ಕೃಷಿಗೆ ಅದ್ಭುತ ಕೊಡುಗೆ ನೀಡಿದ ರೈತ ಜ್ಞಾನಾಭಿವೃದ್ಧಿ ಕೇಂದ್ರ

0
38

ಕನ್ನಡಮ್ಮ ಸುದ್ದಿ- ಧಾರವಾಡ: ಕೃಷಿ ಶಿP್ಪ್ಷಣ ದಿನಾಚರಣೆಯನ್ನು ಕೃಷಿ ವಿಶ್ವವಿದ್ಯಾಲಯ, ಧಾರವಾಡದ ರೈತ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಜರುಗಿತು. ಕೆನಡಾದ ಸಸ್ಕಾಟಚವನ ಎಸ್.ಕೆ ವಿಶ್ವವಿದ್ಯಾಲಯದ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಡೀನ್ ಹಾಗೂ ಪ್ರಾಧ್ಯಾಪಕರಾದ ಡಾ. ಪೇಟಾ ಬೊನಹಾಮ್ಸ್ ಸ್ಮಿಥ್ ಮತ್ತು ಯುಎಸ್ ಕೆನಡಾದ ಯುಎಸ್ ಆರ್ಟ್ಸ್ ಮತ್ತು ಸಾಯನ್ಸ್ ಕಾಲೇಜಿನ ಪ್ರಾಧ್ಯಾಪಕರಾದ ಡಾ. ರಂಗರಾಜನ್ ಭಾಗವಹಿಸಿದ್ದರು.
ಕುಲಪತಿ ಡಾ. ಮಹಾದೇವ ಚೆಟ್ಟಿ ಮಾತನಾಡಿ, ಭಾರತದ ಮೊದಲ ಕೇಂದ್ರ ಕೃಷಿ ಸಚಿವರ ಜನ್ಮದಿನದ ನೆನಪಿಗಾಗಿ ಕೃಷಿ ದಿನದ ಆಚರಣೆಯ ಮಹತ್ವದ ಬಗ್ಗೆ ವಿವರವಾಗಿ ತಿಳಿಸಿದರು. ಸ್ವತಂತ್ರ ಭಾರತದ ಮೊದಲ ಅಧ್ಯಕ್ಷ ಹಾಗೂ ಭಾರತ ರತ್ನ ಡಾ. ರಾಜೇಂದ್ರ ಪ್ರಸಾದ ಅವರು ದೇಶದ ಕೃಷಿಗೆ ನೀಡಿದ ಅದ್ಭುತ್ ಕೊಡುಗೆಗಳ ಆಧಾರದ ಮೇಲೆ ಈ ದಿನವನ್ನು ಶಿಕ್ಷಣ ದಿನವನ್ನಾಗಿ ಆಚರಿಸುವ ಮಹತ್ವದ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು. ಜಾಗತೀಕರಣ ಮತ್ತು ನಗರೀಕರಣದ ಹಿನ್ನಲೆಯಲ್ಲಿ ಯುವ ಮನಸ್ಸುಗಳನ್ನು ಪ್ರೇರೆಪಿಸುವ ಮತ್ತು ಯುವಕರನ್ನು ಕೃಷಿಯತ್ತ ಸೆಳೆಯುವ ದಿನವಾಗಿ ಈ ದಿನವನ್ನು ಆಚರಿಸಲಾಗುತ್ತದೆ ಎಂದರು.
ಡಾ. ಪೇಟಾ ಬೊನಹಾಮ್ಸ್ ಮಾತನಾಡಿ, ಸ್ಮಿಥ್ ಇಂದಿನ ಜಗತ್ತಿನಲ್ಲಿ ಉದ್ದಿಮೆ ಶೀಲತೆ ಬೆಳೆಸುವ ವಿಚಾರದಲ್ಲಿ ವಿವರಣೆ ನೀಡಿದರು. ಕೆನಡಾದ ಸಸ್ಕಾಟಚವನ ವಿಶ್ವವಿದ್ಯಾಲಯದ ವಿವಿಧ ಉದ್ಯಮಶೀಲ ಕೌಶಲ್ಯಗಳು, ಪ್ಭೆಟೆಟ್‌ಗಳು, ವಾಣಿಜ್ಯಿಕೃತ ತಂತ್ರಜ್ಞಾನಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು ಮತ್ತು ಅದು ಸ್ಥಳೀಯವಾಗಿ ಜಾಗತೀಕವಾಗಿ ಉದ್ಯಮದ ಮೇಲೆ ಪ್ರಭಾವ ಬೀರಿತು ಎಂದು ಹೇಳಿದರು.
ಸಾಮಾನ್ಯವಾಗಿ ವ್ಯವಹಾರದ ಮೇಲೆ ಮತ್ತು ವಿಶೇಷವಾಗಿ ಕೃಷಿ ಮೇಲೆ ವೇಗವಾಗಿ ಬದಲಾಗುತ್ತಿರುವ ಜಾಗತಿಕ ಸನ್ನಿವೇಶದಲ್ಲಿ ಶಿಕ್ಷಣ, ಸಂಶೋಧನೆ ಮತ್ತು ಪ್ರಭಾವದ ಮಹತ್ವವನ್ನು ಅವರು ಎತ್ತಿ ತೋರಿಸಿದರು. ಡಾ. ರಂಗರಾಜನ್ ಶ್ರೀನಿವಾಸನ್ ಅವರು ಉದ್ಯಮಶೀಲತೆ, ಸಂವಹನ ಕೌಶಲ್ಯ, ಮೃದು ಕೌಶಲ್ಯ ಸಸ್ಕಾಟಚವನದಲ್ಲಿ ಕಾರ್ಯನಿರ್ವಹಿಸುತ್ತಿರುವ ವ್ಯಾಪಾರ ಮಾಡಲ್‌ಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಪದವಿಪೂರ್ವ ವಿದ್ಯಾರ್ಥಿಗಳಿಗೆ ಉದ್ಯಮಶೀಲತೆ ಕುರಿತಾದ ಕೌಶಲ್ಯಗಳನ್ನು ಪಡೆಯಲು ಜಾಗತೀಕ ವಿನಿಮಯ ಕಾರ್ಯಕ್ರಮಗಳ ಕುರಿತು ವಿವರಿಸಿದರು. ಕೃಷಿ ಮಹಾವಿದ್ಯಾಲಯ, ಧಾರವಾಡ ವಿದ್ಯಾಧಿಕಾರಿ ಡಾ.ಬಿ.ಡಿ.ಬಿರಾದಾರ ವಂದಿಸಿದರು.

loading...