ಸಿದ್ದರಾಮಯ್ಯನವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿದ್ದೆ ನಾನು: ಪುಟ್ಟಸ್ವಾಮಿ

0
8

ಹಿರೇಕೆರೂರ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿದ್ದೆ ನಾನು, ನಮ್ಮ ಸಮಾಜದ ಅಭಿವೃದ್ದಿಗೆ ಯಾವತ್ತೂ ಅವರು ಶ್ರಮೀಸಲಿಲ್ಲ ಎಂದು ಕುರುಬ ಸಮಾಜದ ಮುಖಂಡ, ರಾಜ್ಯ ಬಿಜೆಪಿ ಒಬಿಸಿ ಮೊರ್ಚಾ ಉಪಾಧ್ಯಕ್ಷ, ನಿವೃತ್ತ ಐ.ಎ.ಎಸ್ ಅಧಿಕಾರಿ ಎಸ್.ಪುಟ್ಟಸ್ವಾಮಿ ಹೇಳಿದರು.
ಪಟ್ಟಣದ ಜನ್ನು ಫ್ಯಾಲೆಸಿನಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಹಿಂದ ಹೆಸರು ಹೇಳಿಕೊಂಡು, ಅಧಿಕಾರ ಪಡೆದ ಸಿದ್ದರಾಮಯ್ಯನವರು, ಅವರ ಅಧಿಕಾರದಲ್ಲಿ ೫ ಜನ ಕುರುಬ ಜನಾಂಗದ ಶಾಸಕರಿದ್ದರೂ ಅವರಿಗೆ ಸಚಿವ ಸ್ಥಾನ ನೀಡಲಿಲ್ಲ, ನಮ್ಮ ಕುರುಬ ಜನಾಂಗದ ಆ ವರ್ಗಕ್ಕೆ ಸಮನಾದ ಮಿಸಲಾತಿ ನೀಡಲಿಲ್ಲ, ಅಹಿಂದ ವರ್ಗಕ್ಕೆ ದೌರ್ಭಾಗ್ಯ ತೋರಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು ಹಿಂದುಳಿದ ಅಭಿವೃದ್ದಿಗಾಗಿ ಅನೇಕ ಕಾರ್ಯಕ್ರಮ ರೂಢಿಸಿಕೊಂಡಿದದು, ರಾಷ್ಟç ಹಿಂದುಳಿದ ಆಯೋಗಕ್ಕೆ ಸಂವಿಧಾನಿಕ ಸ್ಥಾನಮಾನ ನೀಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು, ವೃದ್ದಾಪ್ಯ, ವಿಧವಾ ವೇತನ, ಭತ್ಯೆಯನ್ನು ಏರಿಕೆ ಮಾಡಿದ್ದು, ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷಿö್ಮ ಯೊಜನೆ, ಶಾಲಾ ಮಕ್ಕಳಿಗೆ ಉಚಿತವಾಗಿ ಸೈಕಲ್ ವಿತರಣೆ ಸೇರಿದಂತೆ ಹಲವು ಬಡವರ ಪರ ಅಭಿವೃದ್ದಿ ಹಾಗೂ ಜನಪರ ಯೋಜನೆಗಳನ್ನು ನೀಡಿದ್ದಾರೆ ಎಂದರು.
ಮಡಿವಾಳ ಮಹಾಸಭಾ ರಾಷ್ಟಾçಧ್ಯಕ್ಷ, ಬಿಜೆಪಿ ಮುಖಂಡ ಎಂಜೇರಪ್ಪ.ಜೆ., ಮಾತನಾಡಿ, ಕಾಂಗ್ರೆಸ್ ಪಕ್ಷ ಈ ದೇಶಕ್ಕೆ ಸಂವಿಧಾನ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸೋಲಿಸಿದ್ದಾರೆ. ಯಾವ ಕಾಂಗ್ರೆಸ್ ಪಕ್ಷ ಮಿಸಲಾತಿ ನೀಡಲಿಲ್ಲ, ಇದಕ್ಕಾಗಿ ದಿ.ಮಾಜಿ ಪ್ರಧಾನಿ ವಿ.ಪಿ.ಸಿಂಗ್ ಬರಬೇಕಾಯಿತು. ಬಿಜೆಪಿಯವರು ಇಲ್ಲಿಯವರೆಗೆ ೧ ಸಾವಿರ ಕೋಟಿ ಅನುದಾನ ನೀಡಿದ್ದಾರೆ. ಕಾರಣ ಸಮಾಜದ ಬಾಂಧವರು ಬಿಜೆಪಿ ಆಭ್ಯರ್ಥಿಯನ್ನು ಬೆಂಬಲಿಸುವAತೆ ಕೋರಿದರು.
ಬಂಜಾರ ಸಮಾಜದ ಮುಖಂಡ ಚಂದ್ರಶೇಖರ ಲಮಾಣಿ ಮಾತನಾಡಿ, ಬಿ.ಎಸ್.ಯಡಿಯೂರಪ್ಪನವರು ಬಂಜಾರ ನಿಗಮ ಸ್ಥಾಪನೆ ಮಾಡುವ ಮೂಲಕ ಈ ಜನಾಂಗವನ್ನು ಸಮಾಜದ ಮುಖ್ಯವಾಹಿನಿಗೆ ತಂದಿದ್ದಾರೆ. ಇದಲ್ಲದೆ ನಮ್ಮ ಸಮಾಜದವರಿಗೆ ಸರ್ಕಾರದ ವತಿಯಿಂದ ಅನೇಕ ಸೌಲಭ್ಯಗಳನ್ನು ನೀಡಿದ್ದು, ನಮ್ಮ ಸಮಾಜದವರು ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ ಅವರನ್ನು ಬೆಂಬಲಿಸುವAತೆ ತಿಳಿಸಿದರು.
ಶಿವಮೊಗ್ಗ ಬಿಜೆಪಿ ಒಬಿಸಿ ಮೊರ್ಚಾ ಜಿಲ್ಲಾಧ್ಯಕ್ಷ, ಮಡಿವಾಳರ ಸಮಾಜದ ಮುಖಂಡ ಕೆ.ಎಸ್.ಅರುಣಕುಮಾರ, ವಿಜಯಕುಮಾರ, ಲಿಂಗರಾಜ ಕರಡೇರ, ಲಕ್ಷö್ಮಣ ಪೂಜಾರ, ಪ್ರಭುದೇವ ಕೆ.ಎಸ್., ವಿಜಯಕುಮಾರ ಮಡಿವಾಳರ, ಮನೋಜ ಹರ‍್ನಳ್ಳಿ, ರಘು ರಂಗಕ್ಕನವರ ಹಾಗೂ ಮತ್ತಿತರರು ಇದ್ದರು.

loading...