ಎಚ್‌ಐವಿ ಪೀಡಿತರಿಗೆ ಮಾನಸಿಕ ಬೆಂಬಲ ಅಗತ್ಯ: ಕೊರವನವರ

0
8

ನರಗುಂದ: ಎಚ್‌ಐವಿ ಪೀಡಿತರಿಗೆ ಮಾನಸಿಕ ಬೆಂಬಲವನ್ನು ನೀಡುವುದರ ಜತೆಗೆ ಸಮಾಜದಲ್ಲಿ ಮುಕ್ತ ವಾತಾವರಣವನ್ನು ಅವರಿಗೆ ಕಲ್ಪಿಸಿಕೊಡಬೇಕಿದೆ ಎಂದು ತಾಲೂಕು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಆರ್.ಸಿ.ಕೊರವನವರ ಹೇಳಿದರು.
ಪಟ್ಟಣದ ಬಾಬಾಸಾಹೇಬ ಭಾವೆ ತಾಲೂಕಾಸ್ಪತ್ರೆಯಲ್ಲಿ ಬುಧವಾರ ಆರೋಗ್ಯ ಇಲಾಖೆಯಿಂದ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್ ನಿರ್ಮೂಲನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಸುರಕ್ಷಿತ ಲೈಂಗಿಕ ಕ್ರೀಯೆಯಿಂದ, ಸಂಸ್ಕರಿಸಲ್ಪಡದ ಸೂಜಿಯ ಸಿರಿಂಜಿ, ಪರೀಕ್ಷೆಗೊಳಪಡಿಸದ ರಕ್ತದ ಬದಲಾವಣೆ ಹಾಗೂ ಸೋಂಕಿತ ತಾಯಿಯಿಂದ ಹುಟ್ಟುವ ಮಕ್ಕಳಿಗೆ ಎಚ್‌ಐವಿ ರೋಗವು ಹರಡುತ್ತದೆ. ಕರ್ನಾಟಕ ರಾಜ್ಯದಲ್ಲಿ ೩.೪೧ ಲಕ್ಷ ಎಚ್.ಐ.ವಿ ಸೋಂಕಿತರು ಕಂಡು ಬಂದಿದ್ದು, ೨.೭೧ ಲಕ್ಷ ಜನರು ಎಆರ್.ಟಿ ಚಿಕಿತ್ಸೆಯಲ್ಲಿದ್ದಾರೆ. ಅದಲ್ಲದೇ ನರಗುಂದ ತಾಲೂಕಿನಲ್ಲಿ ೫೪೨ ಜನರು ಎಚ್.ಐ.ವಿ ಸೋಂಕಿತರಿದ್ದಾರೆ ಎಂದು ತಿಳಿಸಿದರು.
ಎನ್.ಎಲ್.ಮಡಿವಾಳರ, ಎಚ್.ಐ.ವಿ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಡಾ. ಪ್ರವೀಣ ಮೇಟಿ, ಡಾ. ಪ್ರಶಾಂತ ಮಲ್ಲಾಪೂರ, ಪಿ.ಕೆ.ಪಾಗಿ, ಬಿ.ಕೆ.ನದಾಫ, ವಿ.ಎಚ್.ಪವಾರ, ಎಂ.ಆರ್.ಕುಲಕರ್ಣಿ, ಪಿ.ಟಿ.ಪತಂಗೆ, ಬಿ.ಎಂ.ಕೌಜಗೇರಿ, ಜಿ.ವಿ ಕೊಣ್ಣೂರ, ಎನ್.ಬಿ.ಜೋಶಿ, ಶಿವಾನಂದ ಕುರಹಟ್ಟಿ ಹಾಗೂ ತಾಲೂಕಿನ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂಧಿ, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

loading...