ಪ್ಯಾಸೆಂಜರ್ ರೈಲು ಗಾಡಿಯಲ್ಲಿ ಡಿಸೇಲ್ ಸೋರಿಕೆ

0
8

ಸವಣೂರ: ಹುಬ್ಬಳ್ಳಿ ರೈಲ್ವೆ ಜಂಕ್ಷನ್‌ನಿAದ ಬೆಂಗಳೂರಿಗೆ ಹೊರಟಿದ್ದ ೫೬೫೧೬ ಸಂಖ್ಯೆಯ ಪ್ಯಾಸೆಂಜರ್ ರೈಲು ಗಾಡಿಯಲ್ಲಿ ಡಿಸೇಲ್ ಸೋರಿಕೆಯಾಗಿ ಪ್ರಯಾಣಿಕರನ್ನು ಬೆಚ್ಚಿ ಬಿಳಿಸಿದ ಘಟನೆ ಜರುಗಿದೆ.
ಮಂಗಳವಾರ ಬೆಳಿಗ್ಗೆ ೭.೫೦ಕ್ಕೆ ಹುಬ್ಬಳ್ಳಿ ಜಂಕ್ಷನ್‌ನಿAದ ಬೆಂಗಳೂರಿಗೆ ಹೊರಟಿದ್ದ ರೈಲು ಗಾಡಿ ಸಂಖ್ಯೆ ೫೬೫೧೬ ಪ್ಯಾಸೆಂಜರ್ ರೈಲು ಕಳಸ ರೈಲು ನಿಲ್ದಾಣ ದಾಟುವ ವೇಳೆಗೆ ರೈಲಿನ ಡಿಸೇಲ್ ಟ್ಯಾಂಕ್‌ನಿAದ ಡಿಸೇಲ್ ಸೋರಿಕೆ ಆರಂಭಗೊAಡಿದೆ. ಸವಣೂರ ತಾಲೂಕಿನ ಯಲವಿಗಿ ರೈಲು ನಿಲ್ದಾಣಕ್ಕೆ ರೈಲು ಆಗಮಿಸಿದ ಸಂದರ್ಭದಲ್ಲಿ ರೈಲು ಚಾಲಕ ಹಾಗೂ ಸಿಬ್ಬಂದಿ ಗಮನಿಸಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ರೈಲನ್ನು ಯಲವಿಗಿ ರೈಲು ನಿಲ್ದಾಣದಲ್ಲಿ ನಿಲ್ಲಿಸಿದ್ದಾರೆ. ಈ ಹಿನ್ನಲೆಯಲ್ಲಿ ಪ್ರಯಾಣಿಕರು ಸುಮಾರು ೩ ತಾಸು ಪರದಾಡುವಂತಾಯಿತು. ಬೆಳಿಗ್ಗೆ ೯ಕ್ಕೆ ನಿಂತ ರೈಲನ್ನು ೧೧.೪೦ಕ್ಕೆ ರೈಲು ಎಂಜೆನ್ ಬದಲಾವಣೆಗೊಳಿಸಿ ಬೆಂಗಳೂರಿಗೆ ಕಳುಹಿಸಲಾಯಿತು.
ನೀರಿನಂತೆ ಸೋರುತ್ತಿದ್ದ ಡಿಸೇಲ್‌ನ್ನು ತುಂಬಿಕೊAಡ ಗ್ರಾಮಸ್ಥರು: ರೈಲುನಿಂದ ಸೋರುತ್ತಿದ್ದ ಡಿಸೇಲ್‌ನ್ನು ಗ್ರಾಮದ ಕೆಲವರು ನೀರಿನ ಕೊಡದಲ್ಲಿ ತುಂಬಿಕೊAಡರೆ, ಕೆಲವರು ಡಬ್ಬಿಗಳಲ್ಲಿ ತುಂಬಿಕೊAಡು ಪರಾರಿಯಾದರು. ಸ್ಥಳದಲ್ಲಿದ್ದ ಸವಣೂರ ಪೋಲಿಸ್ ಅಧಿಕಾರಿಗಳು ಎಷ್ಟೇ ಕೋರಿದರು ಸಹ ಸಾರ್ವಜನಿಕರು ಡಿಸೇಲ್ ಹಿಡಿದುಕೊಂಡು ಇತರರಿಗೂ ತುಂಬಿಕೊಳ್ಳಲು ಪ್ರೋತ್ಸಾಹಿಸುತ್ತಿದ್ದು ಕಂಡು ಬಂದಿತು.
ಜೀವದ ಹಂಗು ತೊರೆದು, ಕಾನೂನಿಗೂ ಬೆಲೆ ಕೊಡದೇ ೫೦೦೦ ಲೀ. ಸಾಮಾರ್ಥ್ಯದ ಡಿಸೇಲ್ ಟ್ಯಾಂಕ್ ಸಂಪೂರ್ಣ ಖಾಲಿ ಆಗುವವರಿಗೂ ತುಂಬಿಕೊAಡ ಗ್ರಾಮಸ್ಥರ ಬಗ್ಗೆ ಪ್ರಯಾಣಿಕರು ಬೇಸರ ವ್ಯಕ್ತ ಪಡೆಸಿದರು. ಮಂಗಳವಾರ ರೈಲು ಕೆಟ್ಟುನಿಂತಿದೆ ಎನ್ನುವ ಬದಲಾಗಿ ಕೆಲವರು ಯಲವಿಗಿ ರೈಲು ನಿಲ್ದಾಣದಲ್ಲಿ ರೈಲ್ವೆ ಅಪಘಾತವಾಗಿದೆ ಎಂದು ತಿಳಿಸಿದ ಪರಿಣಾಮ ಜನರು ಬೆಚ್ಚಿಬಿದ್ದು ನೋಡಲು ದೌಡಾಯಿಸುವಂತಾಯಿತು. ಯಾವದೇ ರೀತಿಯ ಅಪಘಾತ ಸಂಭವಿಸದಿರುವ ಹಿನ್ನಲೆಯಲ್ಲಿ ನಿಟ್ಟುಸಿರು ಬಿಟ್ಟರು.

loading...