ಫಲಿತಾಂಶ ಸುಧಾರಣೆಗೆ ನಿರಂತರ ಶ್ರಮ ಅಗತ್ಯ: ಹಿರೇಮಠ

0
1

ನರಗುಂದ: ಗದಗ ಜಿಲ್ಲೆಯ ದ್ವೀತಿಯ ಪಿಯುಸಿ ಫಲಿತಾಂಶವು ಕಳೆದ ವರ್ಷ ೨೬ ನೇ ಸ್ಥಾನಕ್ಕೆ ಕುಸಿದಿದೆ. ಫಲಿತಾಂಶ ಕಡಿಮೆಯಾಗಲು ಹಲವಾರು ಕಾರಣಗಳಿವೆ. ಕೇವಲ ಕಾರಣಗಳನ್ನೆ ನೆಪವಾಗಿಸಿಕೊಂಡು ಕಾಲಹರಣ ಮಾಡಬಾರದು. ಬದಲಿಗೆ ಜಿಲ್ಲೆಯ ಎಲ್ಲ ಉಪನ್ಯಾಸಕರು ಅತ್ಯಂತ ಕ್ರಿಯಾಶೀಲರಾಗಿ ಫಲಿತಾಂಶ ಸುಧಾರಣೆಗಾಗಿ ನಿರಂತರ ಶ್ರಮಿಸಬೇಕಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಎಸ್.ಹಿರೇಮಠ ಹೇಳಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ನರಗುಂದದ ಯಡೆಯೂರ ಸಿದ್ದಲಿಂಗೇಶ್ವರ ಸ್ವತಂತ್ರ ಪದವಿ ಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ ಪಟ್ಟಣದ ಎಸ್‌ವೈಎಸ್ ಕಾಲೇಜು ಆವರಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ದ್ವೀತಿಯ ಪಿಯುಸಿ ಫಲಿತಾಂಶ ಸುಧಾರಣೆ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನರೇಗಲ್ಲ್ ಶ್ರೀ ಅನ್ನದಾನೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಹಾಗೂ ಫಲಿತಾಂಶ ಸುಧಾರಣಾ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿ ಡಾ.ವಾಯ್.ಸಿ.ಪಾಟೀಲ ಮಾತನಾಡಿ, ನಮ್ಮ ಜಿಲ್ಲೆಗೆ ಬಂದ ಕಡಿಮೆ ಫಲಿತಾಂಶದ ವಿವಿಧ ಕಾರಣಗಳನ್ನು ತಿಳಿದು ನಿರಂತರ ಸುಧಾರಣೆಯ ಪ್ರಯತ್ನ ಮಾಡುತ್ತಿದ್ದರು ಕೂಡ ಜಿಲ್ಲೆಗೆ ಸರಿಯಾದ ಪಿಯುಸಿ ಫಲಿತಾಂಶ ಬರುತ್ತಿಲ್ಲ. ಆದ್ದರಿಂದ
ಉಪನ್ಯಾಸಕರು ವಿದ್ಯಾರ್ಥಿಗಳ ಮನಸ್ಸನ್ನು ಅರ್ಥ ಮಾಡಿಕೊಂಡು ನಿರಂತರ ಭೋಧನೆಯನ್ನು ಮಾಡಬೇಕು. ವಿಷಯವಾರು ಕಠಿಣ ವಿಷಯಗಳಿಗೆ ಸರಳಿಕೃತ ರೀತಿಯಲ್ಲಿ ಹೇಳಿದಾಗ ಸ್ವಲ್ಪ ಸುಧಾರಣೆಯನ್ನು ಕಾಣಬಹುದು. ಅದಲ್ಲದೆ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಹಾಗೂ ಪ್ರಾಚಾರ್ಯರ ಸಂಘಗಳು ಸೇರಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗಾಗಿ ಹೊರ ತಂದಿರುವ “ಪಾಸಿಂಗ್ ಪ್ಯಾಕೇಜ್” ಕ್ರಮ ಅಳವಡಿಸಿಕೊಂಡು ಕಾಲೇಜುಗಳ ಒಟ್ಟಾರೆ ಫಲಿತಾಂಶಗಳಲ್ಲಿ ಪ್ರಗತಿ ಕಾಣುವಂತೆ ಮಾಡಬೇಕು ಎಂದು ತಿಳಿಸಿದರು.
ಅಜ್ಜನಗೌಡ ಪಾಟೀಲ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಎಂ.ಜಿ.ಭೋಗಾರ ಎಂ.ವ್ಹಿ.ಪಾಟೀಲ, ಎಸ್.ಎನ್.ಪೂಜಾರ, ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಎಚ್.ಬಿ.ಅಸೂಟಿ , ಡಾ. ಎಂ.ಪಿ.ಕುಲಕರ್ಣಿ, ಪಿ.ಬಿ.ಬಡಿಗೇರ, ಎಸ್.ಕೆ.ಜೋಶಿ, ಸಿ.ಎಫ್.ಜಾಧವ, ಎಸ್.ಜಿ.ಜಕ್ಕಲಿ, ಆರ್.ಎಸ್.ಪವಾರ, ಶಿಕ್ಷಣ ಇಲಾಖೆಯ ಸೂಪರಿಡೆಂಟ ಹೂಲ್ಲೂರ ಹಾಗೂ ವಿವಿಧ ಕಾಲೇಜುಗಳ ಉಪನ್ಯಾಸಕರು ಉಪಸ್ಥಿತರಿದ್ದರು. ಎನ್.ಎ.ಕಿತ್ತೂರ, ಆರ್.ಕೆ.ಐನಾಪೂರ, ಎನ್.ಎಂ.ಬಡಿಗೇರ ನಿರ್ವಹಿಸಿದರು.

loading...