ಭಗವಂತನ ಆರಾಧನೆಯಿಂದ ಶಾಶ್ವತ ಆನಂದ ಪ್ರಾಪ್ತಿ: ಈಶಪ್ರಿಯತೀರ್ಥ ಸ್ವಾಮೀಜಿ

0
54

ಬಾಗಲಕೋಟೆಃ ಭಗವಂತನ ಆರಾಧನೆಯಿಂದ ಮಾತ್ರವೇ ಶಾಶ್ವತವಾಗಿರುವ ಆನಂದ ಪ್ರಾಪ್ತವಾಗಲು ಸಾಧ್ಯ ಎಂದು ಉಡುಪಿ ಅದಮಾರು ಮಠದ ಕಿರಿಯ ಸ್ವಾಮೀಜಿ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಹೇಳಿದ್ದಾರೆ.
ಉಡುಪಿ ಶ್ರೀಕೃಷ್ಣಮಠದ ಪರ್ಯಾಯ ಪೂವಭಾವಿಯಾಗಿ ಸಂಚಾರ ಕೈಗೊಂಡಿರುವ ಅವರು ಮೂರು ದಿನದ ಭೇಟಿಗೆ ಬಾಗಲಕೋಟೆಗೆ ಆಗಮಿಸಿದ್ದು, ಶೋಭಾಯಾತ್ರೆ ನಂತರ ವಿದ್ಯಾಗಿರಿಯ ಶ್ರೀವಿಪ್ರ ರಾಯರಮಠದಲ್ಲಿ ಆಶಿರ್ವಚನ ನೀಡಿದರು. ಮನುಷ್ಯ ಶಾಶ್ವತ ಪ್ರೀತಿಗಾಗಿ ಯಾವುದೇ ವಸ್ತುವಿನ ಹಿಂದೆ ಹೋದರೆ ಪ್ರೀತಿ ಸಿಗುವುದಿಲ್ಲ. ಶಾಶ್ವತವಾಗಿರುವುದು ಭಗವಂತ ಮಾತ್ರ ಹೀಗಾಗಿ ಭಗವಂತನ ಜಪ,ತಪದಿಂದ ಮಾತ್ರವೇ ಮನುಷ್ಯ ಆನಂದ ಕಾಣಲು ಸಾಧ್ಯ ಎಂದು ಹೇಳಿದರು.
ಮೋಕ್ಷ ಪಡೆಯಲು ಎಲ್ಲರೂ ಪ್ರಯತ್ನಿಸುತ್ತಾರೆ. ಆದರೆ ಮೋಕ್ಷಕ್ಕೆ ತ್ಯಾಗ ಮುಖ್ಯವಾಗಿರುತ್ತದೆ. ಅಂಟಿಕೊAಡಿದ್ದರೆ ತ್ಯಾಗ ಸಾಧ್ಯವಿಲ್ಲ. ನಾವು ಯಾವುದನ್ನು ಹೆಚ್ಚಾಗಿ ಚಿಂತಿಸಿ, ಯೋಚಿಸುತ್ತೇವೆಯೋ ಅದೇ ಜತೆಗಿರುತ್ತದೆ. ಸದಾ ಭಗವಂತನ ಸ್ಮರಣೆಯಲ್ಲಿದ್ದರೆ ಮಾತ್ರವೇ ಲೌಕಿಕವಾಗಿರುವುದನ್ನು ಬಿಟ್ಟಿರಲು ಸಾಧ್ಯ ಹೀಗಾಗಿ ಶಾಸ್ತçಗಳು ಭಗವಂತನ ಇರುವಿಕೆಯನ್ನು ತೋರುತ್ತವೆ. ಪ್ರವಚನಗಳು ಭಗವಂತ ಸ್ಮರಣೆ ಜತೆಗೆ ಆಧ್ಯಾತ್ಮಿಕ ಮಾರ್ಗವನ್ನು ತೋರಿಸುತ್ತವೆ. ಪ್ರವಚನಗಳನ್ನು ಆಲಿಸುವುದು ಎಂದರೆ ಕಿವಿಯಿಂದ ಅಮೃತ ಸ್ವೀಕರಿಸಿದಂತೆ ಎಂದು ವಿವರಿಸಿದರು.
ಉಡುಪಿ ಶ್ರೀಕೃಷ್ಣಮಠದಲ್ಲಿ ಮುಂದಿನ ತಿಂಗಳು ಜನವರಿಯಲ್ಲಿ ಅದಮಾರು ಮಠದ ಪರ್ಯಾಯ ಆರಂಭಗೊಳ್ಳಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಆಹ್ವಾನಿಸಿದರು.
ಪಂ. ರಘೋತ್ತಮಾಚಾರ್ಯ ನಾಗಸಂಪಿಗೆ, ಪಂ.ಬಿAದಾಚಾರ್ಯ ನಾಗಸಂಪಿಗೆ, ಪಂ.ಭೀಮಸೇನಾಚಾರ್ಯ ಪಾಂಡುರAಗಿ, ಪಂ.ನವೀನಾಚಾರ್ಯ ಜೋಶಿಉಪಸ್ಥಿತರಿದ್ದರು.

loading...