ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ

0
5

ರಾಣಿಬೆನ್ನೂರು: ತಾಲೂಕಿನ ಸರ್ವಾಂಗೀಣ ಅಭಿವೃದ್ಧಿ ಕಾಂಗ್ರೆಸ್‌ನಿAದ ಮಾತ್ರ ಸಾಧ್ಯ. ೫೦ ವರ್ಷಗಳ ಸುದೀರ್ಘ ರಾಜಕಾರಣದಲ್ಲಿ ಸಕ್ರೀಯವಾಗಿ ತೊಡಗಿಕೊಂಡಿರುವ ಈ ಕ್ಷೇತ್ರದ ಅಭ್ಯರ್ಥಿ ಕೆ.ಬಿ.ಕೋಳಿವಾಡ ಅವರು ಈ ಉಪಚುನಾವಣೆಯಲ್ಲಿ ಗೆಲವು ಸಾಧಿಸಲು ಕಾರ್ಯಕರ್ತರು ಕಾಂಗ್ರೆಸ್‌ಗೆ ಮತನೀಡಬೇಕೆಂದು ಕಾಂಗ್ರೆಸ್ ಯುವ ಮುಖಂಡ ರವೀಂದ್ರಗೌಡ ಪಾಟೀಲ ತಿಳಿಸಿದರು.
ಮಂಗಳವಾರದAದು ತಾಲೂಕಿನ ಮುಷ್ಟೂರು ಸೇರಿದಂತೆ ಇತರೆ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಪರ ಮತಯಾಚಿಸಿ ಮಾತನಾಡಿದರು. ಕೆ.ಬಿ.ಕೋಳಿವಾಡರಿಗೆ ಇದು ೧೧ ನೇ ಚುನಾವಣೆಯಾಗಿದ್ದು, ೫ ಬಾರಿ ಸೋಲು ೫ ಸಾರೆ ಗೆಲುವು ಸಾಧಿಸುವ ಮೂಲಕ ಸಿಹಿ-ಕಹಿ ಅನುಭವ ಪಡೆದಿದ್ದು, ಇವರಿಗೆ ಮತ ನೀಡುವುದರ ಮೂಲಕ ನಿವೃತ್ತಿಯ ಆಸೆಯನ್ನು ಈಡೇರಿಸಲು ಸರ್ವರೂ ಮುಂದಾಗಬೇಕು ಎಂದರು.
ಬಿ.ಸಿ.ಯಲ್ಲಕ್ಕನವರ, ಪ್ರಶಾಂತರಡ್ಡಿ ಯರೇಕುಪ್ಪಿ, ಭೀರಪ್ಪ ತೋಟಗಂಟಿ, ಮಂಜಪ್ಪ ದಾನಪ್ಪನವರ, ಮಂಜಪ್ಪ ಅಜ್ಜರ್, ಪ್ರಭು ಮಾಳಿಗೇರ, ಬಸಮ್ಮ ಕಿವುಡೇರ. ತಿಪ್ಪೇಶ ಅಜ್ಜರ, ಮಂಜಪ್ಪ ಕಿವುಡೇರ ಸೇರಿದಂತೆ ಮತ್ತಿತರರು ಪ್ರಚಾರದಲ್ಲಿ ಪಾಲ್ಗೊಂಡಿದ್ದರು.

loading...