ಸಾಮೂಹಿಕ ವಿವಾಹ ಮಹೋತ್ಸವ

0
41

ರಾಣೇಬೆನ್ನೂರು: ಇಲ್ಲಿನ ಕಾಕಿ ಜನಸೇವಾ ಸಂಸ್ಥೆ ವತಿಯಿಂದ ಶ್ರೀ ನೀಲಕಂಠೇಶ್ವರ ಸ್ವಾಮಿಯ ಕಾರ್ತಿಕೋತ್ಸವದ ಪ್ರಯುಕ್ತ ಸರ್ವಧರ್ಮ ಸಾಮೂಹಿಕ ವಿವಾಹ ಮಹೋತ್ಸವವು ನಗರದ ಮಿನಿ ವಿಧಾನಸೌಧ ಹತ್ತಿರದ ನೀಲಕಂಠೇಶ್ವರ ದೇವಸ್ಥಾನದ ಆವರಣದಲ್ಲಿ ಜರುಗಿತು.
ಶ್ರೀ ಸಾಲೇಶ್ವರ ದೇವಸ್ಥಾನದಿಂದ ಸಾಮೂಹಿಕ ವಧು-ವರರ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಹುಬ್ಬಳಿಯ ನೀಲಕಂಠ ಮಠದ ಜಗದ್ಗುರು ವೀರಭಿಕ್ಷಾವತೀ ಶಿವಶಂಕರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಸ್ಥಳೀಯ ಶನೈಶ್ಚರ ಮಠದ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು ದಿವ್ಯಸಾನಿಧ್ಯ ವಹಿಸಿದ್ದರು. ನೇಕಾರ ಒಕ್ಕೂಟದ ರಾಜ್ಯಾಧ್ಯಕ್ಷ ಎಂ.ಡಿ.ಲಕ್ಷಿö್ಮÃನಾರಾಯಣ, ಕಾಕಿ ಜನಸೇವಾ ಸಂಸ್ಥೆ ಅಧ್ಯಕ್ಷ ಶ್ರೀನಿವಾಸ ಕಾಕಿ ದಂಪತಿ, ಶಿವಾನಂದ ಸಾಲಗೇರಿ, ಶಿವಾನಂದ ಬಗಾದಿ, ಲಕ್ಷö್ಮಣ ಕನ್ನಕಿ ಸೇರಿದಂತೆ ಮತ್ತಿತರು ಇದ್ದರು.

loading...