ಶಿಕ್ಷಕ ವೃತ್ತಿ ಪವಿತ್ರವಾದದ್ದು: ಜಗದೀಶ

0
3

ಬಂಕಾಪುರ : ಶಿಕ್ಷಕ ವೃತ್ತಿ ಗೌರವಯುತವಾದ ವೃತ್ತಿಯಾಗಿದ್ದು, ಶಿಕ್ಷಕರಿಗೆ ಸೇವಾ ಅವಧಿಯಲ್ಲಿ ಎದುರಾಗುವ ಸಮಸ್ಯೆ, ಸವಾಲುಗಳನ್ನು ತಾಳ್ಮೆಯಿಂದ ಎದುರಿಸಿದಾಗ ಶಿಕ್ಷಕ ವೃತ್ತಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದುಕರ್ನಾಟಕ ಕೀರ್ತಿ ವಿದ್ಯಾ ಸಂಸ್ಥೆ ಅಧ್ಯಕ್ಷ ಜಗದೀಶ ಕುರಂದವಾಡ ಹೇಳಿದರು.
ಪಟ್ಟಣದ ಕರ್ನಾಟಕ ಕೀರ್ತಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವಯೋನಿವೃತ್ತ ಪ್ರಾಚಾರ್ಯ ಎಂ.ಎನ್.ಮಲ್ಲಾಡದ ಅವರ ಬೀಳ್ಕೊಡುವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸೇವಾ ಅವದಿಯಲ್ಲಿ ಮಲ್ಲಾಡದ ಅವರು ಸಮಯ ಪ್ರಜ್ಞೆ, ನಿಷ್ಟೆಹಾಗೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಮೂಲಕ ವಿದ್ಯಾರ್ಥಿಗಳ ಅಚ್ಚು, ಮೇಚ್ಚಿನ ಶಿಕ್ಷಕರಾಗಿದ್ದರು. ಆಗಾದ ಪಾಂಡಿತ್ಯ ಪಡೆದವರಾಗಿದ್ದ ಮಲ್ಲಾಡದ ಗುರುಗಳು ವಿದ್ಯಾರ್ಥಿಗಳಿಗೆ ಆಳವಾಗಿ ಅರಿಕೆ ಮಾಡುವ ಸಾಮರ್ಥ್ಯ ಹೊಂದಿದವರಾಗಿದ್ದರು. ಕಾಲೇಜು ಆರಂಭವಾದ ಸಂದರ್ಬದಲ್ಲಿ ಪ್ರಥಮ ಸಿಬ್ಬಂದಿಯಾದ ಅವರು ಫಲಾನುಫಲಗಳನ್ನು ನಿರೀಕ್ಷೆ ಮಾಡದೆ. ನಿರಂತರ ೩೧ವರ್ಷಗಳ ಕಾಲ ಸೇವೆ ಸಲ್ಲಿಸಿದವರಾಗಿದ್ದಾರೆ. ಫಲಗಳನ್ನು ಅಪೇಕ್ಷಿಸದೆ ಸಲ್ಲಿಸಿದ ಸೇವೆಗೆ ದೇವರು ಅವರಿಗೆ ಒಳ್ಳಯದನ್ನು ಮಾಡಿದ್ದಾನೆ. ತಾಳ್ಮೆಯ ಶ್ರಮಕ್ಕೆ ಪ್ರತಿಫಲ ಆ ದೇವರು ಪ್ರತಿ ವ್ಯಕ್ತಿಗಳಿಗೆ ಕಾಯ್ದಿರಿಸುತ್ತಾನೆ ಎನ್ನುವದಕ್ಕೆ ನಿವೃತ್ತ ಹೋಂದಿದ ಮಲ್ಲಾಡದ ಶಿಕ್ಷಕರೆ ಸಾಕ್ಷಿಯಾಗಿದ್ದಾರೆ. ಅವರ ನಿವೃತ್ತ ಜೀವನ ಸುಖಕರ ವಾಗಿರಲಿ ಎಂದು ಹಾರೈಸಿದರು.
ನಿವೃತ್ತ ಪ್ರಾಚಾರ್ಯ ಎಂ.ಎನ್.ಮಲ್ಲಾಡದ ಸಂಸ್ಥೆ ಪದಾಧಿಕಾರಿಗಳು, ಸಿಬ್ಬಂದಿಗಳಿAದ ಸನ್ಮಾನ ಸ್ವೀಕರಿಸಿ ಮಾತನಾಡಿ,ಸುಮಾರು ೩೧ ವರ್ಷದ ಸೇವಾ ಅವಧಿಯಲ್ಲಿ ಸರ್ಕಾರದಿಂದ ೧೧ ವರ್ಷ ವೇತನ ಪಡೆದಿದ್ದೇನೆ. ಹೀಗಾಗಿ ೧೯ ವರ್ಷಗಳ ಕಾಲ ವೇತನಾನುದಾನವಿಲ್ಲದೆ ಸೇವೆ ಸಲ್ಲಿಸಿದ್ದೇನೆ. ನಮ್ಮ ಸೇವಾವಧಿಯಲ್ಲಿ ಸಂಸ್ಥೆ ನೀಡಿರುವ ಸಹಕಾರ, ಸಿಬ್ಬಂದಿಯ ಪ್ರೋತ್ಸಾಹ, ಬೆಂಬಲ ಎಂದಿಗೂ ಮರೆಯಲಾರೆ. ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ವರುಷ ವೇತನ ವಿಲ್ಲದೇ ದುಡಿದರು ಕೂಡಾ ಕಾಲೇಜಿನಲ್ಲಿ ವೃತಾ ಕಾಲಹರಣ ಮಾಡದೆ ಸೇವೆ ಸಲ್ಲಿಸಿದ ಸಂತೃಪ್ತಿ ನನಗಿದೆ. ಬಿಡುವಿನ ವೇಳೆ ಪ್ರಾಥಮಿಕ, ಪ್ರೌಢ ಶಾಲೆಗಳ ಮಕ್ಕಳಿಗೂ ಸಹ ಪಾಠ ಮಾಡಿದ್ದೇನೆ. ಶಿಕ್ಷಕ ವೃತ್ತಿ ತೃಪ್ತಿ ತಂದಿದೆ ಆದರೆ, ನಿವೃತ್ತಿ ನಂತರ ಪಿಂಚಣಿಗಳಿಲ್ಲದೆ ಬದುಕು ಸಾಗಿಸುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ. ಸರ್ಕಾರ ಹಿಂದೆ ಸೇವೆ ಸಲ್ಲಿಸಿರುವ ವೇತನಕ್ಕಾಗಿ ಕಾಲ್ಪನಿಕ ವೇತನ ಬೀಡುಗಡೆ ಮಾಡಿದರೆ. ವೃದ್ಯಾಪ ಜೀವನದಲ್ಲಿ ಬದುಕಿಗೆ ಆಧಾರವಾಗುತ್ತದೆ ಎಂದು ಭಾವುಕರಾಗಿ ನುಡಿದರು.
ಕೀರ್ತಿ ಪ್ರೌಢ ಶಾಲೆ ಮುಖ್ಯ ಶಿಕ್ಷಕ ಎಂ.ಬಿ.ಉAಕಿ, ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಬಿ.ಎಸ್.ದುಂಡಪ್ಪನವರ, ಕಾಲೇಜಿನ ಹಿರಿಯ ಉಪನ್ಯಾಸಕರಾದ ಎಸ್.ಆರ್.ಕಾರಗಿ, ಎಸ್.ಬಿ.ಕುರಬರ, ಎಂ.ಆರ್.ಅಶೋಕ, ಜಗದೀಶ ಪುರದ, ಎಸ್.ಸಿ.ಕುರಂದವಾಡ, ಆರ್.ಎಚ್.ರೂಡ್ಡಣ್ಣವರ, ವೀರಣ್ಣ ಕುಲಕರ್ಣಿ ಮಾತನಾಡಿದರು.
ಶಿಕ್ಷಕರಾದ ಎ.ಸಿ.ಹಿರೇಮಠ, ಎಸ್.ಆರ್.ಕೋರಿಶೆಟ್ಟರ್, ಎಸ್.ಜಿ.ಹಾದಿಮನಿ, ನಂದಾ ಪಾಟೀಲ, ಗಿರೀಶ ಕುರಂದವಾಡ, ಎಂ.ವಿ.ಗಾಡದ, ಶಿವಾನಂದ ಗೌಡರ, ಯಲ್ಲಪ್ಪ ಹುಲತ್ತಿಯವರ, ಎಂ.ಎನ್.ಚಿನಿವಾರ, ಪ್ರಕಾಶ ದುಗಲದ, ಎ.ಸಿ.ಮಾಳಗಿ, ವೆಂಕಟೇಶ, ಸಿ.ಟಿ.ನೆಲೂಗಲ್ಲ, ಕಮ್ಮಾರ ಸೇರಿದಂತೆ ಕೀರ್ತಿ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜಿನ ಸಿಬ್ಬಂದಿಗಳು ಉಪಸ್ಥಿತರಿದ್ದರು.

loading...