ನ್ಯೂಜಿಲೆಂಡ್‍ನ ವೈಟ್ ದ್ವೀಪದಲ್ಲಿ ಜ್ವಾಲಾಮುಖಿ ಸ್ಫೋಟ

0
2

ವೆಲ್ಲಿಂಗ್‍ಟನ್- ನ್ಯೂಜಿಲೆಂಡ್‍ನ ವೈಟ್ ದ್ವೀಪದಲ್ಲಿ ಪ್ಲೆಂಟಿ ಕೊಲ್ಲಿಗೆ 50 ಕಿ.ಮೀ ದೂರದಲ್ಲಿ ಸ್ಥಳೀಯ ಕಾಲಮಾನ ಸೋಮವಾರ ಮಧ್ಯಾಹ್ನ 2.15ಕ್ಕೆ(ಭಾರತೀಯ ಕಾಲಮಾನ ಸೋಮವಾರ ಮಧ್ಯರಾತ್ರಿ 1.15ಕ್ಕೆ) ಜ್ವಾಲಾಮುಖಿಯೊಂದು ಸ್ಫೋಟಿಸಿದೆ.
ವೈಟ್ ದ್ವೀಪದಲ್ಲಿ ಜ್ವಾಲಾಮುಖಿ ಸ್ಫೋಟಿಸಿರುವುದರಿಂದ ಆ ಪ್ರದೇಶದಲ್ಲಿ ವ್ಯಾಪಕ ಹಾನಿ ಸಂಭವಿಸಿದೆ ಎಂದು ನ್ಯೂಜಿಲೆಂಡ್ ಭೂವಿಜ್ಞಾನ ಸಂಸ್ಥೆ ಟ್ವಿಟರ್‍ನಲ್ಲಿ ತಿಳಿಸಿದೆ.
ಭೂ ವಿಜ್ಞಾನ ತಜ್ಞರೊಂದಿಗೆ ಪರಿಸ್ಥಿತಿಯನ್ನು ಪರಿಶೀಲಿಸುತ್ತಿರುವುದಾಗಿ ಸಂಸ್ಥೆ ತಿಳಿಸಿದೆ.
ಜ್ವಾಲಾಮುಖಿ ಸಂಭವಿಸಿದ ಪ್ರದೇಶದಿಂದ ಸ್ಥಳೀಯ ಆಡಳಿತ ಮತ್ತು ತುರ್ತು ಸೇವೆಗಳಿ ಸಮಗ್ರ ಸುರಕ್ಷತಾ ಸಲಹಾ ಎಚ್ಚರಿಕೆ ಬರಬೇಕಿದ್ದು, ಅದರಂತೆ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಸಂಸ್ಥೆ ಹೇಳಿದೆ.
ಇಡೀ ನ್ಯೂಜಿಲೆಂಡ್ ಪೈಕಿ ವೈಟ್ ದ್ವೀಪದಲ್ಲಿ ಜ್ವಾಲಾಮುಖಿ ಸ್ಫೋಟಿಸುತ್ತಲೇ ಇರುತ್ತದೆ. 2013ರಲ್ಲಿ ಕೊನೆಯ ಬಾರಿಗೆ ಜ್ವಾಲಾಮುಖಿ ಸ್ಫೋಟಿಸಿತ್ತು.

loading...