ಅಂಗವಿಕಲರಿಗೆ ಉಚಿತ ಕೃತಕ ಅಂಗಾAಗ ಹಾಗೂ ಸಾಧನ ಸಲಕರಣೆ ವಿತರಣೆ

0
31

ವಿಜಯಪುರ : ಅಂಗವಿಕಲತೆ ಎಂಬುದು ಯಾವುದೇ ಶಾಪ, ಕರ್ಮ, ಪೂರ್ವಜನ್ಮದಿಂದ ಬಂದಿದ್ದಲ್ಲ. ಅದು ವೈದ್ಯಕೀಯ ಕಾರಣಗಳಿಂದಾಗಿ ಉಂಟಾಗಿರುವAತಹದು. ಅದರ ಬಗ್ಗೆ ಮರುಕ ಪಟ್ಟುಕೊಳ್ಳದೆ ಅಂಗವೈಕಲ್ಯತೆಯನ್ನೆ ಸವಾಲಾಗಿ ಸ್ವೀಕರಿಸಿ, ಛಲದಿಂದ ಮುನ್ನಡೆಯಲು ಸಮಾಜದಿಂದ ಅಗತ್ಯ ಬೆಂಬಲ ನೀಡಬೇಕು ಎಂದು ಮಾಜಿ ಸಚಿವ, ಬಿ.ಎಲ್.ಡಿ.ಇ ಅಧ್ಯಕ್ಷ ಎಂ.ಬಿ.ಪಾಟೀಲ್ ಹೇಳಿದರು.
ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ಉಚಿತ ಕೃತಕ ಅಂಗಾAಗ ಹಾಗೂ ಸಾಧನ-ಸಲಕರಣೆಯನ್ನು ವಿತರಿಸಿ ಮಾತನಾಡಿದ ಅವರು, ಆಸ್ಕರ್ ಪಿಕ್ಟೊರಿಯಸ್ ನಂತಹ ಕಾಲೆ ಇಲ್ಲದ ವ್ಯಕ್ತಿ ಓಟದಲ್ಲಿ ವಿಶ್ವವನ್ನೇ ಬೆರಗಾಗುವಂತೆ ಮಾಡಿದ್ದಾರೆ. ದೇಹದ ಎಲ್ಲ ಅವಯವಗಳು ಪರಿಪೂರ್ಣವಾಗಿದ್ದರೂ, ಸಾಧಿಸಲಾರದ ಕಾರ್ಯಗಳನ್ನು ದೈಹಿಕವಾಗಿ ಅಂಗವಿಕಲತೆಯನ್ನು ಹೊಂದಿಯೆ ಅನೇಕರು ಸಾಧಿಸಿದ್ದಾರೆ. ಸರ್ಕಾರ, ಸಮಾಜ ಅವರ ಬಗ್ಗೆ ಕೇವಲ ಅನುಕಂಪ ತೋರದೆ, ಬೆಂಬಲವಾಗಿದ್ದುಕೊAಡು ಅವರ ಸಾಧನೆಗೆ ವೇದಿಕೆ ಕಲ್ಪಿಸಬೇಕು ಎಂದರು. ದೈಹಿಕ ವಿಕಲತೆ ಯಾವುದೇ ಪಾಪ-ಪುಣ್ಯಗಳಿಂದ ಉಂಟಾಗಿರುವದಿಲ್ಲ. ಇದು ಮಿಥ್ಯೆ. ವೈದ್ಯಕೀಯ ಕಾರಣಗಳಿಂದಾಗಿ ಇಂತಹ ತೊಂದರೆಗಳಾಗಿರುತ್ತವೆ ಎಂದರು.
ಬಿ.ಎಂ.ಪಾಟೀಲ್ ವೈದ್ಯಕೀಯ ಕಾಲೇಜು ಪ್ರಾಚಾರ್ಯ ಡಾ.ಅರವಿಂದ ಪಾಟೀಲ್, ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ವಿಜಯಕುಮಾರ ಕಲ್ಯಾಣಪ್ಪಗೋಳ, ಮಾಜಿ ಶಾಸಕ ಪ್ರೊ.ರಾಜು ಆಲಗೂರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಡಾ. ಸಿ.ಬಿ.ಕುಂಬಾರ, ನಿರ್ಮಲಾ ಸುರುಪುರ, ನೊಡೆಲ್ ಅಧಿಕಾರಿ ಡಾ.ಈಶ್ವರ ಬಾಗೋಜಿ, ಡಾ. ಅನ್ನಪೂರ್ಣ ಸಜ್ಜನ ವೇದಿಕೆಯಲ್ಲಿದ್ದರು.

loading...