ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ

0
13

ವಿಜಯಪುರ : ಡಾ. ಸರೋಜನಿ ಮಹಿಷಿ ವರದಿಯನ್ನು ಜಾರಿಗೊಳಿಸುವುವುದ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಜನಸೇನೆ ಸಂಘಟನೆ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ನಂತರ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಸಂಘಟನೆ ಜಿಲ್ಲಾಧ್ಯಕ್ಷ ಎ.ಎಂ. ಮುಕಬಿಲ್ ಮಾತನಾಡಿ, ಡಾ.ಸರೋಜಿನಿ ಮಹಿಷಿ ವರದಿಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸುವ ಕೆಲಸ ಇಂದಿಗೂ ನಡೆದಿಲ್ಲ. ವರದಿ ಸಲ್ಲಿಸಿ ೩೩ ವರ್ಷಗಳು ಕಳೆದರೂ ಸಹ ವರದಿಯಲ್ಲಿರುವ ಅಂಶಗಳನ್ನು ಜಾರಿ ಮಾಡುವಲ್ಲಿ ಯಾವೊಂದು ಸರ್ಕಾರಗಳು ಆಸಕ್ತಿ ತೋರುತ್ತಿಲ್ಲ ಎಂದು ದೂರಿದರು. ಸರಕಾರ ಕನ್ನಡಿಗರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು. ಕರ್ನಾಟಕ ಏಕೀಕರಣಗೊಂಡ ನಂತರ ರಾಜ್ಯದಲ್ಲಿ ಆಡಳಿತ ನಡೆಸಿದ್ದ ಯಾವುದೇ ಸರಕಾರ ನಾಡಿನಲ್ಲಿ ಕನ್ನಡಿಗರ ಉದ್ಯೋಗಕ್ಕೆ ಆದ್ಯತೆ ನೀತಿ ಜಾರಿಗೊಳಿಸಬೇಕು. ಆದಷ್ಟು ಬೇಗನೆ ಈ ವರದಿಯನ್ನು ಜಾರಿಗೆ ತರಲು ಸರಕಾರ ಎಚ್ಚೆತ್ತುಕೊಳ್ಳಬೇಕು ಎಂದು ಆಗ್ರಹಿಸಿದರು.
ಸಂಘಟನೆ ಕಾರ್ಯಾಧ್ಯಕ್ಷ ಸಾಜಿದಹುಸೇನ ರಿಸಾಲದಾರ ಮಾತನಾಡಿ, ನಾಡಿನಲ್ಲಿ ಸ್ಥಾಪನೆಗೊಳ್ಳುವ ಬಹುರಾಷ್ಟಿçÃಯ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡಿಲ್ಲ. ಹೀಗಾಗಿ ಕನ್ನಡ ನಾಡಿನಲ್ಲಿ ಕನ್ನಡಿಗರೆ ನಿರುದ್ಯೋಗಿಗಳಾಗಿದ್ದಾರೆ. ನಾಡಿನಲ್ಲಿ ಸ್ಥಾಪನೆಯಾಗುವ ಕಂಪನಿಗಳಲ್ಲಿ ೮೦ರಷ್ಟು ಉದ್ಯೋಗವನ್ನು ಕನ್ನಡಿಗರಿಗೆ ಮೀಸಲಿಡಬೇಕು ಎಂದು ಡಾ. ಸರೋಜನಿ ಮಹಿಷಿ ವರದಿ ನೇತೃತ್ವ ಸಮಿತಿಯು ವರದಿ ಶಿಫಾರಸ್ಸು ಮಾಡಿದೆ ಕೂಡಲೇ ಈ ವರದಿಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಭೀಮಪ್ಪ ಎಂ. ಮಸಬಿನಾಳ, ಖಾಜಾಮೈನುದ್ದಿನ ಪಟೇಲ, ರಜಾಕ ರೂಗಿ, ಪ್ರಶಾಂತ ವಾಲಿಕಾರ, ಚಂದ್ರಕಾAತ ಅರನಾಳ, ಇನಾಯತ ಇನಾಮದಾರ, ಚೇತನ ಹಳಂಗಳಿ, ಫೈರೋಜ ಬಾಗವಾನ, ಜುಬೇರ ಹುಜೇರಿ, ಮಹಮ್ಮದ ಅತನೂರ, ವಾಹೀದ ಪುಣೆಕರ, ಹಮೀದ ಇನಾಮದಾರ ಪಾಲ್ಗೊಂಡಿದ್ದರು.

loading...