕೀಯ ಕಾಲೇಜ್ ಕಾಮಗಾರಿಗೆ ಚಾಲನೆ ನೀಡಿದ್ದೇ ಆದರೆ ಕಾಂಗ್ರೆಸ್‌ನವರು ಅದನ್ನು ಪೂರ್ಣ ಮಾಡಲಿಲ್ಲ, ಆರುವರೆ ವರ್ಷ ಇವರು ಏನೂ ಮಾಡಿದರು? ಅಥಣ ಯ ಪಶು ವೈದ್ಯಕೀಯ ಸ್ಥಾಪನೆ ಜೊತೆಗೆ ಕೃಷಿ ಕಾಲೇಜ್ ಪ್ರಾರಂಭಿಸುತ್ತೇನೆ. ಅಥಣ ಯ ನೀರಾವರಿ ಯೋಜನೆಗೆ ಮಹತ್ವ ನೀಡಲಾಗುವುದು. ಸವಳು ಜವಳು ಸರಿಪಡಿಸಲು ಯೋಜನೆಗೆ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.
ಅಥಣ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ ಕುಮಟಳ್ಳಿ, ಕಾಗವಾಡ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ಅವರನ್ನು ಅತೀ ಹೆಚ್ಚು ಮತಗಳ ಅಂತರದಿAದ ಗೆಲ್ಲಿಸಿಕೊಡಬೇಕು ಎಂದು ಅಥಣ ಯ ಸಾರ್ವಜನಿಕ ಸಭೆಯಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಮತದಾರರಲ್ಲಿ ಮತಯಚನೆ ಮಾಡಿದರು.
ಈ ವೇಳೆ ಡಿಸಿಎಂ ಲಕ್ಷö್ಮಣ ಸವದಿ, ಸಚಿವ ಕೆ ಎಸ್ ಈಶ್ವರಪ್ಪ, ಸಚಿವ ಜಗದೀಶ ಶೆಟ್ಟರ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಹುಕ್ಕೇರಿ ಶಾಸಕ ಉಮೇಶ ಕತ್ತಿ, ವಿಜಯಪುರ ಶಾಸಕ ಬಸನಗೌಡ ಯತ್ನಾಳ, ರಾಯಬಾಗ ಶಾಸಕ ದೂರ್ಯೋಧನ ಐಹೋಳೆ, ವಿಧಾನಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ಪ್ರಧಾನ ಕಾರ್ಯದರ್ಶಿ ಮಹೇಶ ತೆಂಗಿನಕಾಯಿ, ಚುನಾವಣಾ ಉಸ್ತುವರಿ ಶ್ರೀಕಾಂತ ಕುಲಕಣ ð ಸೇರಿ ಹಲವು ರಾಜ್ಯ, ಜಿಲ್ಲೆಯ ಸದಸ್ಯರು ಉಪಸ್ಥಿತರಿದ್ದರು.

 

ಬಿಜೆಪಿ ಇಬ್ಬರು ಅಭ್ಯರ್ಥಿಗಳನ್ನು ಗೆಲ್ಲಿಸಿ ವಿಧಾನಸೌಧಕ್ಕೆ ಹೊತ್ತುಕೊಂಡು ಬರುತ್ತೇನೆ
ಮಹೇಶ ಕುಮಠಳ್ಳಿ ಹಾಗೂ ಶ್ರೀಮಂತ ಪಾಟೀಲ ಅವರನ್ನು ಹೆಗಲ ಮೇಲೆ ಹೊತ್ತುಕೊಂಡು ವಿಧಾನ ಸೌಧಕ್ಕೆ ಬರುತ್ತೇನೆ ಎಂದು ಮುಖ್ಯಮಂತ್ರಿಗಳಿಗೆ ವಚನ ನೀಡಿದ್ದೇನೆ. ವಚನ ಉಳೊಸಿಕೊಳ್ಳುವ ಜವಾಬ್ದಾರಿ ನಮ್ಮ ನಿಮ್ಮ ಮೇಲಿದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು. ೩೫ ಸಾವಿರ ಅಧಿಕ ಮತಗಳಿಂದ ಅಥಣ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಿ ಕೊಡಲಾಗುವುದು ಎಂದು ಭರವಸೆ ನೀಡಿದರು.

ಹೆಬ್ಬಾಳಕರ, ಡಿಕೆಶಿ, ವಿರುದ್ದ ಯತ್ನಾಳ ಲೇವಡಿ
ಅಥಣ ಯ ಬಿಜೆಪಿ ಸಾರ್ವಜನಿಕ ಸಭೆಯಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಲೇವಡಿ. ಕಳೆದ ಎರಡು ದಿನಗಳಿಂದ ಲಕ್ಷ್ಮೀ ಪಟಾಕಿಯನ್ನು ಮಹೇಶ ಕುಮಟಳ್ಳಿ ಠುಸ್ ಮಾಡಿದ್ದಾರೆ. ಕುಮಠಳ್ಳಿ ಬಹಳ ಸಂಭಾವಿತ ಅಂತಾ ತಿಳಿದಿದ್ದೆ ಇವತ್ ಫುಲ್ ಸ್ಟ್ರಾಂಗ್ ಆಗಿದ್ದಾರೆ. ಇನ್ನೊಂದರದು ಎರಡು ದಿನಗಳಿಂದ ಬ್ಯಾಟರಿ ಡೌನ್ ಆಗೇತಿ, ಎರಡು ದಿನದಿಂದ ಏನೂ ಮಾತನಾಡುತ್ತಲೇ ಇಲ್ಲ, ಏನ ಮಾಡೊದರಿ ಅಂತಾ ನನ್ನನ್ನು ಕುಮಠಳ್ಳಿ ಹೇಳಿದ್ದರು. ಸ್ಟ್ರಾಂಗ್ ಕಾಫಿ ಕುಡಿರಿ ಅಂತಾ ಹೇಳಿದ್ದೇ ಈಗ ಸ್ಟ್ರಾಂಗ್ ಆಗಿ ಹುರುಪಿನಲ್ಲಿ ಇದಾರೆ ಎಂದು ಚಟಾಕಿ ಸಿಡಿಸಿದರು ವಿಜಯಪೂರ ಶಾಸಕ ಬಸನಗೌಡ ಯತ್ನಾಳ ಅವರು ಬಿಜೆಪಿ ಸಭೆಯಲ್ಲಿ ನಗೆಗಡಲಿಗೆ ತೇಲಿಸಿದ ಘಟನೆ ನಡೆಯಿತು.
ಖರ್ಗೆ ಡಿ. ೯ರ ಬಳಿಕ ಕ್ರಾಂತಿ ಆಗುತ್ತೆ ಅಂತಿದಾರೆ, ಸುಮ್ಮನೆ ಕುಂಡ್ರೋ ಮಾರಯ್ಯ ಕಲಬುರಗಿಯಲ್ಲೇ ಸಾಕಾಗಿ ಹೋಗೇತಿ ಎನ್ನುವ ಮೂಲಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹೇಳಿಕೆ ತಿರುಗೇಟು ನೀಡಿದರು, ಜೋಡೆತ್ತುವೊಂದು ನಿನ್ನೆ ರಾತ್ರಿ ಬಂದಿತ್ತು, ಆದ್ರೆ ಯಾಕೋ ಅದು ರಾತ್ರಿಯೇ ವಾಪಸ್ ಆಗೇತಿ, ಲಕ್ಷ್ಮೀ ಅಟಂ ಬಾಂಬ್‌ನೇ ಠುಸ್ ಆದ ಮೇಲೆ ನಂದೇನ ಅಂತಾ ಹೋಗೇತಿ, ಗಂಡಸ್ತನದ ಬಗ್ಗೆ ಮಾತನಾಡತಾ ಇದ್ದಾರೆ, ಎಲೆಕ್ಷನ್‌ದಾಗ ಏನ ಗಂಡಸ್ತನ ತೋರಿಸೋದು ಐತಿ, ಡಿ.೫ಕ್ಕೆ ಏನು ಗಂಡಸ್ತನ ಪ್ರದರ್ಶನ ಇದೆಯಾ? ಅವರಿಗೆನೋ ಬಹಳ ಅನುದಾನ ಕೊಟ್ಟಾರಂತೆ, ಅದು ಹೆಂಗ ಕೊಟ್ಟಾರಂತ ನಮಗೂ ಡ್ಯಾಷ್… ಡ್ಯಾಷ್.. ಗೊತ್ತೇತಿ ಎನ್ನುವ ಮೂಲಕ ಕಾಂಗ್ರೇಸ್ ಶಾಸಕ ಲಕ್ಷಿö್ಮÃ ಹೆಬ್ಬಾಳಕರ ಅವರ ಹೆಸರು ಹೇಳದೆ ಮಾತಿನಲ್ಲೆ ಟಾಂಗ ನೀಡಿದರು.
ನಾನೊಬ್ಬ ಈಗ ಮಿನಿ ಲೀಡರ್, ಯಡಿಯೂರಪ್ಪನಂತೆ ನಾನೂ ಒಬ್ಬ ಈಗ ಉ.ಕ ಲೀಡರ್ ಆಗಿದ್ದೇನೆ. ನನ್ನನ್ನು ತುಳಿಯೋಕೆ ಯಾರಿಂದಲೂ ಆಗೋದಿಲ್ಲ, ಪ್ರವಾಹ ಆದಾಗ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದೇನೆ. ಜನರ ಪರ ನಾನು ಧ್ವನಿ ಎತ್ತಿದ್ದೇನೆ, ನಾನು ಕೊಂಯ್ ಕುಂಯ್ ಎನ್ನುವ ಲೀಡರ್ ಅಲ್ಲ, ನನ್ನನ್ನೇನು ಮಂತ್ರಿ ಮಾಡೋದಿಲ್ಲ ಆದರೂ ನಾ ಜನರ ಪರ ಮಾತನಾಡುತ್ತೇನೆ. ಮಂತ್ರಿ ಮಾಡಲಿ ಬಿಡಲಿ ನಾನು ಯಡಿಯೂರಪ್ಪ ಹಿಂದೆ ಇರುವೆ, ಐದು ವರ್ಷ ವೀರಶೈವ ಲಿಂಗಾಯತ ಸಮುದಾಯದವರಿಗೆ ಸಿಎಂ ಆಗಲು ಬಿಟ್ಟಿಲ್ಲ, ವೀರೇಂದ್ರ ಪಾಟೀಲ, ಜೆ.ಎಚ್. ಪಟೇಲ್‌ರಿಗೆ ಅಧಿಕಾರ ಮಾಡಲು ಈ ಹಿಂದೆ ಬಿಟ್ಟಿಲ್ಲ. ಪಟೇಲ್‌ರಿಗೆ ದೇವೇಗೌಡರು ತೊಂದರೆ ಕೊಟ್ಟಿದ್ದಾರೆ. ಪಟೇಲ್‌ರು ಸ್ವಲ್ಪ ಗಟ್ಟಿ ಇದ್ದರೂ ಅಂತಾ ನಡೆದಿತು. ನಮ್ಮ ಸಮಾಜ ಬೇರೆ ಯಾವ ಸಮಾಜಕ್ಕೂ ಅನ್ಯಾಯ ಮಾಡಿಲ್ಲ ಎಂದು ಹೇಳುವ ಮೂಲಕ ವೇದಿಕೆ ಮೇಲೆ ಇದ್ದ ಸಿಎಂ ಯಡಿಯೂರಪ್ಪ ಅವರಿಗೆ ಸ್ವಲ್ಪ ಮುಜುಗರ ಉಂಟಾದರೂ ಸಹ ಅವರು ನಕ್ಕು ಸುಮ್ಮಾನದ ಘಟನೆ ಸಹ ನಡೆಯಿತು. ಒಟ್ಟಿನಲ್ಲಿ ಕಾಂಗ್ರೆಸ್ ಪ್ರಚಾರಕರ ವಿರುದ್ದ ಶಾಸಕ ಬಸನಗೌಡ ಯತ್ನಾಳ ಸಭೆಯಲ್ಲಿ ಚಳಿ ಬೀಡಿಸಿದರು

 

ರಾಜ್ಯ ಸಭಾ ಸದಸ್ಯ ರಾಮಮೂರ್ತಿ ಕಾಂಗ್ರೆಸಿಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದರು. ಈಗ ಇಂದು ಬಿಜೆಪಿ ಪರವಾಗಿ ನಾಮಪತ್ರ ಸಲ್ಲಿಸಿದ್ದು. ಇವರ ಹೊರತು ಕಾಂಗ್ರೆಸ್, ಜೆಡಿಸ್ ಯಾರು ನಾಮಪತ್ರ ಸಲ್ಲಿಸಿಲ್ಲ. ಹೀಗಾಗಿ ಇಲ್ಲಿ ಸ್ಪರ್ಧಿಸದೇ ಇರುವುದರಿಂದ, ಈ ಉಪಚುನಾವಣೆಯಲ್ಲಿಯೂ ತನ್ನ ಸ್ಥಾನ ಕಳೆದುಕೊಳ್ಳುವುದು ನಿಶ್ಚಿತ
ಬಿ.ಎಸ್. ಯಡಿಯೂರಪ್ಪ
ಮುಖ್ಯಮಂತ್ರಿ

loading...