ಪಶುವೈದ್ಯೆಕೊಲೆ: 9 ವರೆಗೂ ಶವ ಸಂಸ್ಕಾರ ಬೇಡ ಹೈಕೋರ್ಟ್ ಆದೇಶ

0
12

ಹೈದರಾಬಾದ್,:ತೆಲಂಗಾಣ ಪಶುವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣದ ಎನ್ಕೌಂಟರ್ ಪ್ರಶ್ನಿಸಿ ಆರೋಪಿಗಳ ಪರವಾಗಿ ಸಲ್ಲಿಸಿದ್ದ ಮನವಿ ವಿಚಾರಣೆ ನಡೆಸಿದ ಹೈದರಾಬಾದ್ ಹೈಕೋರ್ಟ್ ಇದೆ 9 ವರೆಗೂ ಶವ ಸಂಸ್ಕಾರ ಬೇಡ ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹಗಳನ್ನು ಜೋಪಾನವಾಗಿ ಕಾಪಾಡಿ ಎಂದು ಪೊಲೀಸರಿಗೆ ನಿರ್ದೇಶನ ನೀಡಿದೆ.
ನಾಲ್ವರು ಆರೋಪಿಗಳನ್ನು ಪೊಲೀಸರು ನಕಲಿ ಎನ್ಕೌಂಟರ್ ಮೂಲಕ ಹತ್ಯೆ ಮಾಡಿದ್ದಾರೆ ಎಂದು ಕೆಲ ಮಾನವ ಹಕ್ಕುಗಳ ಹೋರಾಟಗಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ತೆಲಂಗಾಣ ಜನರಲ್ ಅಡ್ವೋಕೇಟ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಪ್ರಕರಣದ ವಿಚಾರಣೆಯನ್ನು ಇದೆ 9 ರಂದು ಮತ್ತೊಮ್ಮೆ ಕೈಗೆತ್ತಿಕೊಳ್ಳಲಿದ್ದು ಅಲ್ಲಿಯವರೆಗೂ ಮತ ದೇಹಗಳನ್ನು ಕಾಪಾಡಬೇಕು ಎಂದು ಪೊಲೀಸರಿಗೆ ಸೂಚನೆ ಕೊಟ್ಟಿದೆ.

loading...