ಮಕ್ಕಳು ವೈಜ್ಞಾನಿಕ ಧರ್ಮ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಾರೆ: ಸುನಿತಾ

0
8

ಕನ್ನಡಮ್ಮ ಸುದ್ದಿ, ಧಾರವಾಡ – ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಯಬೇಕು. ಮಕ್ಕಳು ಎಲ್ಲವನ್ನು ವಿಜ್ಞಾನದ ಕಣ್ಣಿನಿಂದ ನೋಡುವಂತಾಗಬೇಕು ದೊಡ್ಡವರು ಹೇಳಿದರು ಎಂಬ ಮಾತ್ರಕ್ಕೆ ಆ ವಿಷಯವನ್ನು ನಂಬದೇ ಕೂಲಂಕುಷವಾಗಿ ಯೋಚಿಸಿ ಆಲೋಚಿಸಿ ಪ್ರಯೋಗ ಮಾಡಿ ಸತ್ಯವನ್ನು ಅರಿತುಕೊಳ್ಳಬೇಕು ಎಂದು ತಾಲೂಕು ಪಂಚಾಯತ ಅಧ್ಯಕ್ಷ ಶ್ರೀಮತಿ ಸುನಿತಾ ಮ್ಯಾಗಿನಮನಿ ಅಭಿಪ್ರಾಯಪಟ್ಟರು.
ಕಲಘಟಗಿ ತಾಲೂಕಿನ ಗುಡ್ಡದಹೂಲಿಕಟ್ಟಿ ಗ್ರಾಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಭಾರತ ಜ್ಞಾನ ವಿಜ್ಞಾನ ಸಮಿತಿ ಸಹಯೋಗದಲ್ಲಿ ನಡೆದ ಮಕ್ಕಳ ವಿಜ್ಞಾನ ಹಬ್ಬ ಉದ್ಘಾಟಿಸಿ ಮಾತನಾಡಿದರು. ಮಕ್ಕಳ ವಿಜ್ಞಾನ ಹಬ್ಬ ಆಯೋಜಿಸಿರುವುದು ಇದು ಊರ ಹಬ್ಬದ ವಾತಾವರಣ ಆಗಲು ಕಾರಣವಾಗಿದೆ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಜಾನನ ಮನ್ನಿಕೇರಿ ಮಾತನಾಡಿ, ಇಂದು ವಿಜ್ಞಾನ ನಮ್ಮ ನಿತ್ಯ ಜೀವನದಲ್ಲಿ ಹಾಸುಹೊಕ್ಕಾಗಿದೆ. ವಿಜ್ಞಾನವಿಲ್ಲದೇ ಜೀವನವಿಲ್ಲ. ನಮ್ಮ ದೈನಂದಿನ ಪ್ರತೀ ಕೆಲಸದಲ್ಲು ನಮಗೆ ಗೊತ್ತಿದ್ದೋ ಗೊತ್ತಿಲ್ಲದೇಯೋ ವಿಜ್ಞಾನವನ್ನು ಬಳಸುತ್ತಿದ್ದೇವೆ. ಹತ್ತು ಹಲವು ಹಬ್ಬಗಳ ಹಾಗೆ ಇದು ವಿಜ್ಞಾನ ಹಬ್ಬ. ವಿಜ್ಞಾನದ ಹಲವು ಕುತೂಹಲಕಾರಿ ಅಂಶಗಳನ್ನು ಪ್ರಯೋಗ, ಚಟುವಟಿಕೆ, ಆಟ, ಹಾಡಿನ ಮೂಲಕ ತಿಳಿದುಕೊಳ್ಳುವ ಹಬ್ಬ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪೂರ ಮಾತನಾಡಿ ಮಕ್ಕಳಲ್ಲಿ ಸಹಜ ಕುತೂಹಲವಿದೆ. ಆ ಕುತೂಹಲವನ್ನು, ಪ್ರಶ್ನೆಗಳನ್ನು ಇಲ್ಲಿ ಉತ್ತರಿಸುವ ಪ್ರಯತ್ನ ಮಾಡಲಾಗುತ್ತದೆ. ಇಲ್ಲಿ ಮಕ್ಕಳು ವೈಜ್ಞಾನಿಕ ಧರ್ಮವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಾರೆ ಎಂದು ಹೇಳಿದರು.
ಡಾ.ಲಿಂಗರಾಜ ರಾಮಾಪೂರ ಪ್ರಾಸ್ತಾವಿಕ ಮಾತನಾಡಿದರು. ಎಸ್.ಡಿ.ಎಂ.ಸಿ ಅಧ್ಯಕ್ಷ ಜಿ.ಎಸ್. ಹಿರೇಮಠ, ಗ್ರಾಮ ಪಂಚಾಯತ ಸದಸ್ಯರಾದ ಬಸವಂತರಾವ್, ದಾವಲಸಾಬ, ದೇವಕ್ಕ ಪಾಟೀಲ, ಹನುಮಂತಪ್ಪ ಹೊಸಮನಿ, ಕುಬೇರಪ್ಪ ಸುಬ್ಬಣ್ಣವರ, ಶಾಂತವ್ವ ಕೊಪ್ಪದ, ಉಪನಿರ್ದೇಶಕ ಕಚೇರಿಯ ಶಿವಲೀಲಾ ಕಳಸಣ್ಣವರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ವಾಯ್.ಎಚ್.ಬಣವಿ, ತಾಲೂಕಾ ಅಧ್ಯಕ್ಷರಾದ ಎಫ್.ಎಸ್.ಹಿರೇಮಠ ಉಪಸ್ಥಿತರಿದ್ದರು. ಮಕ್ಕಳ ಹೆಜ್ಜೆ ಮಜಲು ತಂಡ, ವಾದ್ಯವೃಂದ, ಪೂರ್ಣ ಕುಂಭ ಮೆರವಣಿಗೆ ನಡೆಯಿತು. ಕೆ.ಎಮ್.ನದಾಫ ನಿರ್ವಹಿಸಿದರು. ಯು.ಎಸ್.ಬಿದರಿ ಸ್ವಾಗತಿಸಿದರು. ಹಳೇಮನಿ ವಂದಿಸಿದರು.

loading...