ಬೆಳಗಾವಿ ಸ್ಮಾಟ್೯ ಸಿಟಿ ನೇಮಕಾತಿಯಲ್ಲಿ ಗೋಲ್ ಮಾಲ್ !

0
51

ಬೆಳಗಾವಿ

ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಒಂದಾದ ಸ್ಮಾಟ್೯ ಸಿಟಿ ಯೋಜನೆಯಲ್ಲಿ ಬೆಳಗಾವಿ ನಗರ ಆಯ್ಕೆಯಾಗಿ ಎರಡೂವರೆ ವರ್ಷ ಕಳೆದರೂ ಹುದ್ದೆ ನೇಮಕಾತಿಯಲ್ಲಿ ಗೋಲ್‌ಮಾಲ್ ಆಗಿರುವುದು ಬೆಳಕಿಗೆ ಬಂದಿದೆ.

ಕಳೆದ ಸೆಪ್ಟಂಬರ್‌ನಲ್ಲಿ ನೇರ ಸಂದರ್ಶನ ಕರೆದ ಬೆಳಗಾವಿ ಸ್ಮಾಟ್೯ ಸಿಟಿ ಕಂಪನಿ ಹಿರಿಯ ಲೆಕ್ಕ ವ್ಯವಸ್ಥಾಪಕರು ಹಾಗೂ ವ್ಯವಸ್ಥಾಪಕ (ನೆಟ್ವರ್ಕ್) ತಲಾ ಒಂದೊAದು ಹುದ್ದೆಗೆ ಅರ್ಜಿ ಕರೆದಿದ್ದರು. ಸೆ.೭ಕ್ಕೆ ನೇರ ಸಂದರ್ಶನ ಏರ್ಪಡಿಸಲಾಗಿತ್ತು. ಅದರಲ್ಲಿ ಹಿರಿಯ ಲೆಕ್ಕ ವ್ಯವಸ್ಥಾಪಕರು ಸಂದರ್ಶನದಲ್ಲಿ ಆಯ್ಕೆಯಾಗಿದ್ದರು. ಅವರಿಗೆ ಹುದ್ದೆಯ ಬಗ್ಗೆ ಅನುಮತಿ ಪತ್ರ ಸಹ ನೀಡಿದ್ದರು.

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಆಯ್ಕೆಯಾದ ಮೇಲೆ ಹುದ್ದೆಯ ಅನುಮತಿ ಪತ್ರದ ಮೇರೆಗೆ ಈ ಹಿಂದೆ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿದರು. ಬಳಿಕ ನವೆಂಬರ್ ೪ ರಂದು ಬೆಳಗಾವಿ ಸ್ಮಾಟ್೯ಸಿಟಿಯ ಹುದ್ದೆಗೆ ಅಧಿಕಾರ ಸ್ವೀಕರಿಸಲು ಹೋದ ಸಂದರ್ಭದಲ್ಲಿ ಸ್ಮಾರ್ಟ್ಸಿಟಿಯ ಕಾರ್ಯದರ್ಶಿ ನಿಮ್ಮ ಹುದ್ದೆಯನ್ನು ತಡೆಹಿಡಿಯಲಾಗಿದೆ ಎಂದು ಹೇಳಿದರು.

ಅನುಮತಿ ಪತ್ರ ಸ್ಮಾಟ್೯ಸಿಟಿಯ ಹಿರಿಯ ಅಧಿಕಾರಿಗಳ ಸಭೆ ನಡೆಸದೆ ಪತ್ರ ನೀಡಿದ್ದರಾ ಎಂಬ ಪ್ರಶ್ನೆ ಉದ್ಬವವಾಗಿದೆ. ಖಾಸಗಿ ಕಂಪನಿಗೆ ರಾಜೀನಾಮೆ ನೀಡಿ ಸ್ಮಾರ್ಟ್ಸಿಟಿಯಲ್ಲಿ ಕೆಲಸ ಸಿಗದೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಯ ಕುಟುಂಬ ಬೀದಿಗೆ ಬಂದಿದೆ. ಸ್ಮಾರ್ಟ್ಸಿಟಿಯ ಆಡಳಿತ ಮಂಡಳಿಯ ಈ ತೀರ್ಮಾನಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

loading...