ರಾಜ್ಯಮಟ್ಟದ ಸೈಕ್ಲಿಂಗ್ ಚಾಂಪಿಯನ್‌ಶಿಫ್‌ಗೆ ಸಚಿವ ಕೆ.ಎಸ್. ಈಶ್ವರಪ್ಪ ಚಾಲನೆ

0
15

ವಿಜಯಪುರ : ಬೆಂಗಳೂರಿನಲ್ಲಿ ನಡೆಯಲಿರುವ ಕ್ರೀಡಾಇಲಾಖೆಯ ಮಹತ್ವದ ಸಭೆಯಲ್ಲಿ ವಿಜಯಪುರ ವೆಲೋಡ್ರೋಂ ನಿರ್ಮಾಣ ಕಾಮಗಾರಿಗೆ ಸಂಬAಧಿಸಿದAತೆ ಸಮಗ್ರವಾಗಿ ಚರ್ಚೆ ನಡೆಸಿ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಯುವಜನಸೇವಾ ಹಾಗೂ ಕ್ರೀಡಾ ಇಲಾಖೆ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.
ವಿಜಯಪುರದ ಬಿಎಲ್‌ಡಿಇ ಸಂಸ್ಥೆಯ ನೂತನ ಕ್ಯಾಂಪಸ್‌ನಲ್ಲಿ ಕರ್ನಾಟಕ ಅಮೆಚ್ಯೂರ್ ಸೈಕ್ಲಿಂಗ್ ಅಸೋಸಿಯೇಷನ್ ಹಗೂ ವಿಜಯಪುರ ಅಮೆಚ್ಯೂರ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೧೨ ನೇ ರಾಜ್ಯಮಟ್ಟದ ಟ್ರಾö್ಯಕ್ ಸೈಕ್ಲಿಂಗ್ ಚಾಂಪಿಯನ್‌ಶಿಫ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ಡಿಸೆಂಬರ್ ೬ ರಂದು ಬೆಂಗಳೂರಿನಲ್ಲಿ ಕ್ರೀಡಾ ಇಲಾಖೆಯ ಮಹತ್ವದ ಸಭೆ ನಡೆಯಲಿದೆ, ಡಿ.೬ ರಂದು ಬೆಂಗಳೂರಿನಲ್ಲಿ ಕ್ರೀಡಾ ಇಲಾಖೆ ಬೋರ್ಡ್ ಮಿಟಿಂಗ್ ಇದೆ. ಅಲ್ಲಿ ವೆಲೊಡ್ರೋಮ್ ಕುರಿತಂತೆ ವರದಿ ತರಿಸಿಕೊಂಡು, ಸೈಕ್ಲಿಂಗ್ ತಜ್ಞರ ಜೊತೆ ಚರ್ಚಿಸಿ, ಆದಷ್ಟು ಶೀಘ್ರ ಕಾಮಗಾರಿ ಪೂರ್ಣಗೊಳಿಸಿ ಸೈಕ್ಲಿಂಗ್ ಕ್ರೀಡಾಪಟುಗಳಿಗೆ ಅನುಕೂಲ ಮಾಡಿಕೊಡಲಾಗುವುದು. ಅಲ್ಲದೆ, ಜಿಲ್ಲೆಗೆ ಅವಶ್ಯವಿರುವ ಕ್ರೀಡಾ ಸೌಲಭ್ಯಗಳನ್ನು ಕಲ್ಪಿಸಲಾಗುವುದು, ವಿಜಯಪುರ ಜಿಲ್ಲೆಯ ಜನತೆ ಹಾಗೂ ಸೈಕ್ಲಿಸ್ಟ್ಗಳ ಹಲವು ವರ್ಷಗಳ ವೆಲೊಡ್ರೋಮ್ ಕನಸು ನನಸು ಮಾಡಲು ಬದ್ಧನಿದ್ದೇನೆ ಎಂದರು.
ಎಲ್ಲ ಕ್ರೀಡೆಗಳಲ್ಲಿಯೇ ಸೈಕ್ಲಿಂಗ್ ಸಾಹಸ ಕ್ರೀಡೆಯಾಗಿದೆ. ಹಲವರು ಸೈಕಲ್ ಮೇಲೆಯೇ ರಾಜ್ಯ, ರಾಷ್ಟç ಪ್ರವಾಸ ಕೈಗೊಂಡಿದ್ದು ಕೇಳಿದ್ದೇನೆ. ಆರೋಗ್ಯದ ದೃಷ್ಟಿಯಿಂದಲೂ ಸೈಕ್ಲಿಂಗ್ ಅತ್ಯುತ್ತ. ಭಾರತೀಯ ಸಂಸ್ಕೃತಿ ಬೆಳೆಸುವ ಜತೆಗೆ ದೇಶವನ್ನು ಒಂದುಗೂಡಿಸುವ ಶಕ್ತಿ ಸೈಕ್ಲಿಂಗ್ ಕ್ರೀಡೆಗೆ ಇದೆ ಎಂದರು.

ನೂತನ ಮೈದಾನಕ್ಕೆ ೧೦ ಕೋಟಿ ರೂಅನುದಾನ ಕೊಡಿ
ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಅವಿಭಜಿತ ವಿಜಯಪುರ-ಬಾಗಲಕೋಟೆ ಜಿಲ್ಲೆಯ ಕ್ರೀಡಾಪಟುಗಳು ಸೈಕ್ಲಿಂಗ್‌ನಲ್ಲಿ ರಾಷ್ಟç ಮಟ್ಟದಲ್ಲಿ ಹೆಸರುವಾಸಿಯಾಗಿದ್ದಾರೆ. ಅವರ ವೆಲೊಡ್ರೋಮ್ ಕನಸು ನನಸು ಮಾಡಬೇಕು. ಕ್ರೀಡಾ ಹಬ್ ಮಾಡುವ ನಿಟ್ಟಿನಲ್ಲಿ ಈಗಾಗಲೇ ಅಂತರರಾಷ್ಟಿçÃಯ ಮಟ್ಟದ ಸ್ಮಿಮ್ಮಿಂಗ್ ಪೂಲ್, ಸಿಂಥೇಟಿಕ್ ಮೈದಾನ ಸೇರಿದಂತೆ ಹಲವಾರು ಕಾರ್ಯಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು. ವಿಜಯಪುರದಲ್ಲಿ ಇನ್ನೊಂದು ಮೈದಾನದ ಅವಶ್ಯಕತೆಯಿದ್ದು, ಬಿಎಲ್‌ಡಿಇ ಸಂಸ್ಥೆ ಎದುರಿನ ೮ ಎಕರೆ ಜಾಗದಲ್ಲಿ ಮೈದಾನ ನಿರ್ಮಿಸಲು ೧೦ ಕೋಟಿ ರೂ. ಅನುದಾನ ಕಲ್ಪಿಸಬೇಕು’ಎಂದು ಸಚಿವರಲ್ಲಿ ಮನವಿ ಮಾಡಿದರು.
ವಿಜಯಪುರ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಷನ್ ಅಧ್ಯಕ್ಷ ರಾಜು ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ನಾಗಠಾಣ ಶಾಸಕ ದೇವಾನಂದ ಚವ್ಹಾಣ, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಸಿಇಓ ಗೋವಿಂದ ರೆಡ್ಡಿ, ಸಂಸ್ಥೆಯ ಎಸ್.ಎಂ.ಗೋರೆ, ಸಿ.ಎಂ.ಕುರಣಿ ಮೊದಲಾದವರು ಪಾಲ್ಗೊಂಡಿದ್ದರು.

loading...