೧೧ ರಿಂದ ಶಾಲಾ ಮಕ್ಕಳಿಗೆ ಡಿಟಿಪಿ, ಟಿಡಿ ಲಸಿಕಾ ಅಭಿಯಾನ

0
22

 

ಬಾಗಲಕೋಟೆ: ರಾಜ್ಯದಲ್ಲಿ ಡಿಪ್ಟೀರಿಯಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ಡಿಸೆಂಬರ ೧೧ ರಿಂದ ೩೧ ವರೆಗೆ ೫ ರಿಂದ ೬ ವರ್ಷದ ಮಕ್ಕಳಿಗೆ ಡಿಪಿಟಿ ಲಸಿಕೆ ಹಾಗೂ ೭ ರಿಂದ ೧೬ ವರ್ಷದ ಮಕ್ಕಳಿಗೆ ಟಿಡಿ ಲಸಿಕೆ ನೀಡುವ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿAದು ಜರುಗಿದ ಲಸಿಕಾ ಅಭಿಯಾನದ ಕುರಿತು ಡಿಪಿಎಫ್‌ಐ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಡಿಪ್ತೀರಿಯಾ ರೋಗದ ತೀವೃತೆಯ ಪ್ರಮಾಣದ ಜಿಲ್ಲೆಗಳಲ್ಲಿ ಬಾಗಲಕೋಟೆ ಒಂದಾಗಿದ್ದು, ೫ ರಿಂದ ೧೬ ವಯಸ್ಸಿನ ಎಲ್ಲ ಮಕ್ಕಳನ್ನು ಅಭಿಯಾನದ ವ್ಯಾಪ್ತಿಗೆ ಒಳಪಡಿಸಲಾಗುತ್ತಿದೆ. ೧ನೇ ತರಗತಿ ಮಕ್ಕಳಿಗೆ ಡಿಪಿಟಿ ಲಸಿಕೆಯನ್ನು ಹಾಗೂ ೨ ರಿಂದ ೧೦ನೇ ತರಗತಿ ಮಕ್ಕಳಿಗೆ ಟಿಡಿ ಲಸಿಕೆಯನ್ನು ನೀಡಲಾಗುತ್ತದ್ದು, ಯಾವಮಕ್ಕಳು ಈ ಲಸಿಕೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಲು ಸೂಚಿಸಿದರು.
ಜಿಲ್ಲೆಯಾದ್ಯಂತ ೫ ರಿಂದ ೧೬ ವರ್ಷದೊಳಗಿನ ಒಟ್ಟು ೪೨೭೧೯೬ ಮಕ್ಕಳಿ ಲಸಿಕೆಯನ್ನು ಹಾಕಲಾಗುತ್ತಿದೆ. ಅದರಲ್ಲಿ ೫ ರಿಂದ ೬ ವರ್ಷದ ಒಟ್ಟು ೪೫೩೫೮ ಹಾಗೂ ೭ ರಿಂದ ೧೬ ವರ್ಷದ ಒಟ್ಟು ೩೮೧೮೩೮ ಮಕ್ಕಳಿದ್ದಾರೆ. ಈ ಎಲ್ಲ ಮಕ್ಕಳು ಲಸಿಕೆಯಿಂದ ವಂಚಿತರಾಗದAತೆ ನೋಡಿಕೊಳ್ಳಬೇಕು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಜಿಲ್ಲೆಯಲ್ಲಿರುವ ಎಲ್ಲ ಸರ್ಕಾರಿ, ಅನುದಾನಿತ, ಖಾಸಗಿ ಶಾಲೆಗಳ ಮಕ್ಕಳ ಪಟ್ಟಿಯನ್ನು ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳ ಪಟ್ಟಿಯನ್ನು ಸಹ ಆರೋಗ್ಯ ಇಲಾಖೆ ನೀಡುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲೆಯ ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಮಾಜ ಕಲ್ಯಾಣ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಿಗೆ ಹಾಗೂ ಆಯಾ ಶಾಲೆಯ ಸಿಆರ್‌ಸಿ ಮತ್ತು ಬಿಆರ್‌ಸಿಗಳಿಗೆ ಲಸಿಕೆ ಕುರಿತು ತರಬೇತಿ ನೀಡಬೇಕು. ಸಿಆರ್‌ಸಿ ಮತ್ತು ಬಿಆರ್‌ಸಿಗಳು ತಮ್ಮ ವ್ಯಾಪ್ತಿಯ ಶಾಲಾ ಮುಖ್ಯ ಗುರುಗಳಿಗೆ ಲಸಿಕೆಯಿಂದಾಗ ಪ್ರಯೋಜನವನ್ನು ತಿಳಿಸಿ ಪಾಲಕರಿಗೆ ಮನದಟ್ಟು ಮಾಡಿ ತಮ್ಮ ಮಕ್ಕಳಿಗೆ ತಪ್ಪದೇ ಲಸಿಕೆಗಳನ್ನು ಹಾಕಿಸುವ ಕೆಲಸವಾಗಬೇಕು ಎಂದರು.
ವರ್ಡ ಹೆಲ್ತ ರ‍್ಗಾನಿಜೇಶನ್‌ದ ಎಸ್‌ಎಂಓ ಡಾ.ಮುಕುಂದ ಗಲಗಲಿ ಅವರು ಲಸಿಕೆಯ ಬಗ್ಗೆ ಪಿಪಿಟಿ ಮೂಲಕ ವಿವರವಾಗಿ ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ಕಸಾಪ್‌ನ ಜಂಟಿ ನಿರ್ದೇಶಕ ಶಾಸ್ತಿç, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅನಂತ ದೇಸಾಯಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್.ಬಿರಾದಾರ, ಲಸಿಕಾ ಕಾರ್ಯಕ್ರಮ ಅಧಿಕಾರಿ ಬಿ.ಜಿ.ಹುಬ್ಬಳ್ಳಿ, ತಹಶೀಲ್ದಾರ ಹಿರೇಮಠ, ಕೆಎಚ್‌ಪಿಟಿಯ ಹಿರಿಯ ಅಡ್ವೆöÊಜರ್ ಅಶೋಕಾನಂದ ಮತ್ತು ತೇಜಸ್ವಿನಿ ಹಿರೇಮಠ ಸೇರಿದಂತೆ ಆಯಾ ತಾಲೂಕಿನ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

loading...