ಉಪಚುನಾವಣೆ: ಬೆಳಗಾವಿ ಮೂರು ಕ್ಷೇತ್ರದಲ್ಲಿ ಇಲ್ಲಿಯವರೆಗೆ 7.10ಮತದಾನ

0
19


ಬೆಳಗಾವಿ

ಗುರುವಾರ ಬೆಳಿಗ್ಗೆಯಿಂದ ಉಪಚುನಾವಣೆಯ ಮತದಾನ ಪ್ರಕ್ರಿಯೆ ಆರಂಭವಾಗಿದ್ದು ಬೆಳಿಗ್ಗೆ9 ಗಂಟೆಯ ವರೆಗೆ ಒಟ್ಟು 7.10% ಮತದಾನವಾಗಿದೆ.
ಅಥಣಿ- 8.33%, ಕಾಗವಾಡ 6.94%, ಗೋಕಾಕ-6.11% ಮತದಾನವಾಗಿದೆ. ಇದಕ್ಕೂ ಮುನ್ನ ಚುನಾವಣಾ ಆಯೋಗ ಮತದಾನಕ್ಕೆ ಸಕಲ ಸಿದ್ದತೆ ಮಾಡಿಕೊಂಡಿದೆ. ಗೋಕಾಕ್ ಮುನ್ಸಿಪಲ್ ಕಾಲೇಜಿನಲ್ಲಿ ಮಾಸ್ಟರಿಂಗ್, ಡಿ-ಮಾಸ್ಟರಿಂಗ್ ಕಾರ್ಯ ನಡೆದಿದ್ದು, ಮತಯಂತ್ರದ ಕಿಟ್ ನೀಡಿ ಚುನಾವಣಾ ಸಿಬ್ಬಂದಿಯನ್ನು ಬೂತ್​ಗಳಿಗೆ ನಿಯೋಜಿಸಲಾಗಿದೆ.

ಇನ್ನು ಗೋಕಾಕ್ ಉಪಚುನಾವಣೆ ಮತದಾನಕ್ಕೆ 1,300 ಸಿಬ್ಬಂದಿ ಬಳಕೆ ಮಾಡಿಕೊಳ್ಳಲಾಗಿದೆ. ಗೋಕಾಕ್ ಕ್ಷೇತ್ರದಲ್ಲಿ ಒಟ್ಟು 2,42,124 ಮತದಾರರಿದ್ದು, ಅದರಲ್ಲಿ ಪುರುಷ ಮತದಾರರು 1,19,737, ಮಹಿಳಾ – ಮತದಾರರು 1,22,373, ಇತರೆ 14 ಮತದಾರರು ಮತ್ತು 1,573 ಸೇವಾ ಮತದಾರರು ಇದ್ದಾರೆ.
ಗೋಕಾಕ್ ಕ್ಷೇತ್ರದ ನಗರ ಪ್ರದೇಶದಲ್ಲಿ 123, ಗ್ರಾಮೀಣ ಪ್ರದೇಶದಲ್ಲಿ 165 ಸೇರಿ ಒಟ್ಟು 288 ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದ್ದು, ಮಹಿಳಾ ಮತದಾರರಿಗಾಗಿ ಒಂದು ಸಖಿ ಮತಗಟ್ಟೆ ಸ್ಥಾಪನೆ ಮಾಡಲಾಗಿದೆ.

loading...