ಕಾಗವಾಡದಲ್ಲಿ ಕೈ ಅಭ್ಯರ್ಥಿ ರಾಜು ಕಾಗೆ ,ಬಿಜೆಪಿ ಹುರಿಯಾಳು ಶ್ರೀಮಂತ ಪಾಟೀಲ ಮತದಾನ

0
38

ಕನ್ನಡಮ್ಮ ಸುದ್ದಿ-ಕಾಗವಾಡ : ಉಪ ಚುನಾವಣೆಯ ಕಾಗವಾಡ ಮತಕ್ಷೇತ್ರ ಅಭ್ಯರ್ಥಿ ಇಂದು ಮುಂಜಾನೆ ಕುಟುಂಬ ಸಮೇತ ಆಗಮಿಸಿ ಮತ ಚಲಾಯಿಸಿದರು .
ಬೆಳಗಾವಿ ಜಿಲ್ಲೆಯ ಕಾಗವಾಡ ಉಪ ಚುನಾವಣೆ ಮತದಾನ ಇಂದು ಮುಂಜಾನೆಯಿಂದ ಆರಂಭವಾಗಿದ್ದು , ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ತಮ್ಮ ಸ್ವಗ್ರಾಮ ಉಗಾರ ಖುದ್ರದಲ್ಲಿ ಬೆಳ್ಳಗೆ ೭ ಗಂಟೆಗೆ ಕುಟುಂಬಸ್ಥರ ಜೊತೆ ಆಗಮಿಸಿ ಮತದಾನ ಮಾಡಿದರು . ಇನ್ನು ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ಕೂಡ ಕೆಂಪವಾಡ ಸರಕಾರಿ ಶಾಲೆಯಲ್ಲಿ ಕುಟುಂಬಸ್ಥರೊಂದಿಗೆ ಆಗಮಿಸಿ ಮತ ಚಲಾಯಿಸಿದರು .
ಕಾಗವಾಡದಲ್ಲಿ ಕೈ ಕಮಲ ನಡುವೆ ಪೈಪೋಟಿ ಇದ್ದು , ಡಿ.೯ ರಂದು ಹೊರ ಬೀಳುವ ಫಲಿತಾಂಶ ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಮಾಡಲಿದೆ .

loading...